Bigg Boss: ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುವವರು ಇವರೇ...
ಬಿಗ್‌ಬಾಸ್ ಸೀಸನ್ 11 ಒಂಬತ್ತನೇ ವಾರ ಏಳು ಜನ ನಾಮಿನೇಟ್ ಆಗಿದ್ದಾರೆ. ನಾಮಿನೇಟ್ ಆಗಿರುವವರಲ್ಲಿ ಮನೆಗೆ ಹೋಗುವವರು ಯಾರು? ಈ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಹಾಗಾದರೆ ಈ ವಾರ ಟಾಪ್ ಅಲ್ಲಿ ಇರುವವರು ಯಾರು? ಮನೆ ಬಿಟ್ಟು ಹೊರಗೆ ಬರಲು ಸಿದ್ದವಾಗಿರುವ ಟಾಪ್ ಸ್ಪರ್ಧಿ ಯಾರು? ಇದರ ಬಗ್ಗೆ ಮಾಹಿತಿ ಪಡೆಯೋಣ.
ಮೋಕ್ಷಿತಾ ಹಾಗೂ ತ್ರಿವಿಕ್ರಮ್ ನಡುವೆ ಬಿಗ್‌ಬಾಸ್ ಆರಂಭವಾದಾಗಿನಿಂದಲೂ ಗಲಾಟೆ ನಡೆಯುತ್ತಿದೆ. ಮೋಕ್ಷಿತಾ ಹಾಗೂ ತಮ್ಮ ನಡುವೆ ಒಂದು ಬಾಂಡಿಂಗ್ ಚೆನ್ನಾಗಿರಲಿ ಎನ್ನುವ ಕಾರಣಕ್ಕೆ ತ್ರಿವಿಕ್ರಮ್ ಅವರು ಮೋಕ್ಷಿತಾ ಅವರೊಂದಿಗೆ ಫ್ರೆಂಡ್‌ಶಿಪ್ ಕೂಡ ಮಾಡಿಕೊಂಡಿದ್ದರು. ಆದರೆ ಅದನ್ನು ಮೋಸ ಅಂತ ಹೇಳಿಕೊಂಡು ಮೋಕ್ಷತಾ ಅವರು ಲೂಸ್ ಟಾಕ್ ಅನ್ನು ಮಾಡ್ತಾರೆ.

ಇನ್ನೂ ಮೋಕ್ಷತಾ ರಾಣಿ ಆಗಿರುವಾಗ ಕ್ಯಾಪ್ಟನ್ ಟಾಸ್ಕ್‌ಯಿಂದ ಮಂಜು ಅವರನ್ನು ಹೊರಗಡೆ ಇಡುತ್ತಾರೆ. ಈ ಕಾರಣಕ್ಕೆ ತ್ರಿಮಿಕ್ಷಮ್ ಅವರು 'ಥೂ ಇಂತಹ ಗೂಸುಂಬಿ ಆಟಗಳನ್ನು ಆಡುವುದಾಗಿದ್ದರೆ ನಾವು ಇನ್ನೊಂದು ಥರ ಆಟಗಳನ್ನು ಆಡ್ತಾಯಿದ್ವಿ' ಎಂದು ಹೇಳುತ್ತಾರೆ. ಮತ್ತೊಂದು ಕಡೆ ಮಂಜು ಅವರ ಪರವಾಗಿಯೂ ಕೂಡ ತ್ರಿವಿಕ್ರಮ್ ಮಾತನಾಡುತ್ತಾರೆ. ಮಂಜು ಗಂಡಸಿನ ಜೊತೆಗಾದರೂ ಮಾತನಾಡುತ್ತಿದ್ದಾರೆ. ತಲೆ ಇಲ್ದೆ ಇರೋರ ಬಳಿ ನಾನೇನ್ ಮಾತನಾಡಲಿ ಅಂತನೂ ತ್ರಿವಿಕ್ರಮ್ ಹೇಳುತ್ತಾರೆ.
