Anupama Gowda: ನನ್ನ ಮದುವೆಗೆ ನನ್ನನ್ನೂ ಕರೆಯಿರಿ: ಎಂಗೇಜ್‌ಮೆಂಟ್‌ ಸುದ್ದಿ ಹಬ್ಬಿಸಿದವರಿಗೆ ನಿರೂಪಕಿ ಅನುಪಮಾ ಗೌಡ ಕ್ಲಾರಿಟಿ

ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ವದಂತಿಗಳು ಹರಡುವುದು ಹೊಸದೇನಲ್ಲ. ಆದರೆ, ಅಂತಹ ವದಂತಿಗಳಿಗೆ ನಟಿ ಅನುಪಮಾ ಗೌಡ ನೀಡಿರುವ ಪ್ರತಿಕ್ರಿಯೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ತಮ್ಮ ಎಂಗೇಜ್‌ಮೆಂಟ್ ಮತ್ತು ಮದುವೆ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಅನುಪಮಾ ಬಹಳ ವ್ಯಂಗ್ಯವಾಗಿ ಮತ್ತು ಚತುರತೆಯಿಂದ ತಿರುಗೇಟು ನೀಡಿದ್ದಾರೆ.

ಕಳೆದ ಎರಡು ದಿನಗಳಿಂದ ಅನುಪಮಾ ಗೌಡ ಅವರಿಗೆ ನಿಶ್ಚಿತಾರ್ಥವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು "ಎರಡು ದಿನದ ಹಿಂದೆ ಎಂಗೇಜ್‌ಮೆಂಟ್‌ ಆಗಿದೆ ಅಂತ ಹೇಳ್ತಿದ್ದೀರ, ಆದರೆ ಇಮಿಡಿಯೇಟ್‌ ಆಗಿ ಮದುವೆ ಮಾಡಿಸೋದಕ್ಕೆ ಹೋಗಬೇಡಿ. ಯಾಕೆಂದರೆ, ಜನರಿಗೆ ಸ್ವಲ್ಪ ಡೌಟ್‌ ಆಗುತ್ತೆ. ಈಗಲೇ ಪೋಸ್ಟ್‌ ಮಾಡಿದ್ರೆ ಅದು ಚೆನ್ನಾಗಿ ಅನಿಸಲ್ಲ" ಎಂದು ಗಾಸಿಪ್ ಹಬ್ಬಿಸುವವರ ಕಾಲೆಳೆದಿದ್ದಾರೆ.

Anupama Gowda

ಸುಳ್ಳು ಸುದ್ದಿ ಮಾಡುವವರಿಗೆ ಟಿಪ್ಸ್ ನೀಡುವ ಧಾಟಿಯಲ್ಲಿ ಮಾತನಾಡಿರುವ ಅವರು, "ಒಂದೆರಡು ತಿಂಗಳು ಬಿಟ್ಟು ಪೋಸ್ಟ್‌ ಮಾಡಿ. ಆಗ ನಿಮಗೆ ಒಳ್ಳೆಯ ಟ್ರಾಕ್ಷನ್‌ ಸಿಗುತ್ತೆ, ಜನ ಎಲ್ಲಾ ನೋಡ್ತಾರೆ ಮತ್ತು ಶೇರ್ ಮಾಡುತ್ತಾರೆ. ನಮಗೆ ಟ್ರೆಡಿಷನಲ್‌ ಔಟ್‌ಫಿಟ್‌ ಎಲ್ಲ ಹಾಕಿ ಮದುವೆ ಪೋಸ್ಟ್ ಕ್ರಿಯೇಟ್ ಮಾಡಿ. ಆಮೇಲೆ ಎಲ್ಲ ಕಡೆ ಪೋಸ್ಟ್ ಮಾಡಬಹುದು" ಎಂದು ವ್ಯಂಗ್ಯವಾಡಿದ್ದಾರೆ.

