ನುಗ್ಗೇಸೊಪ್ಪಿನ ಪಲ್ಯ ಮಾಡಿ ತಿನಿಸಿದ ರೋಷನ್: ಪತಿ ಅದರಲ್ಲಿ ಕಿಂಗ್ ಎಂದ ಅನುಶ್ರೀ
ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಕೊಡಗು ಮೂಲದ ರೋಷನ್ ಅವರೊಂದಿಗೆ ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೊಸ ಜೀವನ ಶುರು ಮಾಡಿರುವ ಅನುಶ್ರೀ ಪತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಮದುವೆಯಾದ ಕೂಡಲೇ ಎಂದಿನಂತೆ ತಮ್ಮ ದಂಪತಿ ತಮ್ಮ ವೃತ್ತಿಗೆ ಮರಳಿದ್ದಾರೆ. ಇತ್ತೀಚೆಗಷ್ಟೇ ಬಿಡುವು ಮಾಡಿಕೊಂಡು ಕೆಲವೆಡೆ ಸುತ್ತಾಡಿಯೂ ಬಂದಿದ್ದರು. ಇನ್ನು ರೋಷನ್ ಬಗ್ಗೆ ಅನುಶ್ರೀ ಅಚ್ಚರಿ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಪತಿ ರೋಷನ್ ತನಗಾಗಿ ನುಗ್ಗೆಸೊಪ್ಪಿನ ಸ್ಪೆಷಲ್ ಅಡುಗೆ ಮಾಡಿ ತಿನ್ನಿಸಿದ್ದು, ಆ ವಿಚಾರದಲ್ಲಿ ಕಿಂಗ್ ಎಂದು ಕೊಂಡಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅನುಶ್ರೀ, ಪತಿ ರೋಷನ್ ಕೈರುಚಿಯನ್ನು ಹೊಗಳಿದ್ದಾರೆ. ರೋಷನ್ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ ಆಗಿದ್ದು, ಮುದ್ದಿನ ಮಡದಿಗಾಗಿ ನುಗ್ಗೇಸೊಪ್ಪಿನ ಸ್ಪೆಷಲ್ ಪಲ್ಯ ಮಾಡಿ ಉಣಬಡಿಸಿದ್ದಾರೆ. ಪತ್ನಿಗಾಗಿ ಮುತುವರ್ಜಿಯಿಂದ ರೋಷನ್ ಅಡುಗೆ ಮಾಡುವ ವಿಡಿಯೋ ಅನ್ನು ಅನುಶ್ರೀ ಹಂಚಿಕೊಂಡಿದ್ದಾರೆ. ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಯೊಂದಿಗೆ ಕು"ಕಿಂಗ್" ಎಂದು ಅನುಶ್ರೀ ಪತಿಯ ಕೈರುಚಿಗೆ ಮನಸೋತು ಬರೆದುಕೊಂಡಿದ್ದಾರೆ.

ರೋಷನ್ ಅಡುಗೆ ಭಟ್ಟರಂತೆ ತಾವೇ ಎಲ್ಲ ಸಿದ್ಧತೆ ಮಾಡಿಕೊಂಡು, ಸೊಪ್ಪು ಕತ್ತರಿಸಿ ಒಗ್ಗರಣೆ ಹಾಕುವುದು, ಸೊಪ್ಪು ತೊಳೆದು, ಅದಕ್ಕೆ ಸ್ಟೈಲಾಗಿ ಮೊಟ್ಟೆ ಹೊಡೆದು ಬಾಯಲ್ಲಿ ನೀರೂರಿಸುವ ರುಚಿಕರವಾದ ನುಗ್ಗೇ-ಎಗ್ ಪಲ್ಯ ರೆಡಿ ಮಾಡಿದ್ದಾರೆ. ಇದಕ್ಕೆ ಪರೋಟ ಸಿದ್ಧಪಡಿಸಿ, ಅನುಶ್ರೀಗೆ ಟೇಸ್ಟ್ ಮಾಡಿಸಿದ್ದಾರೆ. ಪಲ್ಯ ತಿಂದು ಅನುಶ್ರೀ ವಾವ್ ಎಂದಿದ್ದಾರೆ. ಇದಕ್ಕೆ ದೃಷ್ಟಿಯಾಗದಿರಲಿ ಎಂದು ಅನುಶ್ರೀ ದೃಷ್ಟಿಬೊಟ್ಟಿನ ಇಮೋಜಿ ಹಾಕಿಕೊಂಡಿದ್ದಾರೆ.