ಇನ್ನೂ ಚೈತ್ರಾ ಕುಂದಾಪುರ್ ಅವರು ತ್ರಿವಿಕ್ರಮ್‌ಗೆ ಕೇಳ್ತಾರೆ ಮೋಕ್ಷಿತಾ ಅವರ ಬಳಿ ನೀವು ಈ ಮಾತು ಮಾತನಾಡಬಹುದಿತ್ತಲ್ವಾ ಎಂದು. ಅದಕ್ಕೆ ತ್ರಿವಿಕ್ರಮ್ ಅವರು ತುಂಬಾ ಕೆಟ್ಟಪದವನ್ನು ಬಳಕೆ ಮಾಡ್ತಾರೆ. ಅದಕ್ಕೆ ಬಿಗ್‌ಬಾಸ್ ಮನೆಯಲ್ಲಿ ಬೀಪ್.. ಸೌಂಡ್ ಕೂಡ ಬರುತ್ತದೆ. ಈ ಒಂದು ವಿಚಾರವನ್ನು ತೆಗೆದುಕೊಂಡು ಕಿಚ್ಚ ಸುದೀಪ್ ಅವರು ತ್ರಿವಿಕ್ರಮ್ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.

ನನ್ನ ಮುಂದೆ ಆ ಒಂದು ಪದವನ್ನು ಹೇಳಿ ಎಂದು ಕಿಚ್ಚ ಸುದೀಪ್ ಅವರು ತ್ರಿವಿಕ್ರಮ್ ಅವರನ್ನು ಕೇಳುತ್ತಾರೆ. ಇದಕ್ಕೆ ತ್ರಿವಿಕ್ರಮ್ ಅವರು ಕೋಪ ಬಂದಾಗ ಬಾಯಿ ತಪ್ಪಿ ಹೀಗೆ ಮಾತನಾಡಿದೆ ಅಂತ ಹೇಳಿ ಕ್ಷಮೆ ಹೇಳಿದ್ದಾರೆ. ಇದಕ್ಕಾಗಿ ಸುದೀಪ್ ಎಚ್ಚರಿಕೆಯನ್ನು ನೀಡಿದ್ದಾರೆ. ಏನಾದರೂ ಹೆಚ್ಚು ಕಡಿಮೆ ಆದರೆ ಬಿಗ್‌ಬಾಸ್ ಮನೆಯಿಂದ ಹೊರಗಡೆ ಕಳುಹಿಸುವುದಾಗಿಯೂ ಹೇಳಿದ್ದಾರೆ.
ಈಗಾಗಲೇ ಹೆಣ್ಣು ಮಕ್ಕಳ ಬಗ್ಗೆ ನಿಂದನೆ ಮಾಡಿ ಬಿಗ್‌ಬಾಸ್ ಮನೆಯಿಂದ ಹೊರಗಡೆ ಹೋದ ಜಗದೀಶ್ ಬಗ್ಗೆ ಕೂಡ ಸುದೀಪ್ ಮಾತನಾಡಿದ್ದಾರೆ. ಹೆಣ್ಣುಮಕ್ಕಳಿಗೆ ಗೌರವ ಮರೆಯಾದೆ ಕೊಡಬೇಕು ಅಂತ ಹೇಳಿ ಗಜದೀಶ್ ಅವರನ್ನು ಹೊರಗಡೆ ಕಳುಹಿಸಿದ್ರಿ, ಇದೀಗ ತ್ರಿಮಿಕ್ರಮ್ ಅವರೂ ಕೂಡ ಮೋಕ್ಷಿತಾಗೆ ಕೆಟ್ಟ ಪದವನ್ನು ಬಳಸಿದ್ದಾರೆ. ಹಾಗಾದರೆ ತ್ರಿವಿಕ್ರಮ್ ಕೂಡ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುತ್ತಾರಾ? ತ್ರಿವಿಕ್ರಮ್ ಅವರನ್ನೂ ಬಿಗ್‌ಬಾಸ್ ಮನೆಯಿಂದ ಹೊರಗೆ ಕಳುಹಿಸಲಾಗುತ್ತಾ ಅಂತ ಕಾದು ನೋಡಬೇಕಿದೆ.
