Anchor Anushree: ಸರಿಗಮಪ ವೇದಿಕೆಯಲ್ಲಿ ಅನುಶ್ರೀ ಮದುವೆ ಭವಿಷ್ಯ ನುಡಿದ ಕೊರವಂಜಿ

Anchor Anushree: ಕನ್ನಡದ ಖ್ಯಾತ ನಿರೂಪಾಕಿ ಅನುಶ್ರೀ ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಲೇ ಇದ್ದರು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸ್ವರ ಸಂಕ್ರಾಂತಿ ಕಾರ್ಯಕ್ರಮದ ವೇಳೆ ಕೊರವಂಜಿಯೊಬ್ಬರು ಅನುಶ್ರೀ ವಿವಾಹ ಯಾವಾಗ ಆಗಲಿದೆ ಎನ್ನುವ ಭವುಷ್ಯವೊಂದನ್ನು ನುಡಿದಿದ್ದಾರೆ. ಹಾಗಾದರೆ ಕೊರವಂಜಿ ಯಾರು ಹಾಗೂ ಏನೆಲ್ಲಾ ಹೇಳಿದರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರಿನ ಆರ್ಯ ಸಿಂಚನಾ ಎಂಬ ಪುಟ್ಟ ಬಾಲಕಿ ಕೊರವಂಜಿ ವೇಷ ಧರಿಸಿ ಸರಿಗಮಪ ವೇದಿಕೆಯಲ್ಲಿ ನಡೆದ ಸ್ವರ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಮೂಡಲ್‌ ಕುಣಿಗಲ್‌ ಕೆರೆ ಹಾಡನ್ನು ಅಧ್ಭುತವಾಗಿ ಹಾಡುವ ಮೂಲಕ ವೀಕ್ಷಕರ ಗಮನ ಸೆಳೆದಿದ್ದಾರೆ. ಇನ್ನೂ ಇದೇ ವೇಳೆ ಸನುಶ್ರೀ ಅವರು ಸಂಕ್ರಾಂತಿ ಹಬ್ಬದ ವಿಶೇಷತೆ ಬಗ್ಗೆ ಕೇಳುತ್ತಾರೆ.

Anchor Anushree Wedding prediction by Little Koravanji in Sa Re Ga Ma Pa stage

ಆಗ ಪುಟ್ಟ ಬಾಲಕಿಯು, ರೈತರು ಬೆಳಗ್ಗೆ ಬೇಗ ಎದ್ದು ನದಿ ಬಳಿ ಹೋಗಿ ಸ್ನಾನ ಮಾಡಿ ದೇವರಿಗೆ ನಮಸ್ಕಾರ ಮಾಡುತ್ತಾರೆ. ಅಲ್ಲದೆ, ಅವರು ದೇವರ ಬಗ್ಗೆ ಹಾಡು ಹಾಡಿ, ನೈತ್ಯವನ್ನು ಮಾಡಿ ಬಳಿಕ ಎಳ್ಳು, ಬೆಲ್ಲ ತಿಂದು ಸಂಭ್ರಮಾಚರಣೆ ಮಾಡುತ್ತಾರೆ. ಆಗ ಚಳಿಗಾಲನೂ ಮುಗಿದು ಬೇಸಿಗೆಯೂ ಆರಂಭ ಆಗುತ್ತದೆ ಎಂದು ಮುದ್ದಾಗಿ ಹೇಳುವ ಮೂಲಕ ಪುಟ್ಟ ಬಾಲಕಿ ಗಮನ ಸೆಳೆಯುತ್ತಾಳೆ.

ಬಳಿಕ ಕಣಿ ಹೇಳ್ತಿನ್ರವ್ವ ಕಣಿ ಎಂದು ಹೇಳುವ ಮೂಲಕ ಜಡ್ಜಸ್‌ಗಳಾದ ವಿಜಯ್‌ ಪ್ರಕಾಶ್‌, ಅರ್ಜುನ್‌ ಜನ್ಯಾ, ರಾಜೇಶ್‌ ಕೃಷ್ಟನ್‌ ಸೇರಿದಂತೆ ನಿರೂಪಕಿ ಅನುಶ್ರೀ ಬಗ್ಗೆಯೂ ಭವಿಷ್ಯ ಹೇಳುವ ಮೂಲಕ ಈ ಪುಟ್ಟ ಬಾಲಕಿ ಅಲ್ಲಿದ್ದವರನ್ನು ರಂಜಿಸುತ್ತಾಳೆ. ಮೊದಲಿಗೆ ವಿಜಯ್‌ ಪ್ರಕಾಶ್‌ ಅವರ ಬಳಿ ಹೋಗಿ, ಅವರ ಕೈ ನೋಡಿ ಕಣಿ ಹೇಳುತ್ತಾಳೆ. ಇನ್ನೂ ಒಂದು ಸ್ವಲ್ಪ ದಿನದಲ್ಲಿ ನೀವು ಅಮೆರಿಕಾ, ಜರ್ಮನಿ ಪ್ರವಾಸ ಮಾಡಲಿದ್ದೀರಿ ಎಂದು ಹೇಳುತ್ತಾಳೆ.

