Anchor Anushree: ಆಂಕರ್ ಅನುಶ್ರೀಗೆ ಕಾಡುತ್ತಿದೆ ನಿರುದ್ಯೋಗಿ‌ ಭಾವನೆ, ಕೆಲಸ ಹುಡುಕಬೇಕಂತೆ

ಕನ್ನಡದ ಖ್ಯಾತ ನಿರೂಪಕಿ ಹಾಗೂ ಕರಾವಳಿ ಚೆಲುವೆ ಅನುಶ್ರೀ ಮದುವೆ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಅನುಶ್ರೀಗೆ ಮದುವೆ ಯಾವಾಗ? ಎನ್ನುವ ಪ್ರಶ್ನೆ ಎದುರಾಗುತ್ತಲೇ ಇದೆ. ಇದೀಗ ಅನುಶ್ರೀ ಅವರ ಅಭಿಮಾನಿಗಳ ಕುತೂಹಲಕ್ಕೆ ಅನುಶ್ರೀ ಬ್ರೇಕ್‌ ಹಾಕಿದ್ದು, ಮದುವೆ ಆಗುತ್ತಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದ್ರೆ ಅನುಶ್ರೀ ಮದುವೆ ಯಾವಾಗ? ಮದುವೆ ಆಗುತ್ತಿರುವ ಹುಡುಗ ಯಾರು? ಎನ್ನುವ ಪ್ರಶ್ನೆ ಒಂದು ಕಡೆಯಾದ್ರೆ ಅನುಶ್ರೀ ಅವರಿಗೆ ನಿರುದ್ಯೋಗಿ ಸಮಸ್ಯೆ ಕಾಡುತ್ತಿದೆಯಂತೆ.

ಸೋಶಿಯಲ್‌ ಮೀಡಿಯಾದಲ್ಲಿ ಅನುಶ್ರೀ ಅವರ ವಿಡಿಯೋ ವೈರಲ್‌ ಆಗುತ್ತಿದ್ದು, ಈ ವಿಡಿಯೋದಲ್ಲಿ ಆಂಕರ್‌ ಅನುಶ್ರೀ ಅವರ ನಿರುದ್ಯೋಗದ ಬಗ್ಗೆ ಮಾತನಾಡಿದ್ದು, ಹೌದು, ನನಗೆ ಕೆಲಸ ಇಲ್ಲ. ಕೆಲಸ ಹುಡುಕಬೇಕಾಗಿದೆ ಎಂದು ಆಂಕರ್‌ ಅನುಶ್ರೀ ಅವರು ಹೇಳಿದ್ದಾರೆ. ಆಂಕರಿಂಗ್‌ ಬಿಟ್ಟು ಜೀವನಕ್ಕೆ ಏನು ಮಾಡಿಕೊಂಡಿದ್ದೀರಾ ಎಂದು ಅಭಿಮಾನಿಯೊಬ್ಬರು ಅನುಶ್ರೀ ಅವರಿಗೆ ಕಮೆಂಟ್‌ ಮಾಡಿದ್ದು, ಇದಕ್ಕೆ ಅನುಶ್ರೀ ಅವರು ನನ್ನ ಜೀವನದಲ್ಲಿ ನಾನು ಏನು ಮಾಡುತ್ತಿಲ್ಲ. ನನ್ನ ನಿರುದ್ಯೋಗಿ ಅಂದುಕೊಂಡಿದ್ದಾರೆ. ನಾನು ನಿರುದ್ಯೋಗಿ, ಕೆಲಸ ಹುಡುಕಬೇಕಾಗಿದೆ ಎಂದು ಅನುಶ್ರೀ ಅವರು ತಮಾಷೆಯಾಗಿ ಉತ್ತರಿಸಿದ್ದಾರೆ. ಇನ್ನೂ ನಿಮ್ಮ ಸಂಬಳ ಎಷ್ಟು ಎಂಬ ಪ್ರಶ್ನೆಗೆ, ನಾನು ನಿರುದ್ಯೋಗಿ ಎಂದು ಹೇಳಿದ್ದಾರೆ.