ಸದ್ಯ ಕಿಚ್ಚ ಸುದೀಪ್ ಅವರು ತ್ರಿವಿಕ್ರಮ್ ಅವರಿಗೆ ಕೆಲ ಖಡಕ್ ಕ್ಲಾಸ್ ತೆಗೆದುಕೊಂಡು ಈ ವಿಚಾರವನ್ನು ಇಲ್ಲಿಗೆ ಕೈ ಬಿಟ್ಟಿದ್ದಾರೆ. ಇಲ್ಲಿ ಮೋಕ್ಷಿತಾ ಅವರದ್ದು ತಪ್ಪಾ? ತ್ರಿವಿಕ್ರಮ್ ಅವರದ್ದು ತಪ್ಪಾ ಅಂತ ಪ್ರಶ್ನೆ ಬಂದರೆ, ತ್ರಿವಿಕ್ರಮ್ ಅವರು ಒಬ್ಬ ಒಳ್ಳೆಯ ಆಟಗಾರ. ಮೋಕ್ಷಿತಾ ಅವರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ತ್ರಿವಿಕ್ರಮ್ ಅವರನ್ನು ಆಟದಿಂದ ಹೊರಗಡೆ ಇಡಲು ನೊಡುತ್ತಾರೆ. ಇನ್ನೂ ತ್ರಿವಿಕ್ರಮ್ ಅವರು ಈ ರೀತಿ ಮಾತನಾಡುವುದು ಕೂಡ ತಪ್ಪು. ಇದಕ್ಕಾಗಿ ಸುದೀಪ್ ಅವರು ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ.
ಗೌತಮಿ-ಮಂಜುಗೆ ಸುದೀಪ್ ತರಾಟೆ
ಅಲ್ಲದೆ ಶನಿವಾರದ ಸಂಚಿಕೆಯಲ್ಲಿ ಸುದೀಪ್ ಅವರು ಉಗ್ರಂ ಮಂಜು, ಗೌತಮಿ ಅವರಿಗೂ ತರಾಟೆ ತೆಗೆದುಕೊಂಡಿದ್ದಾರೆ. ನೀವು ಅಣ್ಣ ತಂಗಿ ಅಂದುಕೊಂಡು ಓಡಾಡ್ತೀರಾ. ಆಮೇಲೆ ಅವರು ನಂಬಿಕೆಗೆ ಮೋಸ ಮಾಡಿದ್ರು ಅಂತೀರಾ. ನಿಮ್ಮನ್ನು ನಂಬಿ ಅಂದವರು ಯಾರು? ಇಲ್ಲಿ ನೀವು ಒಬ್ಬರಿಗೋಸ್ಕರ ಮತ್ತೊಬ್ಬರು ಆಡಲು ಬಂದಿದ್ದೀರಾ? ಅಥವಾ ನಿಮಗೋಸ್ಕರ ನೀವು ಆಡಲು ಬಂದಿದ್ದೀರಾ ಎಂದು ಸುದೀಪ್ ಫೇವರಿಸಮ್ ಗೇಮ್‌ಗೆ ಕಡಿವಾಣ ಹಾಕಿದ್ದಾರೆ. ಮಂಜು ಅವರು ಟಾಸ್ಕ್ ವೇಳೆ ಗೌತಮಿ ಪರವಾಗಿ ನಡೆದುಕೊಂಡ ರೀತಿಯನ್ನು ಇಡೀ ಬಿಗ್‌ಬಾಸ್ ವೀಕ್ಷರಿಗೆ ಗೊತ್ತೇ ಇದೆ. ಇದಕ್ಕೆ ಸುದೀಪ್ ತಕ್ಕ ಉತ್ತರ ನೀಡಿದ್ದಾರೆ. ಇದೇ ರೀತಿ ಮುಂದುವರೆದರೆ ಮನೆಯಿಂದ ನೀವೇ ಎಲ್ಲರಿಗಿಂತ ಮೊದಲು ಹೊರಬರಬಹುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಹಾಗಾದರೆ ಈ ವಾರ ಬಿಗ್‌ಬಾಸ್ ಮನೆಯಿಂದ ಯಾರು ಹೊರಬರುತ್ತಾರೆ ಅನ್ನೋದು ಕೂಡ ಕುತೂಹಲ ಮೂಡಿದೆ. ಹಾಗಾದರೆ ಬಿಗ್‌ಬಾಸ್ ಮನೆಯಿಂದ ಹೊರಬರುವ ಸ್ಪರ್ಧಿ ಯಾರು? ಈ ಬಗ್ಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ಈ ವಾರ ಐಶ್ವರ್ಯ ಬಿಗ್‌ಬಾಸ್ ಮನೆಯಿಂದ ಔಟ್
ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುವವರು ಐಶ್ವರ್ಯ ಸಿಂಧೋಗಿ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಈ ವಾರು ಐಶ್ವರ್ಯ ಆಟ ಆಡಿದ್ದಕ್ಕಿಂತ ಶಿಶಿರ್ ಜೊತೆಗೆ ಟೈಮ್ ಪಾಸ್ ಮಾಡಿದ್ದೇ ಹೆಚ್ಚು. ಹೀಗಾಗಿ ಅವರು ಬಿಗ್‌ಬಾಸ್ ಮನೆಯಿಂದ ಹೊರಬರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಅಲ್ಲದೆ ಈ ವಾರ ಬಿಗ್‌ಬಾಸ್ ಮನೆಯಿಂದ ಯಾರು ಹೊರ ಬಂದರು ಅನ್ನೋದನ್ನು ಬಿಗ್‌ಬಾಸ್ ಸಿಕ್ರೇಟ್ ಆಗೇ ಇಟ್ಟಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ತಾವು ಮನೆಯಿಂದ ಹೊರಬರುವುದಾಗಿ ಕಣ್ಣೀರು ಹಾಕಿದ್ದ ಶೋಭಾ ಶೆಟ್ಟಿ ಬಿಗ್‌ಬಾಸ್ ಮನೆಯ ಬಾಗಿಲು ಓಪನ್ ಮಾಡಿದ ಬಳಿಕ ಉಲ್ಟಾ ಹೊಡೆದಿದ್ದಾರೆ.
ಇನ್ನೂ ನಾಮಿನೇಟ್ ಆದವರಲ್ಲಿ ಐಶ್ವರ್ಯ ಅವರೇ ಈ ವಾರ ಮನೆಯಿಂದ ಹೊರಬರುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಐಶ್ವರ್ಯ ಅವರು ಮನೆಯಿಂದ ಹೊರಬರುವ ಲಕ್ಷಣದ ಜೊತೆಗೆ ಹಲವಾರು ಕಾರಣಗಳೂ ಇವೆ. ಬಿಗ್‌ಬಾಸ್ ಇದನೆಲ್ಲಾ ಪರಿಗಣಿಸಿ ಐಶ್ವರ್ಯ ಅವರನ್ನು ಮನೆಯಿಂದ ಹೊರಗೆ ಕಳುಹಿಸಬಹುದು. ಯಾರು ಹೊರ ಹೋಗುತ್ತಾರೆ ಅನ್ನೋದು ಸೋಮವಾರದ ಸಂಚಿಕೆಯಲ್ಲಿ ಗೊತ್ತಾಗಲಿದೆ.












Click it and Unblock the Notifications