Anchor Jhanvi: ಎರಡನೇ ಮದುವೆ ಬಗ್ಗೆ ಯಾವುದೇ ಮುಚ್ಚುಮರೆಯಿಲ್ಲದೆ ಮಾತನಾಡಿದ ಖ್ಯಾತ ನಿರೂಪಕಿ ಜಾಹ್ನವಿ; ಭಾರೀ ವೈರಲ್
ಉದ್ಯಮಿಗಳು, ಸಿನಿ ಸ್ಟಾರ್‌ಗಳು, ರಾಜಕೀಯ ನಾಯಕರು, ನಿರೂಪಕ, ನಿರೂಪಾಕಿಯರ ವಿವಾಹ ಹಾಗೂ ವಿಚ್ಛೇದನಗಳಂತಹ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುಬಿಡುತ್ತವೆ. ಹಾಗೆಯೇ ಇದೀಗ ಖ್ಯಾತ ನಿರೂಪಕಿ ಮತ್ತು ನಟಿಯಾಗಿ ಗುರುತಿಸಿಕೊಂಡಿರುವ ಜಾಹ್ನವಿ ಅವರು ಎರಡನೇ ಮದುವೆ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ. ಹಾಗಾದ್ರೆ ಏನು ಹೇಳಿದ್ದಾರೆಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಜಾಹ್ನವಿ ಅವರ ಎರಡನೇ ವಿವಾಹದ ಬಗ್ಗೆ ಮೊದಲಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಮೊದಲಿನಿಂದಲೂ ದೊಡ್ಡ ಮಟ್ಟದಲ್ಲಿ ಸುದ್ದಿ ಹರಿದಾಡಿತ್ತು. ಇದೀಗ ಅವರೇ ಈ ಬಗ್ಗೆ ಮಾತನಾಡಿ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನ ಮಾಡಿದ್ದಾರೆ.

ಸದ್ಯ ಅವರು ಪತಿಯಿಂದ ದೂರ ಆಗಿದ್ದು, ಸಿಂಗಲ್ ಪೇರೆಂಟ್ ಆಗಿ ಮಗನೊಂದಿಗೆ ವಾಸ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಅವರು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲಿರುತ್ತರೆ. ಅಲ್ಲದೆ, ಅವರ ವೈಯಕ್ತಿಕ ಜೀವನದ ಬಗ್ಗೆ ಬರುವ ಟೀಕೆಗಳನ್ನು ಸಹ ಎದುರಿಸುತ್ತಲಿದ್ದಾರೆ. ಇದೀಗ ಅವರ ಎರಡನೇ ಮದುವೆ ಬಗ್ಗೆ ಕೇಳಿಬಂದ ಸುದ್ದಿಗೆ ಪ್ರತಿಕ್ರಿಯೆ ನೀಡಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಈಗಾಗಲೇ ಜಾಹ್ನವಿ ತಮ್ಮ ಮಾಜಿ ಪತಿ ಕಾರ್ತಿಕ್ ಅವರಿಂದ ವಿಚ್ಛೇದ ಪಡೆದಿದ್ದು ಯಾಕೆ ಎಂಬುದರ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದಾರೆ. ಇದೀಗ ಅವರ ಮಾಜಿ ಪತಿ ಮತ್ತೊಂದು ವಿವಾಹ ಆಗಿ ಮಗುವೊಂದನ್ನು ಹೊಂದಿದ್ದಾರೆ ಎಂಬ ವಿಚಾರವನ್ನ ಜಾಹ್ನವಿ ಅವರೇ ರಿವೀಲ್ ಮಾಡಿದ್ದಾರೆ. ಮಾಜಿ ಪತಿ ಬಗ್ಗೆ ಮಾತನಾಡಿದ ಜಾಹ್ನವಿ, ಅವರು ಅವರ ಪತ್ನಿ ಮಗು ಜೊತೆ ಚೆನ್ನಾಗಿರಲಿ ಎಂದು ಹಾರೈಸಿದ್ದಾರೆ ಅಂತಾ ವಿಜಯಕರ್ನಾಟಕ ವರದಿ ಮಾಡಿದೆ.