Anchor Anushree s video of her talking about unemployment goes viral

ಆಂಕರ್‌ ಅನುಶ್ರೀ ಮದುವೆ ಯಾವಾಗ?

2024ರ ಅಕ್ಟೋಬರ್‌ ತಿಂಗಳಲ್ಲಿ ತಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ತಮ್ಮ ಮದುವೆ ಬಗ್ಗೆ ಅನುಶ್ರೀ ಮಾತನಾಡಿದ್ದರು. ಮದುವೆ ಡೇಟ್‌ ರಿವೀಲ್‌ ಮಾಡುವುದಾಗಿಯೂ ಕೂಡ ಹೇಳಿಕೊಂಡಿದ್ದರು. ಅನುಶ್ರೀ ಅಪ್ಪು ಅವರ ಅಪ್ಪಟ ಫ್ಯಾನ್ ಆಗಿರುವುದರಿಂದ ಮಾರ್ಚ್‌ನಲ್ಲಿಯೇ ಮದುವೆ ಆಗುವುದಾಗಿಯೂ ಹೇಳಿಕೊಂಡಿದ್ದರು. ಇದೀಗ ಮಾರ್ಚ್‌ ಮುಗಿದರೂ ಅನುಶ್ರೀ ಕಡೆಯಿಂದ ಯಾವುದೇ ಅಪ್ಡೇಟ್‌ ಬಾರದೇ ಇದ್ದಿದ್ದನ್ನು ಕಂಡ ಫ್ಯಾನ್ಸ್‌ಗೆ ಕೊಂಚ ನಿರಾಸೆಯಾಗಿದೆ.

ಈ ಹಿಂದೆ ನಟ ನಾಗಭೂಷಣ್‌ ಮತ್ತು ನಟಿ ಮಲೈಕಾ ವಸುಪಾಲ್‌ ನಟನೆಯ ವಿದ್ಯಾಪತಿ ಸಿನಿಮಾ (ಏಪ್ರಿಲ್‌ 10) ರಿಲೀಸ್‌ ಆಗಿದೆ. ಸಿನಿಮಾ ಪ್ರಚಾರದ ಕುರಿತು ವಿದ್ಯಾಪತಿ ತಂಡ ಇನ್ಸ್ಟಾಗ್ರಾಮ್‌ ಲೈವ್‌ನಲ್ಲಿ ಆಂಕರ್‌ ಅನುಶ್ರೀ ಅವರೊಟ್ಟಿಗೆ ಸಿನಿಮಾದ ಬಗ್ಗೆ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಇದೇ ವೇಳೆ ಅನುಶ್ರೀಗೆ, ಅಕ್ಕಾ ನಿಮ್ಮ ಹುಡುಗ ಹೇಗಿರಬೇಕು" ಎಂದು ಮಲೈಕಾ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ, ಹುಡುಗ ತುಂಬಾ ರೆಸ್ಪಾನ್ಸಿಬಲ್‌ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್‌ ಬಗ್ಗೆ ರೆಸ್ಪಾನ್ಸಿಬಲ್‌ ಆಗಿದ್ರೆ ಅಷ್ಟೇ ಸಾಕು ನನಗೆ ಎಂದು ಅನುಶ್ರೀ ಅವರು ಹೇಳಿದರು.

ಮದುವೆ ಯಾವಾಗ ಎಂದು ಮಲೈಕಾ ಅನುಶ್ರೀಗೆ ಕೇಳಿದ್ದಾರೆ. ಆಗ, ಈ ವರ್ಷ ಅನುಶ್ರೀ ಮದುವೆ ಗ್ಯಾರಂಟಿ. ಈ ತಿಂಗಳ 10ನೇ ತಾರೀಖು ವಿದ್ಯಾಪತಿ ಬರ್ತಿದ್ದಾರೆ. 2025ರಲ್ಲಿ ʻಅನುಪತಿʼ ಬರಬಹುದು ಎಂದು ಇದೇ ವರ್ಷ ಮದುವೆ ಆಗುವುದಾಗಿ ಅನುಶ್ರೀ ಸುಳಿವು ನೀಡಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+