ಒಂದು ಶೋಗೆ 1 ಲಕ್ಷ ಚಾರ್ಜ್ ಮಾಡುತ್ತೇನೆ: ಸಂಪಾದನೆ ಬಗ್ಗೆ ಬಾಯ್ಬಿಟ್ಟ ಚೈತ್ರಾ ವಾಸುದೇವನ್
ಬೆಂಗಳೂರು, ಜುಲೈ 22: ಬಿಗ್ ಬಾಸ್ ಕನ್ನಡ ಸೀಜನ್ 7 ಸ್ಪರ್ಧಿ ಹಾಗೂ ಕನ್ನಡದ ಖ್ಯಾತ ನಿರೂಪಕಿ ಚೈತ್ರಾ ವಾಸುದೇವನ್ ಎರಡು ವರ್ಷದ ಹಿಂದೆ ರೇಂಜ್ ರೋವರ್ ಕಾರು ಖರೀದಿಸಿದ್ದರು. ಸುಮಾರು 72 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರಿಗೆ ಒಡತಿಯಾದ ಚೈತ್ರಾ ವಾಸುದೇವನ್ ಇತ್ತೀಚಿಗೆ ಅದರ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಚೈತ್ರಾ ವಾಸುದೇವನ್ ಕಾರು ಹಾಗೂ ಅವರ ಲೈಫ್ ಸ್ಟೈಲ್‌ಅನ್ನು ನೋಡಿದವರು ಅವರ ಸಂಪಾದನೆ ಬಗ್ಗೆ ಮಾತನಾಡುತ್ತಾರೆ. ನಿರೂಪಕಿಯಾಗಿ ಇಷ್ಟೆಲ್ಲಾ ಗಳಿಸಬಹುದಾ ಎನ್ನುವ ಪ್ರಶ್ನೆಗೆ ಚೈತ್ರಾ ವಾಸುದೇವನ್ ಉತ್ತರ ನೀಡಿದ್ದಾರೆ.

