ಅಪ್ಪು ಸರ್‌... ನನಗೆ ಕೊಟ್ಟ ಭಿಕ್ಷೆ ಇದು: ಕಣ್ಣೀರಿಟ್ಟ ಆಂಕರ್‌ ಅನುಶ್ರೀ

ಇಂದು ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ 50ನೇ ಹುಟ್ಟು ಹಬ್ಬದ ಸಂಭ್ರಮ.. ರಾಜ್ಯಾದ್ಯಂತ ಮರೆಯಲಾರದ ರಾಜರತ್ನನ ನೆನಪು ಮನೆ ಮಾಡಿದ್ದು, ಮಧ್ಯರಾತ್ರಿಯಿಂದಲೇ ಅಪ್ಪು ಅಭಿಮಾನಿಗಳ ಸೆಲೆಬ್ರೇಷನ್ ಜೋರಾಗಿತ್ತು. ರ್ನಾಟಕ ರತ್ನ, ಅಭಿಮಾನಿಗಳ ಪಾಲಿನ ಆರಾಧ್ಯ ದೈವ.. ನಗುವಿನ ಒಡೆಯ ಪುನೀತ್ ರಾಜಕುಮಾರ್ಗೆ 50ರ ಸಂಭ್ರಮ. ಅಪ್ಪು ನಮ್ಮೊಂದಿಗಿಲ್ಲದಿದ್ರೂ ಅಭಿಮಾನಿಗಳ ಹೃದಯದಲ್ಲಿ ಅಜರಾಮರ ಅನ್ನೋದಕ್ಕೆ ಈ ಜನಸಾಗರವೇ ಸಾಕ್ಷಿ.ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಅಪಾರ ಅಭಿಮಾನಿಗಳು ನೆರೆದಿದ್ದಾರೆ.

ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಅಪಾರ ಅಭಿಮಾನಿ ಪೈಕಿ ಅನುಶ್ರೀ ಕೂಡ ಒಬ್ಬರು. ಅವರು ಪುನೀತ್ನ ದೊಡ್ಡ ಅಭಿಮಾನಿ. ಇಂದು ಸಮಾಧಿ ಬಳಿ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಪುನೀತ್ ರಾಜ್ಕುಮಾರ್ ಬಗ್ಗೆ ಮಾತನಾಡಿದ ಆಂಕರ್‌ ಅನುಶ್ರೀ ಅವರು, 'ಕೋಟ್ಯಂತರ ಅಭಿಮಾನಿಗಳಲ್ಲಿ ನನ್ನನ್ನು ಗುರುತಿಸುತ್ತಿದ್ದಾರೆ. ಅವರ ಜನ್ಮದಿನಕ್ಕೆ ಕೇಕ್ ಕಟ್ ಮಾಡಿಸಿದ್ದೇನೆ. ಆ ಗುಣಕ್ಕೆ ಅಭಿಮಾನಿ. ಅದು ಅನ್ನ ಹಾಕಿದ ಕೈ. ಅವರಿಗೆ ಕೊಟ್ಟು ಅಭ್ಯಾಸವೇ ಹೊರತು, ತೆಗೆದುಕೊಂಡು ಅಭ್ಯಾಸ ಇಲ್ಲ. ಕೋಟ್ಯಾಂತರ ಅಭಿಮಾನಗಳಲ್ಲಿ ನಾನು ಒಬ್ಬಳು ಆಗಿರುವುದು ಅದು ನನ್ನ ಪುಣ್ಯ. ಇದು ಸರ್ ನನಗೆ ಕೊಟ್ಟಿರುವಂತಹ ಪ್ರೀತಿಯ ಭಿಕ್ಷೆ ಎಂದು ಅನುಶ್ರೀ ಅವರು ಭಾವುಕರಾಗಿದ್ದಾರೆ.

