ದರ್ಶನ್‌ಗೆ ಮತ್ತೊಂದು ಆಘಾತ! ದಾಖಲಾಯ್ತು ಇನ್ನೊಂದು ದೂರು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಒಂದು ವರ್ಷದ ಹಿಂದಿನ ಹಳೆ ಪ್ರಕರಣವೊಂದಕ್ಕೆ ಮರುಜೀವ ಬಂದಿದ್ದು, ಮತ್ತೆ ಓಪನ್ ಆಗುವ ಸಾಧ್ಯತೆ ಇದೆ.
ಕೊಲೆಗೂ ನನಗೂ ಸಂಬಂಧವೇ ಇಲ್ಲ ಎನ್ನುತ್ತಿರುವ ದರ್ಶನ್ ಮತ್ತು ಗ್ಯಾಂಗ್‌ನ ಮತ್ತೊಂದು ಮುಖದ ಅನಾವರಣ ಆಗುತ್ತಿದೆ. ನಿರ್ಮಾಪಕ ಭರತ್ ಎನ್ನುವವರು ದರ್ಶನ್ ವಿರುದ್ಧ ಕೊಲೆ ಬೆದರಿಕೆ ಆರೋಪ ಮಾಡಿದ್ದು ದೂರು ನೀಡಿದ್ದಾರೆ.

ಭರತ್-ದರ್ಶನ್ ನಡುವಿನ ಸಂಭಾಷಣೆಯ ಹಳೆಯ ಆಡಿಯೋ ಸದ್ಯ ವೈರಲ್ ಆಗುತ್ತಿದೆ. ಆಪ್ತ ಗೆಳೆಯನ ಸಿನಿಮಾ ಸಂಬಂಧ ದರ್ಶನ್ ನಿರ್ಮಾಪಕರಿಗೆ ಜೀವ ಬೆದರಿಕೆ ಹಾಕಿದ್ದಾರೆ.
ನಿರ್ಮಾಪಕ ಭರತ್ ಹೇಳಿದ್ದೇನು?
ನಿರ್ಮಾಪಕ ಭರತ್ 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಎನ್ನುವ ಸಿನಿಮಾಗೆ ಬಂಡವಾಳ ಹಾಕಿದ್ದರು. ಈ ಸಿನಿಮಾದಲ್ಲಿ ನಟ ದರ್ಶನ್ ಆಪ್ತ ಸ್ನೇಹಿತ ನಟನೆ ಮಾಡುತ್ತಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಲಾಗಿತ್ತು. ನಾಯಕ ತನ್ನ ಸ್ನೇಹಿತ ಎನ್ನುವ ಕಾರಣಕ್ಕೆ ದರ್ಶನ್ ಭರತ್‌ಗೆ ಬೆದರಿಕೆ ಹಾಕಿದ್ದರು ಎಂದು ನಿರ್ಮಾಪಕ ಭರತ್ ಹೇಳಿದ್ದಾರೆ.
ದೂರು ಕೊಟ್ಟಿದ್ದ ಭರತ್
ಕರೆ ಮಾಡಿ ಬೆದರಿಕೆ ಹಾಕಿದ್ದ ದರ್ಶನ್ ವಿರುದ್ಧ ಪೊಲೀಸರಿಗೆ ಭರತ್ ದೂರು ನಿಡಿದ್ದರು. ಆದರೆ ಕೆಂಗೇರಿ ಪೊಲೀಸರು ಎನ್‌ಸಿಆರ್ ಮಾಡಿ ಪ್ರಕರಣ ಮುಗಿಸಿದ್ದರು. ಕೇಸ್ ವಿಚಾರದಲ್ಲಿ ನನ್ನ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ ಎಂದರು.
ನಾನು ದೂರು ಕೊಟ್ಟಾಗ ತಮ್ಮ ಪ್ರಭಾವ ಬಳಸಿ ಮುಚ್ಚಿಹಾಕಿದ್ದರು. ನನ್ನ ಮೇಲೆ ಎರಡು ಬಾರಿ ಅಟ್ಯಾಕ್ ಮಾಡಲಾಗಿತ್ತು. ನನಗೆ ಯಾರೂ ವೈರಿಗಳಿಲ್ಲ, ನನ್ನ ಮೇಲೆ ದಾಳಿ ಮಾಡಿದ್ರೆ ಅದು ದರ್ಶನ್ ಗ್ಯಾಂಗ್ ಮಾತ್ರ. ಇಂದು ಆಗಿರುವ ಅನಾಹುತಕ್ಕೆ ದರ್ಶನ್ ಸುತ್ತ ಇರುವವರೇ ಕಾರಣ ಎಂದಿದ್ದಾರೆ.
ಭದ್ರತೆ ಬೇಕು ಅಂದಿರುವ ಭರತ್
ಭರತ್ ಈಗ ಮತ್ತೆ ಪೊಲೀಸರ ಮೊರೆ ಹೋಗಿದ್ದಾರೆ. ಕೆಂಗೇರಿ ಎಸ್‌ಐ ಚಿತ್ರದುರ್ಗಕ್ಕೆ ಹೋಗಿದ್ದು, ಬಂದ ಮೇಲೆ ಭದ್ರತೆ ಯಾಕೆ ಬೇಕು ಎಂದು ಹೇಳುತ್ತೇನೆ. ಕಮೆಂಟ್ ಮಾಡಿದವರಿಗೂ ಕೂಡ ದರ್ಶನ್ ಗ್ಯಾಂಗ್ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.
Oo my god, Producer bharath just misss 🙏🏼#DrPuneethrajkumar👑 pic.twitter.com/fxDJzlct3I
— ಅನಭಿಷಿಕ್ತ 👑 (@Mstlohithcult) June 14, 2024
ವೈರಲ್ ಆಗುತ್ತಿರುವ ಆಡಿಯೋ
ನಟ ದರ್ಶನ್ ಮತ್ತು ಭರತ್ ನಡುವಿನ ಆಡಿಯೋ ಸದ್ಯ ವೈರಲ್ ಆಗುತ್ತದೆ. ಸಿನಿಮಾ ಮುಗಿಸದೇ ಇದ್ದರೆ ನಿನ್ನನ್ನು ಭೂಮಿ ಮೇಲೆ ಇಲ್ಲದಂತೆ ಮಾಡುತ್ತೇನೆ ಎನ್ನುವ ದರ್ಶನ್ ಧ್ವನಿಯನ್ನು ಕೂಡ ಕೇಳಬಹುದು.












Click it and Unblock the Notifications