ಅರ್ಜುನ್‌ ಜನ್ಯಾ ಬಳಿ ಹೋಗಿ, ಅವರ ಕೈ ನೋಡಿ ನಿಮ್ಮದೊಂದು ಹೊದ ಮೂವಿ ರಿಲೀಸ್‌ ಆಗಲಿದೆ. ಅಲ್ಲದೆ, ಇದು ಎಲ್ಲಾ ಕಡೆ ಭಾರೀ ಫೇಮಸ್‌ ಆಗಲಿದೆ ಎಂದು ಭವಿಷ್ಯ ನುಡಿಯುತ್ತಾಳೆ. ರಾಜೇಶ್‌ ಕೃಷ್ಣ ಬಳಿ ಹೋಗಿ ನೀವು ಯೋಗರಾಜ್‌ ಭಟ್‌ ಅವರ ಗಾಳಿಪಟ 2 ಚಿತ್ರದಲ್ಲಿ ಹಿರೋ ಆಗಿ ನಟನೆ ಮಾಡಲಿದ್ದೀರಿ ಎಂದು ಭವಿಷ್ಯ ನುಡಿಯುತ್ತಾರೆ.

ಕೊನೆಯದಾಗಿ ನಿರೂಪಕಿ ಅನುಶ್ರೀ ಅವರ ವಿವಾಹ ಬಗ್ಗೆ ಕಣಿ ಹೇಳುತ್ತಾಳೆ. ನೀವು ಇದೇ ವರ್ಷದಲ್ಲಿ ವಿವಾಹ ಆಗಲಿದ್ದೀರಿ. ನನಗೆ ಹುಡುಗ ಯಾರು ಅಂತಾ ಗೊತ್ತಿದೆ. ಆದರೆ ಹೇಳುವುದಿಲ್ಲ ಎಂದು ಕಣಿ ಹೇಳುವ ಮೂಲಕ ಅನುಶ್ರೀ ಅವರನ್ನು ಒಂದು ಕ್ಷಣ ಆಶ್ಚರ್ಯಗೊಳ್ಳುವಂತೆ ಮಾಡುತ್ತಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗುತ್ತಿದೆ.

ಅನುಶ್ರೀ ಹೇಳಿದ್ದೇನು?: ಇತ್ತೀಗೆಷ್ಟೇ ಅಕುಲ್‌ ಬಾಲಾಜಿ ಅವರು ಅನು ಈಗ ಇಡೀ ಭಾರತದಲ್ಲೇ ಅನುಶ್ರೀ ಅವರ ಮದುವೆ ಯಾವಾಗ ಎಂದು ಕೇಳುತ್ತಿದ್ದಾರೆ ಎಂದು ಹೇಳಿದ್ದರು. ಅಲ್ಲದೆ, ಅವರೇ ಸಾಕ್ಷತ್‌ ನಡೆದುಕೊಂಡು ಬಂದರೆ ಏನು ಮಾಡ್ತೀರಾ ಎಂದು ಕಾಮಿಡಿಯಿಂದ ಕೇಳುತ್ತಾರೆ. ಇದಕ್ಕೆ ಉತ್ತರಿಸಿದ್ದ ನಿರೂಪಕಿ ಅನುಶ್ರೀ ಅವರು, "ನನ್ನ ಮದುವೆ ಚಿಂತೆ ಮನೆಯವರಿಗಿಂತ ಯೂಟ್ಯೂಬ್‌ ಅವರಿಗೆ ಜಾಸ್ತಿ ಇರೋದು. ಪ್ರತಿ ವಾರ ಈ ಪ್ರಶ್ನೆಯನ್ನು ಕೇಳುತ್ತಲೇ ಇದ್ದರು," ಎಂದು ಹೇಳಿದರು.

"ಎಲ್ಲಾ ಹುಡುಗಿಯರಿಗೆ ಇರುವ ಆಸೆ ನನಗೂ ಇದೆ. ನನಗೂ ಜೀವನದಲ್ಲಿ ಒಬ್ಬ ಬಾಳ ಸಂಗಾತಿ ಬರಬೇಕಂತ ಆಸೆ ಇರತ್ತೆ. ಆದರೆ, ಎಲ್ಲದಕ್ಕೂ ತನ್ನದೇ ಆದಂತಹ ಸಮಯ, ಗಳಿಗೆ ಇರುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿ ಬರಬೇಕಾಗಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನಾನು ಮದುಯಾಗುವುದಕ್ಕೆ ಮನಸ್ಸು ಮಾಡಬೇಕಾಗಿತ್ತು. ಇಷ್ಟು ವರ್ಷಗಳ ಕಾಲ ಮನಸ್ಸು ಮಾಡಿರಲಿಲ್ಲ. ಇದೇ ಮೊಟ್ಟ ಮೊದಲ ಬಾರಿ ನಾನು ಮನಸ್ಸು ಮಾಡಿದ್ದೇನೆ ಮದುವೆ ಆಗಬೇಕಂತ," ಎಂದು ಹೇಳಿದರು.

"ಕನ್ನಡಿಗರ ಆಶೀರ್ವಾದದಿಂದ ಮುಂದಿನ ವರ್ಷ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಆ ನನ್ನ ಸರದಾರ, ಆ ಹುಡುಗ ನನ್ನ ಬದುಕಲ್ಲಿ ಬರ್ಲಿ. ಬಂದ್ರೆ ನಿಮ್ಮ ಮುಂದೆ ಅವರನ್ನು ಕರೆದುಕೊಂಡು ಬಂದು ನಿಲ್ಲಿಸಿ ಪರಿಚಯ ಮಾಡಿಸಿಕೊಡುವಂತಹ ಅದೃಷ್ಟ ನನ್ನದಾಗಲಿ ಅಂತಾ ಅಂದುಕೊಳ್ಳುತ್ತೇನೆ," ಅಂತಾ 2024ರಲ್ಲಿ ಜಿ ಕುಟುಂಬ ಅವಾರ್ಡ್‌ ಕಾರ್ಯಕ್ರಮದಲ್ಲಿ ಹೇಳಿ ಗಮನ ಸೆಳೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+