Anchor Anushree: ಅನುಶ್ರೀ ಕೈಗೆ ಕೊನೆಗೂ ಬಿತ್ತು ರಿಂಗ್; ಉಂಗುರ ಹಾಕಿದ್ದು ಯಾರು ಗೊತ್ತಾ?
ಕನ್ನಡದ ಖ್ಯಾತ ನಿರೂಪಕಿ ಹಾಗೂ ಕರಾವಳಿ ಚೆಲುವೆ ಅನುಶ್ರೀ ಅವರ ಮದುವೆ ಸುದ್ದಿ ಯಾವಾಗಲೂ ವೈರಲ್ ಆಗುತ್ತಿರುತ್ತದೆ. ಹಲವು ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಅನುಶ್ರೀ ಅವರು ಸದ್ಯದಲ್ಲೇ ಗುಡ್ ನ್ಯೂಸ್ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿರುತ್ತಿದೆ. ಅನುಶ್ರೀ ಅವರಿಗೆ ಮದುವೆ ವಯಸ್ಸು ದಾಟುತ್ತಿದೆ. ಅನುಶ್ರೀ ಅವರಿಗೆ ಈಗಾಗಲೇ ಮೂವತ್ತೈದರ ಹರೆಯವನ್ನು ದಾಟಿದ್ದು ಇನ್ನೇನು ಕೆಲವೇ ಸಮಯದಲ್ಲಿ ಮೂವತ್ತೇಳನೇ ವರ್ಷಕ್ಕೆ ಅಡಿ ಇಡಲಿದ್ದಾರೆ.
ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಹಳ ಚಿಕ್ಕ ವಯಸ್ಸಲ್ಲೇ ಒಂದು ತುತ್ತು ಅನ್ನಕ್ಕೂ ಕಷ್ಟ ಪಟ್ಟಿದ್ದಾರೆ. ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಇದೀಗ 2025 ಮಾರ್ಚ್ 17 ರಂದು ಮದುವೆ ಬಗ್ಗೆ ಅಪ್‌ಡೇಟ್ ಕೊಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಬರ್ತ್ ಡೇ ಆಗಿದೆ. ಹೀಗಾಗಿ ಆ ದಿನವೇ ಆಂಕರ್ ಅನುಶ್ರೀ ಹಸೆಮಣೆ ಏರ್ತಾರೆ ಅನ್ನೋ ಸುದ್ದಿ ನೀಡುತ್ತಾರೆ ಎನ್ನಲಾಗಿತ್ತು. ಆದರೆ, ಅನುಶ್ರೀ ಮಾರ್ಚ್ 17 ರಂದು ಯಾವುದು ಅಪ್‌ಡೇಟ್ ಅನ್ನ ನೀಡಿರಲಿಲ್ಲ. ಇದೀಗ ಅನುಶ್ರೀ ಅವರ ಕೈಯಲ್ಲಿ ಕೊನೆಗೂ ಉಂಗುರ ಬಿದ್ದಿದ್ದು, ಈ ರಿಂಗ್ ಹಾಕಿದ್ದು ಯಾರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಅನುಶ್ರೀ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಆದರೆ, ಅವರ ಕೈಗೆ ಉಂಗುರ ಇದೆ. ಗಿಲ್ಲಿ ನಟ ಅವರು ಜೀ ಕನ್ನಡದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಜೀ ಕನ್ನಡ ಶೋಗಳಲ್ಲಿ ಪ್ರಾಪರ್ಟಿ ಕಾಮಿಡಿಯನ್ ಆಗಿ ಫೇಮಸ್ ಆಗಿದ್ದಾರೆ. ಗಿಲ್ಲಿ ನಟ ಅವರು ಜೀ ಕನ್ನಡದ 'ಸರಿಗಮಪ' ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ವೇದಿಕೆ ಮೇಲೆ ಅವರು ಅನುಶ್ರೀಗೆ ಉಂಗುರ ಹಾಕಿದ್ದಾರೆ.