Rapid ರಶ್ಮಿ ಶೋನಲ್ಲಿ ಚೈತ್ರಾ ವಾಸುದೇವನ್ ತಮ್ಮ ಸಂಪಾದನೆ ಬಗ್ಗೆ ಮಾತನಾಡಿದ್ದಾರೆ. 'ಸದ್ಯ ನಾನು ಒಂದು ಶೋಗೆ ಇಷ್ಟು ಅಂತಾ ಚಾರ್ಜ್ ಮಾಡುತ್ತೇನೆ. ಕಾರ್ಪೋರೇಟ್ ಶೋಗಳಾದರೆ ಫಿಕ್ಸ್ ಪ್ರೈಸ್ ಚಾರ್ಜ್ ಮಾಡುತ್ತೇನೆ. ಮದುವೆ, ಪರಿಚಯದವರು, ಕನ್ನಡ ಸಿನಿಮಾ ಆಡಿಯೋ ಲಾಂಚ್‌ಗೆಲ್ಲಾ ಕಡಿಮೆ ಚಾರ್ಜ್ ಮಾಡುತ್ತೇನೆ. ಯಾಕೆಂದರೆ ಅವರು ನಿಗದಿತ ಬಜೆಟ್ ಹೊಂದಿರುತ್ತಾರೆ. ಇಷ್ಟು ಬಜೆಟ್ ಅಂತಾರೆ ಅಷ್ಟಕ್ಕೆ ಮಾಡುತ್ತೇನೆ.
ಬೆಂಗಳೂರು ಹೊರಗಿನ ಕಾರ್ಯಕ್ರಮಗಳಿಗೆ ಹೆಚ್ಚು ಚಾರ್ಜ್ ಮಾಡುತ್ತೇನೆ. ಒಂದು ತಿಂಗಳಲ್ಲಿ ಇಷ್ಟು ದುಡಿಯಬೇಕು ಎನ್ನುವ ಟಾರ್ಗೆಟ್ ಹೊಂದಿದ್ದೇನೆ. ಯಾಕೆಂದರೆ ನನ್ನನ್ನು ನಂಬಿ ಒಂದಿಷ್ಟು ಜನ ಇದ್ದಾರೆ. ಅವರಿಗೆ ನಾನು ಸಂಬಳ ಕೊಡಲೇಬೇಕಲ್ವಾ. ನಾನು ಒಂದು ಕಾರ್ಯಕ್ರಮಕ್ಕೆ ಒಂದು ಲಕ್ಷ ಚಾರ್ಜ್ ಮಾಡುತ್ತೇನೆ. ಆದರೆ ಅವರು ನಮ್ಮ ಹತ್ತಿರ ಅಷ್ಟು ಹಣ ಇಲ್ಲ ಅಂದರೆ ನಾನು ಕಡಿಮೆಗೆ ಒಪ್ಪಿಕೊಳ್ಳುತ್ತೇನೆ. ಇಪ್ಪತೈದು-ಮೂವತ್ತು ಸಾವಿರಕ್ಕೂ ನಾನು ಕೆಲಸ ಮಾಡಿದ್ದೇನೆ. ಎಷ್ಟೊಂದು ಕನ್ನಡ ಸಿನಿಮಾಗೆ ಬಜೆಟ್ ಅಷ್ಟೇ ಇರುತ್ತದೆ. ಅದಕ್ಕೆ ನಾನು ಒಪ್ಪಿಕೊಳ್ಳುತ್ತೇನೆ.
ಆದರೆ ಒಂದು ತಿಂಗಳಲ್ಲಿ ನಾನು ಇಷ್ಟು ಉಳಿಸಬೇಕು ಎಂದು ಟಾರ್ಗೆಟ್ ಹಾಕಿಕೊಂಡಿರುತ್ತೇನೆ. ಕೆಲವು ಸೀನಿಯರ್ ನಿರೂಪಕರು ಇವತ್ತಿಗೂ ಐದು ಸಾವಿರ ರೂಪಾಯಿಗೆ ಕೆಲಸ ಮಾಡುತ್ತಾರೆ. ಅವರು ಮೊದಲಿಂದಲೂ ಅದೇ ಸಂಬಳಕ್ಕೆ ಕೆಲಸ ಮಾಡುತ್ತಾರೆ. ಅವರು ಹೆಚ್ಚಿಗೆ ಮಾಡಿಕೊಂಡಿಲ್ಲ. ಆದರೆ ದಿನದಿಂದ ಕೆಲಸದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು.

ಸೋಶಿಯಲ್ ಮೀಡಿಯಾ ಇದೆ. ಜನರ ಜೊತೆ ಸಂಪರ್ಕ ಬೆಳೆಸಿಕೊಳ್ಳಿ. ನಿಮ್ಮ ಪ್ರೊಫೈಲ್ ನೀವೆ ರೆಡಿ ಮಾಡಿಕೊಳ್ಳಿ. ಹೀಗಿದ್ದಾಗ ಕ್ಲೈಂಟ್‌ಗೆ ನೀವು ಹೇಳಬಹುದು. ನಾನು ಇಷ್ಟು ಚಾರ್ಜ್ ಮಾಡುತ್ತೇನೆ ಯಾಕೆಂದರೆ ನಾನು ಇದನೆಲ್ಲಾ ಮಾಡುತ್ತೇನೆ ಅಂತಾ ಹೇಳಿ ಎಂದು ಚೈತ್ರಾ ವಾಸುದೇವನ್ ಕೆಲಸದ ಗುಣಮಟ್ಟ ಹೆಚ್ಚಿಸಿಕೊಳ್ಳುವ ಬಗ್ಗೆ ಕೆಲವು ಟಿಪ್ಸ್‌ಗಳನ್ನು ನೀಡಿದರು.












Click it and Unblock the Notifications