Anchor Anushree remember Puneeth Rajkumar On His birthday

ಪ್ರತಿ ವರ್ಷ ಪುನೀತ್‌ ರಾಜ್‌ ಕುಮಾರ್‌ ಸರ್‌ ಮನೆಗೆ ಹೋಗಿ ಬರ್ತಡೆ ವಿಶ್ ಮಾಡಿ, ಕೇಕ್ ಕಟ್ ಮಾಡಿಸುತ್ತಿದ್ದೆ. ಆದರೆ, ಇವತ್ತು ಇಲ್ಲಿ ಕೇಕ್ ಕಟ್ ಮಾಡಿದ್ದೇನೆ. ಅಪ್ಪು ಸರ್, ನಮ್ ಜೊತೆಗಿಲ್ಲ ಎನ್ನುವ ನೋವು ಇದ್ದೇ ಇರುತ್ತದೆ. ಆದರೆ, ಇವತ್ತು ಸರ್ ಅಭಿಮಾನಿಗಳ ಮೂಲಕ ನಾವು ಅವರನ್ನು ಜೀವಿತವಾಗಿಡಬೇಕು. ಅಪ್ಪು ಸರ್ ಅವರ ನಡೆ-ನುಡಿಗೆ ನಾನು ಅಭಿಮಾನಿಯಾಗಿದ್ದೇನೆ. ಅದು ಅನ್ನ ಹಾಕಿದ ಕೈ ಅದು ಆಕಾಶ ನೋಡದೆ ಇರೋ ಕೈ. ಆ ಕೈಗೆ ಕೊಟ್ಟು ಅಭ್ಯಾಸವೇ ಹೊರೆತು ತಗೊಂಡು ಅಭ್ಯಾಸ ಇಲ್ಲ ಅದಕ್ಕಾಗಿಯೇ ಇವತ್ತು ಕೂಡ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಬರಿ ಪ್ರೀತಿಯನ್ನೇ ನೀಡುತ್ತಿದ್ದಾರೆ.

ಈ ಅಭಿಮಾನಿಗಳ ಪ್ರೀತಿಯನ್ನೇ ಅಪ್ಪು ಸರ್ ಅವರು ಸಂಪಾದಿಸಿದ್ದಾರೆ. ಅಪ್ಪು ಸರ್ ಇವತ್ತು ಇದ್ದಿದ್ರೆ 50ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದ ಕುರಿತು ನಮ್ಮ ಚಾನೆಲ್ ನಲ್ಲಿ ಇಂಟರ್ವ್ಯೂ ಮಾಡ್ತಿದ್ದೆ ಹಲವು ಕಾರ್ಯಕ್ರಮಗಳಲ್ಲಿ ವೇದಿಕೆಯಲ್ಲಿ ನಾನು ಅವರನ್ನು ಇಂಟ್ರೊಡಕ್ಷನ್ ಕೊಟ್ಟಿದ್ದೇನೆ. ಇದನ್ನೆಲ್ಲ ನಾನು ಮಿಸ್ ಮಾಡ್ತಿದೀನಿ. ಆದರೆ ನಮ್ಮ ಹೃದಯಗಳಲ್ಲಿ ಅಪ್ಪು ಸರ್ ಇರುತ್ತಾರೆ, ಯಾವಾಗಲೂ ಇರುತ್ತಾರೆ ಇವತ್ತು ಅಪ್ಪು ಸರ್‌ ಅಪ್ಪಿಕೊಳ್ಳೋಕೆ, ಸಾಂತ್ವನಕ್ಕೆ ಅವರ ಅಪ್ಪುಗೆಗೆ ಅವರಿಲ್ಲ ಅನ್ನೋ ಕಣ್ಣೀರು ನನಗೆ ಯಾವಾಗಲೂ ಇದ್ದೇ ಇರುತ್ತೆ. ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ ನಿಮ್ಮಂತಹ ವ್ಯಕ್ತಿತ್ವಗಳು ಇಲ್ಲಿ ಬಹಳ ಬಹಳ ಅಗತ್ಯ ಇದೆ. ನಿಮ್ಮ ತರ ಇರೋರು ತುಂಬಾ ಜನ ಬರಬೇಕು. ಆದರೆ, ನೀವು ಒಬ್ಬರೇ ಅನ್ನೋದು ಗೊತ್ತು. ವಿ ಲವ್ ಯು ಸರ್ ಹ್ಯಾಪಿ ಬರ್ತಡೇ ಎಂದು ನಿರೂಪಕಿ ಅನುಶ್ರೀ ಅವರು ಭಾವುಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+