"ಇನ್ನೂ ಈ ಕುರಿತು ಸ್ವಲ್ಪ ದಿನಗಳ ಕಾಲ ಬೇಜಾರಾಗೇ ಆಗುತ್ತದೆ ಮನಸಿಗೆ. ಆದರೆ. ಅವರ ಜೀವನ ಅವರು ನೋಡಿಕೊಳ್ಳಲೇ ಬೇಕು. ಇದೀಗ ನಾನು ಸಿಂಗಲ್ ಆಗಿ ಸಂತಸದಿಂದ ಇದ್ದೇನೆ. ಈಗ ನನಗೆ ಮಗ ಇದ್ದಾನೆ. ಅವರಿಗೂ ಅವರ ಜೀವನದಲ್ಲಿ ಯಾರೂ ಇಲ್ಲ, ಕುಟುಂಬ ಬೇಕು ಅಂತೆನಿಸಿದಾಗ, ಮುಂದುವರೆಯುವುದರಲ್ಲಿ ತಪ್ಪಿಲ್ಲ," ಎಂದು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಜಾಹ್ನವಿ ಹೇಳಿಕೊಂಡಿದ್ದರು.
ಮೊದಲಿನಿಂದಲೂ ಸಾಮಾಜಿಕ ಜಾಲತಾಣದಲ್ಲು ಜಾಹ್ನವಿ ಅವರ ಮದುವೆ ಹಲವು ಪ್ರಶ್ನೆಗಳನ್ನು ನೆಟ್ಟಿಗರು ಕೇಳತೊಡಗಿದ್ದರು. ಕೊನೆಗೂ ಈ ಬಗ್ಗೆ ಮಾತನಾಡಿದ ಜಾಹ್ನವಿ ಅವರು, "ಖಂಡಿತವಾಗಿಯೂ ಎರಡನೇ ಮದುವೆ ಆಗುವ ಯೋಚನೆ ಇಲ್ಲ. ಮೊದಲ ಮದುವೆಯಿಂದ ಒಂದೊಳ್ಳೆ ಅನುಭವ ಆಗಿದೆ. ಆದ್ದರಿಂದ ನನ್ನ ಜೀವನದಲ್ಲಿ ಮತ್ತೆ ವಿವಾಹದ ಪ್ರಶ್ನೆ ಇಲ್ಲ," ಎಂದು ಹೇಳಿಕೊಂಡಿದ್ಧಾರೆ.
"ಈಗ ನಾನು ತುಂಬಾ ಚೆನ್ನಾಗಿದ್ದೇನೆ. ಕೆಲಸ ಮತ್ತು ನನ್ನ ಕುಟುಂಬದ ಮೇಲೆ ಹೆಚ್ಚು ಗಮನವಹಿಸಿದ್ದೇನೆ. ಯಾವತ್ತೂ ಸಹ ಮತ್ತೊಂದು ಮದುವೆ ಆಗಬೇಕೆಂದು ಅನಿಸಿಲ್ಲ. ಮಗನ ಭವಿಷ್ಯವನ್ನು ರೂಪಿಸಬೇಕು. ಅವನಿಗೆ ಹೆಚ್ಚು ಪ್ರೀತಿ ಮತ್ತು ಸಮಯ ಕೊಡಬೇಕು ಎಂಬ ಯೋಚನೆ ಬಿಟ್ಟರೆ ಎರಡನೇ ಮದುವೆ ಬಗ್ಗೆ ಯಾವ ಯೋಚನೆಯಿಲ್ಲ. ನಾನು ಸಿಂಗಲ್ ಆಗಿಯೇ ತುಂಬಾ ಸಂತೋಷವಾಗಿದ್ದೇನೆ," ಎಂದು ಹೇಳಿಕೊಂಡಿದ್ದಾರೆ.
ನನ್ನ ಜೀವನದಲ್ಲಿ ಯಾರೋ ಒಬ್ಬ ವ್ಯಕ್ತಿ ಬೇಕೆಂದು ಇದುವರೆಗೂ ಅನಿಸಿಲ್ಲ. ಇದಕ್ಕೆ ಕಾರಣವೇ ನನ್ನ ಮಗ. ಮಗ ಈಗಾಗಲೇ 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ, ದೊಡ್ಡವನಾಗಿದ್ದಾನೆ, ಮತ್ತೊಬ್ಬ ವ್ಯಕ್ತಿಗೆ ನನ್ನ ಜೀವನದಲ್ಲಿ ಬರಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿ ಗಮನ ಸೆಳೆದಿದ್ದಾರೆ.
ಜಾಹ್ನವಿ ಅವರು ಮೊದಲಿಗೆ ಸುದ್ದಿ ವಾಹಿನಿಗಳಲ್ಲಿ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಬಳಿಕ ಅವರು ನಂತರ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದು, ಬಳಿಕ ಚಲನಚಿತ್ರಗಳಲ್ಲಿ ನಟನೆ ಮಾಡಲು ಪ್ರಾರಂಭಿಸಿದರು. ಇದೀಗ ಸದ್ಯ ಅವರು ಚಂದನ ವಾಹಿನಿಯನಿ ಕಾರ್ಯನಿರ್ವಹಿಸುತ್ತಿದ್ದಾರೆ.












Click it and Unblock the Notifications