ದಂಪತಿಯ ಈ ಅನ್ಯೋನ್ಯತೆ ಕಂಡು ಅವರ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದಾರೆ. ಇದೇ ಪ್ರೀತಿ ವಿಶ್ವಾಸ ಹಾಗೂ ನಂಬಿಕೆಯಿಂದ ಪ್ರಾಮಾಣಿಕರಾಗಿ ಜೀವನ ಮಾಡಿ, ಶುಭವಾಗಲಿ ಎಂದು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. "ಇರೋದ್ ಮೂರು ದಿನ, ಅದ್ರಲ್ಲಿ ಇರೋದ್ರಲ್ಲೇ ತೃಪ್ತಿಪಟ್ಟು ನಗುನಗುತ್ತಾ ನಮ್ಮ ಜೀವನ ನಡಿಸೋದೇ ನಮ್ಮ ಬದುಕು ಅನು ಅಕ್ಕ" ಎಂದಿದ್ದಾರೆ.
ಕನ್ನಡದ ಖ್ಯಾತ ನಿರೂಪಕಿಯಾಗಿರುವ ಅನುಶ್ರೀ ಕೊಡಗು ಮೂಲದ ಉದ್ಯಮಿ ರೋಷನ್ ಜೊತೆ ಕೆಲದಿನಗಳ ಹಿಂದಷ್ಟೇ ವಿವಾಹವಾದರು. ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದಲ್ಲಿ ಇವರ ವಿವಾಹ ನೆರವೇರಿತ್ತು. ಅನುಶ್ರೀ ಅವರು ತಾವು ಯಾವ ರೀತಿ ಮದುವೆ ಆಗಬೇಕು ಎಂದು ಕನಸು ಕಂಡಿದ್ದರೋ ಅದೇ ರೀತಿಯಲ್ಲಿ ಮದುವೆ ಆಗಿದ್ದರು.
ಬಹಳ ವರ್ಷಗಳಿಂದಲೂ ಅನುಶ್ರೀ ಅವರ ಮದುವೆ ಯಾವಾಗ? ಎಂದು ಎಲ್ಲರೂ ಕೇಳುತ್ತಿದ್ದರು. ಆದರೆ ಅಚ್ಚರಿಯಾಗಿ ಅನುಶ್ರೀ ತಮ್ಮ ಮದುವೆ ವಿಚಾರ ಘೋಷಣೆ ಮಾಡಿದ್ದರು. ನಿರೂಪಣೆಯನ್ನೇ ತನ್ನ ಪ್ರತಿಭೆಯನ್ನಾಗಿ ಮಾಡಿಕೊಂಡಿರುವ ಅನುಶ್ರೀ ರಿಯಾಲಿಟಿ ಶೋಗಳನ್ನು ನಡೆಸಿಕೊಡುವ ಮೂಲಕ ಮನೆಮಾತಾದರು. ತಮ್ಮ ಬದುಕನ್ನು ತಾವೇ ಕಟ್ಟಿಕೊಂಡು ಕೊನೆಗೆ ತಮ್ಮ ಇಷ್ಟದಂತೆ ಮದುವೆಯಾದರು. ಮದುವೆ ದಿನ ತಾಳಿ ಕಟ್ಟುವಾಗ ಅನುಶ್ರೀ ಭಾವುಕರಾಗಿ ಕಣ್ಣೀರಿಟ್ಟಿದ್ದರು.












Click it and Unblock the Notifications