ಸರ್ಕಾರಿ ಬಸ್ ಓಡಿಸಿದ ನಟ ಬಾಲಯ್ಯ, ಆರಾಟ & ಕಿರುಚಾಟದ ವಿಡಿಯೋ ವೈರಲ್! Viral Video
Viral Video: ನಟ ಹಾಗೂ ರಾಜಕಾರಣಿ ಬಾಲಯ್ಯ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನ ಈ ವಿಡಿಯೋ ನೋಡಿ ಖುಷಿಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ವೈರಲ್ ಆಗಿರುವ ಟ್ರಾವೆಲ್ ವಿಡಿಯೋದಲ್ಲಿ ಇದೂ ಒಂದು ಅಂತಾ ನೆಟ್ಟಿಗರು ಹೇಳುತ್ತಿದ್ದಾರೆ. ನಟ ಬಾಲಯ್ಯ ಅವರ ಕ್ರೇಜ್ ಎರಡು ತೆಲುಗು ರಾಜ್ಯಗಳಲ್ಲಿ ಸಿಕ್ಕಾಪಟ್ಟೆ ಇದೆ. ಅಲ್ಲದೇ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲೂ ಅವರ ಅಭಿಮಾನಿಗಳು ಇದ್ದಾರೆ. ಇದೀಗ ಅವರು ಸರ್ಕಾರಿ ಬಸ್ ಚಾಲನೆ ಮಾಡಿದ್ದು ಆ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ನಟ ಬಾಲಯ್ಯ ಕೇವಲ ನಟ ಮಾತ್ರವಲ್ಲ. ರಾಜಕಾರಣಿ ಹಾಗೂ ನಿರ್ಮಾಪಕರೂ ಹೌದು. ಜೈ ಬಾಲಯ್ಯ.. ಜೈ ಜೈ ಬಾಲಯ್ಯ ಎಂದು ಅವರ ಅಭಿಮಾನಿಗಳು ಸದಾ ಆರಾಧಿಸುವ ಡೈಲಾಗ್ ಈ ರೀತಿ ಮಾಸ್ ಮೆಚ್ಚುಗೆ ಇರುವ ನಟ ಬಾಲಯ್ಯ ಅವರು ಸರ್ಕಾರಿ ಬಸ್ ಚಾಲನೆ ಮಾಡಿ.. ಹೆಂಗಿದೆ ಅಂತಾ ಕೇಳಿದ್ದಾರೆ. ಆದರೆ, ಅವರ ಕೋಪ ಹಾಗೂ ಆಕ್ರೋಶವನ್ನು ತಿಳಿದುಕೊಂಡಿರುವವರು ಬಾಲಯ್ಯ ಗಾಡಿ ಓಡಿಸುವಾಗ ಭಯದಿಂದಲೇ ಪಕ್ಕ ಕುಳಿತಿರುವುದು ಸಹ ವಿಡಿಯೋದಲ್ಲಿ ಇದೆ.

ಬಾಲಯ್ಯ ಅವರು ಹಿಂದೂಪುರದ ಶಾಸಕರೂ ಹೌದು. ಇತ್ತೀಚಿಗೆ ಆಂಧ್ರಪ್ರದೇಶದಲ್ಲಿ ಕರ್ನಾಟಕ ಮಾದರಿಯಲ್ಲೇ ಮಹಿಳೆಯರಿಗೆ ಉಚಿತ ಸಾರಿಗೆ ಸೇವೆ ಕಲ್ಪಿಸಲಾಗಿದೆ. ಈಚೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಜಂಟಿಯಾಗಿ ಆಂಧ್ರಪ್ರದೇಶದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಗೆ ಚಾಲನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಯ್ಯ ಅವರು ಸಹ ಸರ್ಕಾರಿ ಬಸ್ ಓಡಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Orey 😂😂🤣🤣😭😭
— Vamc Krishna (@lyf_a_zindagi) August 15, 2025
Balayya bus naduputhunte ee scene ye gurthochindi 😭😭#NandamuriBalaKrishna drives bus in Hindupur #AndhraPradesh pic.twitter.com/MM2iP16Nmj
ನಟ ಮತ್ತ ರಾಜಕಾರಣಿ ಬಾಲಯ್ಯ ಅವರ ವಿಡಿಯೋವನ್ನು ನೋಡಿರುವ ನೆಟ್ಟಿಗರು ಬಾಲಯ್ಯ ಎಲ್ಲದಕ್ಕೂ ರೆಡಿ ಇರ್ತಾರೆ ಅಂತಾ ಹೇಳ್ತಿದ್ದಾರೆ. ಆದರೆ ಬಾಲಯ್ಯ ಅವರ ಮುಖದಲ್ಲಿ ಎದ್ದು ಕಾಣಿಸುತ್ತಿರುವ ಭಯದ ದೃಶ್ಯಗಳು ಈ ವೈರಲ್ ವಿಡಿಯೋದಲ್ಲಿ ಇದೆ. ಬಸ್ ಚಾಲನೆ ಮಾಡುತ್ತಲ್ಲೇ ಬಾಲಯ್ಯ ಅವರು ನಾನು ಹೆಂಗೆ ಡ್ರೈವ್ ಮಾಡ್ತೀನಿ ಅಂತಾ ಕೇಳಿದ್ದು ಅದಕ್ಕೆ ಅವರ ಅಭಿಮಾನಿಗಳು ಹಾಗೂ ಬಸ್‌ನಲ್ಲಿದ್ದ ಪ್ರಯಾಣಿಕರು.. ಅಣ್ಣಾ ಸೂಪರ್.. ಸೂಪರ್ ಚೆನ್ನಾಗಿ ಗಾಡಿ ಓಡಿಸುತ್ತೀರಾ ಅಂತಾ ಹೇಳಿದ್ದಾರೆ. ಆದರೆ ಅವರ ಮುಖದಲ್ಲಿರುವ ಭಯ ಮಿಶ್ರಿತ ನಗುವಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ.












Click it and Unblock the Notifications