ಗಿಲ್ಲಿ ನಟ ಅವರು ಜೀ ಕನ್ನಡದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಗಿಲ್ಲಿ ನಟ ಅವರ ಜಿನವಾದ ಹೆಸರು ನಟರಾಜ್. ಗಿಲ್ಲಿ ಅವರು ಹುಟ್ಟಿ ಬೆಳೆದಿದ್ದು ಮಂಡ್ಯದ ಮಳವಳ್ಳಿಯಲ್ಲಿ. ಗಿಲ್ಲಿ ನಟ ಅವರು ರೈತ ಹಿನ್ನೆಲೆಯಿಂದ ಬಂದವರಾಗಿದ್ದು, ಎಸ್ಎಸ್ಎಲ್ಸಿ ಪಾಸ್ ಮಾಡಿದ ಬಳಿಕ ಅವರು ಐಟಿಐ ಓದಿದರು. ಹಲವು ಕನ್ನಡ ಡೈಲಾಗ್ಗಳನ್ನು ಹೇಳಿಕೊಂಡು, ಅದರಲ್ಲೂ ಲವ್ ಸಂಬಂಧಿತ ಡೈಲಾಗ್ನ ಹೇಳಿಕೊಂಡು ಹೆಚ್ಚು ಫೇಮಸ್ ಆದವರು ಗಿಲ್ಲಿ ನಟ.
ಇತ್ತೀಚೆಗೆ ಗಿಲ್ಲಿ ನಟ ಅವರು ಸಿಂಧನೂರಿನಲ್ಲಿ ಸರಿಗಮಪ ವೇದಿಕೆ ಏರಿದ್ದಾರೆ. ಈ ವೇದಿಕೆ ಮೇಲೆ ಅವರು ಅನುಶ್ರೀಗೆ ರಿಂಗ್ ಹಾಕಿದ್ದಾರೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಮೇ ಐ ಕಮಿನ್ ಎನ್ನುತ್ತಾ ಗಿಲ್ಲಿ ನಟ ಅವರು ಎಂಟ್ರಿ ಕೊಟ್ಟಿದ್ದಾರೆ. ವೇದಿಕೆ ಮೇಲೆ ಅನುಶ್ರೀ ಅವರ ಕೈಗೆ ರಿಂಗ್ ಹಾಕಿದ್ದಾರೆ. ಇದೇನು ಎಂದು ರಿಂಗ್ ತೋರಿಸಿದರು ಗಿಲ್ಲಿ ನಟ. ಆಗ ರಿಂಗ್ ಎಂದು ಆಂಕರ್ ಅವರು ಅನುಶ್ರೀ ಅವರು ಹೇಳಿದ್ದಾರೆ. ಆಗ ಗಿಲ್ಲಿ ನಟ ಆ್ಯಂಕರ್ಗೆ ರಿಂಗ್ ಹಾಕಿದೆ. ಆ್ಯಂಕರಿಂಗ್ ಆಯ್ತು ಎಂದು ಹೇಳಿದ್ದಾರೆ.
ಕಷ್ಟಪಟ್ಟು ಹೈಸ್ಕೂಲ್ ಪಾಸ್ ಮಾಡಿದೆ. ಬೆಂಗಳೂರಿಗೆ ಬರೋಕೆ ಅಪ್ಪ ಅಮ್ಮನ ಫೇಸ್ ಮಾಡಿ, ಬಾಡಿಗೆ ಮನೆಗೆ ರೆಂಟ್ ಕಟ್ಟೋಕೆ ಒದ್ದಾಡಿ, ನಿತ್ಯ ಸಮಸ್ಯೆ ಜೊತೆ ಗುದ್ದಾಡಿ, ಕೆಲಸ ಇಲ್ಲದೆ ಒದ್ದಾಡಿ, ಜೀ ಕನ್ನಡ ಆಡಿಷನ್ಗೆ ಕ್ಯೂ ನಿಂತು, ಕಾಮಿಡಿ ಶೋನಲ್ಲಿ ಕಾಮಿಡಿ ಮಾಡಕಾಗ್ದೆ, ಡ್ಯಾನ್ಸ್ ಶೋನಲ್ಲಿ ಡ್ಯಾನ್ಸ್ ಮಾಡಕಾಗದೆ ನಿಮ್ಮನ್ನು ಗಾಡ್ ಮದರ್ ಆಗಿ ನಿಮ್ಮನ್ನು ತೆಗೆದುಕೊಂಡ ನನಗೆ ಆ್ಯಂಕರಿಂಗ್ ಬರಲ್ವ ಎಂದು ಗಿಲ್ಲಿ ನಟ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications