ಸ್ಟಾರ್ ನಟನ ಪುತ್ರನೊಂದಿಗೆ ಖ್ಯಾತ ನಟಿಯ ಪ್ರೈವೇಟ್ ಫೋಟೋ ಲೀಕ್
ಕನ್ನಡ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಅಭಿನಯಿಸುತ್ತಿರುವ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಅವರು ಸುದ್ದಿಯಲ್ಲಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ನಟ ಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದ ನಟಿ ಅನುಪಮಾ ಪರಮೇಶ್ವರನ್ ಅವರ ಖಾಸಗಿ ಫೋಟೋ ಲೀಕ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನುಪಮಾ ಅವರ ಈ ಫೋಟೋ ಕಂಡು ಅವರ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ. ಈ ಖಾಸಗಿ ಫೋಟೋದಲ್ಲಿ ಅನುಪಮಾ ಅವರೊಂದಿಗೆ ಖ್ಯಾತ ನಟ ಪುತ್ರ ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಇಂಟಿಮೇಟ್ ಫೋಟೋ ಎಲ್ಲೆಡೆ ಹರಿದಾಡುತ್ತಿದ್ದು, ಈ ಬಗ್ಗೆ ಗುಸುಗುಸು ಕೇಳಿಬರುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ಅನುಪಮಾ ಪರಮೇಶ್ವರನ್ ಮತ್ತು ತಮಿಳಿನ ಖ್ಯಾತ ನಟ ವಿಕ್ರಮ್ ಅವರ ಮಗ ಧ್ರುವ್ ವಿಕ್ರಮ್ ಅವರ ಖಾಸಗಿ ಫೋಟೋ ವೈರಲ್ ಆಗಿದ್ದು, ಇದರಲ್ಲಿ ಇಬ್ಬರೂ ಲಿಪ್‌ಲಾಕ್ ಮಾಡಿಕೊಂಡು ಮೈಮರೆತಿದ್ದಾರೆ. ಈ ವೈರಲ್ ಫೋಟೋ ಬಗ್ಗೆ ಅನುಪಮಾ ಅಥವಾ ಧ್ರುವ್ ಇಲ್ಲಿವರೆಗೆ ಯಾವುದೇ ಕಾಮೆಂಟ್ ಮಾಡಿಲ್ಲ.

ಮೊದಲಿಗೆ ಈ ಫೋಟೋ ಸ್ಪಾಟಿಫೈ ಪ್ಲೇಲಿಸ್ಟ್‌ನಲ್ಲಿ ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳು ಅನುಪಮಾ ಮತ್ತು ಧ್ರುವ್ ನಡುವಿನ ಸಹಯೋಗದ ಪ್ಲೇಲಿಸ್ಟ್‌ನಲ್ಲಿ ಈ ಫೋಟೋ ಕಂಡು ಶಾಕ್ ಆಗಿದ್ದಾರೆ. ಇದರಲ್ಲಿ ಇಬ್ಬರೂ ಲಿಪ್‌ಲಾಕ್ ಮಾಡಿರುವುದು ಕಂಡು ನಿಬ್ಬೆರಗಾಗಿದ್ದಾರೆ. ಅಭಿಮಾನಿಗಳು ತಕ್ಷಣವೇ ಈ ಕಿಸ್ ಫೋಟೋ ಅವರ ಮುಂಬರುವ ಚಿತ್ರ "ಬೈಸನ್" ಸಿನಿಮಾದ ಪ್ರಮೋಷನ್ ಗಿಮಿಕ್ ಇರಬಹುದಾ ಎಂದೂ ಹೇಳಲಾಗುತ್ತಿದೆ.
ಇನ್ನೂ ಕೆಲವರು ಇದು ಬೇಕಂತಲೇ ಲೀಕ್ ಮಾಡಿರುವ ಫೋಟೋ, ಉದ್ದೇಶಪೂರಿತ ಸೋರಿಕೆ ಎಂದು ಊಹಿಸಿದ್ದಾರೆ. ಆದರೆ ಇತರರು ಈ ಜೋಡಿ ಎಷ್ಟು ಅದ್ಭುತವಾಗಿ ಕಾಣುತ್ತಿದೆ ಎಂದು ಮೆಚ್ಚುಗೆಯೂ ವ್ಯಕ್ತಪಡಿಸಿದ್ದಾರೆ. ಇದು ಒಂದು ವೇಳೆ ನಿಜವೇ ಆಗಿದ್ದರೆ ಅವರು ಅತ್ಯಂತ ಈಗಿನ ಹಾಟ್ ಜೋಡಿ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ. ಅನುಪಮಾ ಮತ್ತು ಧ್ರುವ ಇಬ್ಬರೂ ಈ ಖಾಸಗಿ ಫೋಟೋ ಲೀಕ್ ಹಾಗೂ ಅದು ಹುಟ್ಟುಹಾಕಿದ ವದಂತಿಗಳ ಬಗ್ಗೆ ಇಲ್ಲಿಯವರೆಗೆ ಮೌನವಾಗಿದ್ದಾರೆ. ಇಬ್ಬರೂ ಕೂಡ ಯಾವುದೇ ಹೇಳಿಕೆ ಅಥವಾ ಕಾಮೆಂಟ್ ಅನ್ನು ಮಾಡಿಲ್ಲ. ಹಾಗಾಗಿ ಈ ವದಂತಿಗೆ ಇನ್ನೂ ರೆಕ್ಕೆಪುಕ್ಕ ಹುಟ್ಟಿಕೊಂಡಿದೆ.

ತಮಿಳು ಸೂಪರ್‌ಸ್ಟಾರ್ ಚಿಯಾನ್ ವಿಕ್ರಮ್ ಅವರ ಮಗ ಧ್ರುವ ವಿಕ್ರಮ್ ಅವರ ಮುಂಬರುವ ಚಿತ್ರ ಬೈಸನ್‌ನಲ್ಲಿ ಅನುಪಮಾ ಕೂಡ ನಟಿಸುತ್ತಿದ್ದು, ಈ ಸಿನಿಮಾ ಪ್ರಚಾರಕ್ಕಾಗಿ ಫೋಟೋ ಲೀಕ್ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ಮಾರಿ ಸೆಲ್ವರಾಜ್ ನಿರ್ದೇಶಿಸುತ್ತಿದ್ದು, ಪಾ ರಂಜಿತ್ ನಿರ್ಮಿಸಿದ್ದಾರೆ. ಧ್ರುವ ಮತ್ತು ಅನುಪಮಾ ಜೊತೆಗೆ, ಈ ಚಿತ್ರದಲ್ಲಿ ರಾಜಿಶಾ ವಿಜಯನ್, ಲಾಲ್, ಅಮೀರ್, ಪಶುಪತಿ ಮತ್ತು ಅನುರಾಗ್ ಅರೋರಾ ಸೇರಿದಂತೆ ದೊಡ್ಡ ತಾರಾಗಣವೇ ಇದೆ.












Click it and Unblock the Notifications