ನಟಿ ರಮ್ಯಾ ಕೃಷ್ಣನ್ ಡಿವೋರ್ಸ್‌?: ಪತಿಯಿಂದ ದೂರಾದ್ರಾ ಬಾಹುಬಲಿ ನಟಿ? ಉತ್ತರ ಇಲ್ಲಿದೆ

ಒಂದು ಕಾಲಕ್ಕೆ ಬಹು ಭಾಷಾ ನಟಿಯರಾಗಿ ಭಾರತದ ಸ್ಟಾರ್ ನಟಿಯರ ಪಟ್ಟಿಯಲ್ಲಿ ಹೆಸರು ಗಳಿಸಿಕೊಂಡವರು ಅನೇಕರು. ಸಮಯ ಕಳೆದಂತೆ ಅನೇಕರು ತಮ್ಮ ಜನಪ್ರಿಯತೆ ಕಳೆದುಕೊಂಡು ತೆರೆ ಮರೆಗೆ ಸರಿದರು. ಆದರೆ ಅಂದಿಗೂ ಇಂದಿಗೂ ಅದೇ ಚಾರ್ಮ್‌ ಉಳಿಸಿಕೊಂಡವರಲ್ಲಿ ನಟಿ ರಮ್ಯಾ ಕೃಷ್ಣನ್ ಅಗ್ರ ಸ್ಥಾನದಲ್ಲಿದ್ದಾರೆ. ರಮ್ಯಾ ಕೃಷ್ಣನ್ ಎವರ್‌ಗ್ರೀನ್‌ ಬಹುಬೇಡಿಕೆಯ ನಟಿಯಾಗಿ ವೃತ್ತಿ ಬದುಕನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ವೈಯಕ್ತಿಕ ಜೀವನವನ್ನೂ ಬಹಳ ಸುಂದರವಾಗಿ ಕಟ್ಟಿಕೊಂಡಿರುವ ರಮ್ಯಾ ಕೃಷ್ಣನ್ ಅವರ ದಾಂಪತ್ಯ ಜೀವನದ ಬಗ್ಗೆ ಗಾಳಿ ಸುದ್ದಿಯೊಂದು ಹರಿದಾಡುತ್ತಿದೆ. ರಮ್ಯಾ ಕೃಷ್ಣನ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ ನಿರ್ದೇಶಕ ಕೃಷ್ಣ ವಂಶಿಯಿಂದ ಬೇರೆಯಾಗುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಲೇ ಇದೆ.

Bahubali Actress Ramya Krishnan Husband Krishna Vamsi Responded to Divorce News

2003ರಲ್ಲಿ ರಮ್ಯಾ ಕೃಷ್ಣನ್ ಹಾಗೂ ಕೃಷ್ಣ ವಂಶಿ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ರಿತ್ವಿಕ್ ಎಂಬ ಒಬ್ಬ ಪುತ್ರನಿದ್ದಾನೆ. ರಮ್ಯಾ ಕೃಷ್ಣನ್ ನಟಿಯಾಗಿ ಯಶಸ್ಸು ಕಂಡಿದ್ದರೆ ನಿರ್ದೇಶಕ ಕೃಷ್ಣ ವಂಶಿ ನಿರ್ದೇಶನದಲ್ಲಿ ಸಾಕಷ್ಟು ಸಾಧಿಸಿದ್ದಾರೆ. ಹೀಗಾಗಿ ಇಬ್ಬರು ಒಂದೇ ಕ್ಷೇತ್ರದಲ್ಲಿರುವುದರಿಂದ ವೈಯಕ್ತಿಕ ಜೀವನವನ್ನೂ ಬಹಳ ಸುಂದರವಾಗಿ ರೂಪಿಸಿಕೊಂಡಿದ್ದರು. ಆದರೆ ಏಕಾಏಕಿ ರಮ್ಯಾ ಕೃಷ್ಣನ್ ಹಾಗೂ ನಿರ್ದೇಶಕ ಕೃಷ್ಣ ವಂಶಿ ವಿಚ್ಛೇದನದ ಸುದ್ದಿ ಮುನ್ನೆಲೆಗೆ ಬಂದಿತ್ತು.

ರಮ್ಯಾ ಕೃಷ್ಣನ್ ಹಾಗೂ ಕೃಷ್ಣ ವಂಶಿ ಬೇರೆಯಾಗುತ್ತಿದ್ದಾರೆ ಎನ್ನುವ ಸುದ್ದಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಂಚನ ಸೃಷ್ಟಿಸಿತ್ತು. ಆದರೆ ಇದೀಗ ಈ ಗಾಳಿ ಸುದ್ದಿಯ ಬಗ್ಗೆ ಸ್ವತ: ರಮ್ಯಾ ಕೃಷ್ಣನ್ ಪತಿ ಕೃಷ್ಣ ವಂಶಿ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ನಿಜ. ಆದರೆ ಸಾಧ್ಯವಾದಾಗಲೆಲ್ಲ ನಾವು ಪರಸ್ಪರ ಭೇಟಿಯಾಗುತ್ತಲೇ ಇರುತ್ತೇವೆ. ರಮ್ಯಾ ಕೃಷ್ಣ ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡನ್ನೂ ನಿಭಾಯಿಸುವಂತಹ ಗುಣವುಳ್ಳವರು. ಬುದ್ಧಿವಂತ ಮಹಿಳೆ ಎಂದು ಪತ್ನಿಯನ್ನು ಹೊಗಳಿದ್ದಾರೆ. ಈ ಮೂಲಕ ತಮ್ಮ ನಡುವೆ ಯಾವುದೇ ಬಿರುಕಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

Bahubali Actress Ramya Krishnan Husband Krishna Vamsi Responded to Divorce News

ರಮ್ಯಾ ಕೃಷ್ಣನ್ ಡಿವೋರ್ಸ್ ವದಂತಿ ಸೃಷ್ಟಿಯಾಗಲು ಕಾರಣವೇನು?

ರಮ್ಯಾ ಕೃಷ್ಣನ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಡಲು ಕಾರಣ ಕೂಡ ಇದೆ. ರಮ್ಯಾ ಕೃಷ್ಣನ್ ಹಾಗೂ ಕೃಷ್ಣ ವಂಶಿ ಇಬ್ಬರೂ ಕಳೆದ ಹಲವು ವರ್ಷಗಳಿಂದ ಬೇರೆ ಬೇರೆ ಕಡೆಗಳಲ್ಲಿ ವಾಸ ಮಾಡುತ್ತಿದ್ದಾರೆ. ರಮ್ಯಾ ಕೃಷ್ಣನ್ ಚೆನ್ನೈನಲ್ಲಿ ವಾಸವಿದ್ದರೆ, ಕೃಷ್ಣ ವಂಶಿ ಹೈದರಾಬಾದ್‌ನಲ್ಲಿ ವಾಸವಿದ್ದಾರೆ. ಹೀಗೆ ದೂರ ದೂರ ವಾಸ ಮಾಡುತ್ತಿರುವುದೇ ಡಿವೋರ್ಸ್ ವದಂತಿಗೆ ಕಾರಣ ಎನ್ನಲಾಗಿದೆ. ಆದರೆ ವೃತ್ತಿ ಜೀವನದ ದೃಷ್ಟಿಯಿಂದ ಇಬ್ಬರೂ ಬೇರೆ ಬೇರೆ ಕಡೆಗಳಲ್ಲಿ ವಾಸವಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+