ಎಐ ಬಳಸಿ ಫೋಟೋ ಕ್ರಿಯೇಟ್ ಮಾಡಿ

ಇತ್ತೀಚೆಗೆ ತಮಗೆ ನಿಶ್ಚಿತಾರ್ಥವಾಗಿದೆ ಎಂಬ ಸುದ್ದಿಗಳಿಗೆ ಪ್ರತಿಕ್ರಿಯಿಸಿದ ಅವರು, ಸುದ್ದಿ ಮಾಡುವವರ ಕಾಲೆಳೆದಿದ್ದಾರೆ. ಮುಂದಿನ ಬಾರಿ ಸುದ್ದಿಯ ಜೊತೆಗೆ ಒಂದು ಒಳ್ಳೆಯ ಇಮೇಜ್ ಕ್ರಿಯೇಟ್ ಮಾಡಿ. ನಮಗೆ ಉಂಗುರ ಹಾಕುವ ರೀತಿಯ ಫೋಟೋ ಸೃಷ್ಟಿ ಮಾಡಿ. ಈಗ ಹೇಗಿದ್ದರೂ ಎಐ ತಂತ್ರಜ್ಞಾನ ಬಂದಿದೆ, ಅದನ್ನು ಬಳಸಿ ಫೋಟೋ ಮಾಡಿ. ಆಗ ನಮಗೂ ಇನ್ನೂ ಖುಷಿ ಆಗುತ್ತದೆ ಎಂದು ಅನುಪಮಾ ನಗುತ್ತಲೇ ಟಾಂಗ್ ನೀಡಿದ್ದಾರೆ.

Anupama Gowda

"ನನ್ನ ಮದುವೆಗೆ ನನ್ನನ್ನೇ ಕರೆಯಿರಿ"

ಇಷ್ಟಕ್ಕೆ ನಿಲ್ಲಿಸದ ಅನುಪಮಾ, "ಸಾಧ್ಯವಾದರೆ ನನ್ನ ಮತ್ತು ರಾಘವ್‌ನ ಮದುವೆಗೆ ನಮ್ಮನ್ನೇ ಕರೆಯಿರಿ. ಖಂಡಿತವಾಗಿಯೂ ನಾವು ಬರ್ತೀವಿ. ಪೇಜ್‌ ರೀಚ್‌ ಆಗಲಿ ಅನ್ನೋ ಕಾರಣಕ್ಕೆ ಬೇರೆಯವರ ಪರ್ಸನಲ್‌ ಲೈಫ್‌ನಲ್ಲಿ ಇಷ್ಟೊಂದು ಆಸಕ್ತಿ ತೋರಿಸ್ತೀರ ಅಲ್ವಾ? ನನ್ನ ಮದುವೆಯಲ್ಲಿ ಎಷ್ಟು ಇಂಟ್ರೆಸ್ಟ್‌ ತೋರಿಸ್ತೀರ ಅಂತ ನೋಡೋದಕ್ಕೆ ಆಸೆ ಇದೆ. ದಯಮಾಡಿ ನಮ್ಮನ್ನ ಇನ್ವೈಟ್‌ ಮಾಡಿ" ಎಂದು ಹೇಳುವ ಮೂಲಕ ಬಿಸಿಮುಟ್ಟಿಸಿದ್ದಾರೆ. ಅನುಪಮಾ ಗೌಡ ಅವರ ಈ ಕೌಂಟರ್‌ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಸುಳ್ಳು ಸುದ್ದಿ ಹಬ್ಬಿಸುವವರಿಗೆ ಈ ಮೂಲಕ ಖಡಕ್ ಸಂದೇಶ ಕೊಟ್ಟಿದ್ದಾರೆ. ಅನುಪಮಾ ಗೌಡ ಅವರ ಈ 'ಎಐ' ಮತ್ತು 'ಟ್ರೆಡಿಷನಲ್ ಔಟ್ ಫಿಟ್' ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ. ಸುಳ್ಳು ಸುದ್ದಿ ಹಬ್ಬಿಸುವವರಿಗೆ ಇದೊಂದು ಹೊಸ ತರಹದ ಖಡಕ್ ಸಂದೇಶ ಎನ್ನುತ್ತಿದೆ ಅವರ ಅಭಿಮಾನಿ ಬಳಗ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+