Rashmika Mandanna: ರಶ್ಮಿಕಾ-ವಿಜಯ್ ಮದುವೆ ಬಳಿಕ ದೂರ ಆಗ್ತಾರೆ: ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ
ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರು ಗುಟ್ಟಾಗಿ ನಿಶ್ವಿತಾರ್ಥ ಮಾಡಿಕೊಂಡಿದ್ದು, ಫೆಬ್ರವರಿಯಲ್ಲಿ ಮದುವೆ ಕೂಡ ಫಿಕ್ಸ್ ಆಗಿದೆ ಎಂದು ವರದಿಯಾಗಿದೆ. ರಶ್ಮಿಕಾ ತನ್ನ ಬಹುಕಾಲದ ಗೆಳೆಯ ವಿಜಯ್ ಅವರನ್ನು ಮದುವೆಯಾಗುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇದರ ನಡುವೆ ಖ್ಯಾತ ಜ್ಯೋತಿಷಿ ರಶ್ಮಿಕಾ-ವಿಜಯ್ ಮದುವೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಟಾಲಿವುಡ್, ತಮಿಳು, ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಟಾಲಿವುಡ್‌ನಲ್ಲಿ ಟಾಪ್ ನಟಿಯಾಗಿ ಮಿಂಚಿರುವ ಅವರು ವಿಜಯ್ ದೇವರಕೊಂಡ ಜೊತೆಗೆ ಎರಡು ಸಿನಿಮಾದಲ್ಲಿ ನಟಿಸಿದ್ದರು. ಆಗಿನಿಂದಲೂ ಇಬ್ಬರ ನಡುವೆ ಸ್ನೇಹ, ಪ್ರೀತಿ, ಡೇಟಿಂಗ್‌ವರೆಗೂ ಮುಂದುವರಿದಿತ್ತು. ವಿದೇಶಕ್ಕೆ ತೆರಳಿ ಮೋಜು ಮಸ್ತಿ ಕೂಡ ಮಾಡಿದ್ದರು.

ಇಬ್ಬರೂ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಇರುವಾಗಲೇ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿವರೆಗೆ ಇಬ್ಬರೂ ತಮ್ಮ ಎಂಗೇಜ್‌ಮೆಂಟ್ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಅವರ ಆಪ್ತರು ಎಂಗೇಜ್‌ಮೆಂಟ್ ನಡೆದಿರುವುದನ್ನು ಖಚಿತಪಡಿಸಿದ್ದಾರೆ. ಫೆಬ್ರವರಿಯಲ್ಲಿ ಮದುವೆ ನಿಶ್ಚಯವಾಗಿದೆ ಎಂದೂ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸದ್ಯ ಎಲ್ಲೆಡೆ ಇದೇ ವಿಚಾರದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿವೆ. ಎಲ್ಲರೂ ಮದುವೆ ನೋಡುವ ಕಾತುರದಲ್ಲಿ ಖ್ಯಾತ ಜ್ಯೋತಿಷಿ ಭಯಾನಕ ಭವಿಷ್ಯ ನುಡಿದಿದ್ದಾರೆ.
ಹೌದು, ಸೆಲೆಬ್ರಿಟಿ ಜ್ಯೋತಿಷಿ ಎಂದೇ ಕರೆಸಿಕೊಂಡಿರುವ ವೇಣುಸ್ವಾಮಿ ರಶ್ಮಿಕಾ ಮದುವೆ ಬಗ್ಗೆ ಶಾಕಿಂಗ್ ಭವಿಷ್ಯವೊಂದನ್ನು ನುಡಿದಿದ್ದಾರೆ. ವಿಜಯ್ ಅವರ ಜಾತಕದ ಬಗ್ಗೆ ಮಾತನಾಡಿರುವ ಅವರು, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದುವೆಯ ನಂತರ ಹೆಚ್ಚು ದಿನಗಳವರೆಗೆ ಒಟ್ಟಿಗೆ ಇರುವುದಿಲ್ಲ ಎಂದು ಬಾಂಬ್ ಸಿಡಿಸಿದ್ದಾರೆ. ಇದಕ್ಕೂ ಮೊದಲು ಯೂಟ್ಯೂಬ್ ಚಾನೆಲ್‌ನಲ್ಲಿ ರಶ್ಮಿಕಾ ಅವರನ್ನು ವಿಜಯ್ ಅವರನ್ನು ಮದುವೆಯಾಗಬೇಡಿ ಎಂದು ವೇಣುಸ್ವಾಮಿ ಹೇಳಿದ್ದರು.
ಪರಿಹಾರ ಮಾಡಿದ್ರೆ ಸರಿ ಹೋಗುತ್ತೆ
ಅವರ ದಾಂಪತ್ಯದಲ್ಲಿ ಹಲವು ನ್ಯೂನತೆಗಳಿದ್ದು, ಇಬ್ಬರೂ ಮದುವೆಯಾದ ನಂತರ ವಿವಾದಗಳಿಗೆ ಕಾರಣವಾಗುತ್ತಾರೆ ಎಂದಿದ್ದರು. ಈಗ ಜಾತಕ ತಿದ್ದುಪಡಿ ಮಾಡಿಕೊಂಡರೆ ಅವರ ದಾಂಪತ್ಯ ಜೀವನ ಚೆನ್ನಾಗಿರುತ್ತದೆ, ಉಳಿದದ್ದು ಕರ್ಮದ ಫಲ ಎಂದು ಮಾತ್ರ ಹೇಳಬಲ್ಲೆ ಎಂದಿದ್ದಾರೆ. ನಾನು ಹೇಳಿದ ಪರಿಹಾರಗಳನ್ನು ಮಾಡಿದರೆ ಅವರ ದಾಂಪತ್ಯ ಜೀವನ ಸರಿಯಾಗಿರುತ್ತೆ, ನಂತರ ಯಾರ ಕರ್ಮ ಎಂದು ವೇಣು ಸ್ವಾಮಿ ಹೇಳಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ನಿಶ್ಚಿತಾರ್ಥದೊಂದಿಗೆ, ವೇಣು ಸ್ವಾಮಿ ಅವರ ವಿಡಿಯೋ ಮತ್ತೆ ಟ್ರೆಂಡಿಂಗ್ ಆಗಿದೆ.












Click it and Unblock the Notifications