Anchor Anushree: ಕೊನೆಗೂ ಮದುವೆಯಾಗುತ್ತಿದ್ದಾರೆ ಆಂಕರ್‌ ಅನುಶ್ರೀ: ಹುಡುಗ ಯಾರು ಗೊತ್ತಾ?

ನಿರೂಪಣೆಯ ಲೋಕದಲ್ಲಿ ತನ್ನದೇ ಆದ ಹೆಸರು ಮಾಡಿದ ಸ್ಯಾಂಡಲ್‌ವುಡ್‌ ನಟಿ, ಆಂಕರ್‌ ಅನುಶ್ರೀ ಕೊನೆಗೂ ಮದುವೆ ಆಗಲು ಒಪ್ಪಿಕೊಂಡಿದ್ದಾರೆ. ಆಂಕರ್ ಹಾಗೂ ಮಂಗಳೂರು ಚೆಲುವೆಯ ಮದುವೆ ಯಾವಾಗ? ಯಾಕೆ ಮದುವೆಯಾಗಿಲ್ಲ ಎನ್ನುವ ಸಾಕಷ್ಟು ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.

ಈಗಾಗಲೇ ನಟಿ ಹಾಗೂ ನಿರೂಪಕಿ ಅನುಶ್ರೀ ಅವರ ಮದುವೆ ಬಗ್ಗೆ ಈ ಹಿಂದೆ ಸಾಕಷ್ಟು ಚರ್ಚೆಯಾಗಿತ್ತು. ಅನುಶ್ರೀ ಮದುವೆಯಾಗಿದೆ. ರಕ್ಷಿತ್‌ ಶೆಟ್ಟಿ ಜೊತೆಗೆ ಮದುವೆಯಾಗುತ್ತಾರೆ ಎಂಬ ಸುದ್ದಿ ಈ ಹಿಂದೆ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಅನು ಮದುವೆ ಬಗ್ಗೆ ಸೆನ್ಸೇಷನಲ್‌ ಹೇಳಿಕೆಯನ್ನು ನೀಡುವುದರ ಮೂಲಕ ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ..

Anchor Anushree Is Ready To Marry Soon If She Gets Suitable Boy

ಇಷ್ಟು ದಿನ ನಾನು ಮದುವೆ ಬಗ್ಗೆ ಸ್ಪಷ್ಟ ಹೇಳಿಕೆ ನೀಡದ ನಟಿ ಕೊನೆಗೂ ಮದುವೆ ಕುರಿತು ಮಾಹಿತಿ ನೀಡಿದ್ದಾರೆ. ಮದುವೆ ಕುರಿತು ತಮ್ಮ ಅಭಿಮಾನಿಗಳಿಗೆ ನಿರೂಪಕಿ ಅನುಶ್ರೀ ಅವರು ಗುಡ್‌ ನ್ಯೂಸ್‌ ನೀಡಿದ್ದಾರೆ. ಇಷ್ಟು ದಿನ ಮದುವೆ ಆಗಲೋ ಬೇಡವೋ ಎಂದು ಯೋಚಿಸಿ ತೂಗುಯ್ಯಾಲೆ ಆಡುತ್ತಿದ್ದ ನಟಿ, ನಿರೂಪಕಿ ಅನುಶ್ರೀ ಕೊನೆಗೂ ಮದುವೆ ಆಗಲು ಒಪ್ಪಿಕೊಂಡಿದ್ದಾರೆ.

ಕನ್ನಡದ ನಿರೂಪಕಿ ಅನುಶ್ರೀ ಅವರು ತುಳುನಾಡಿನಲ್ಲಿ ಕೊಟ್ಟ ಸಂದರ್ಶನವೊಂದರಲ್ಲಿ ಕ್ಲಿಯರ್ ಆಗಿ ಹೇಳಿದ್ದಾರೆ. 'ಹೌದು, ನಾನು ಮದುವೆ ಆಗಲಿದ್ದೇನೆ. ನನ್ನ ತಂದೆ-ತಾಯಿಯ ದಾಂಪತ್ಯದ ಕಹಿ ಅನುಭವವನ್ನು ಕಣ್ಣಾರೆ ಕಂಡಿದ್ದ ನನಗೆ ಮದುವೆ ಎಂದರೆ ನೋವು ತರುವ ಸಂಗತಿಯಾಗಿತ್ತು. ನಾನು ನನ್ನ ಮದುವೆ ಬಗ್ಗೆ ಯೋಚಿಸಿದಾಗಲೆಲ್ಲಾ ನನಗೆ ಮದುವೆ-ದಾಂಪತ್ಯ ಇವೆಲ್ಲಾ ನನಗೆ ಬೇಡವೇ ಬೇಡ. ನನ್ನ ಅಮ್ಮ-ಅಪ್ಪನ ಸಂಸಾರದ ಸುಖದ ಹಣೆಬರಹವನ್ನು ನೋಡಿದ್ದಾಗಿದೆ, ಸಾಕು' ಎನಿಸುತ್ತಿತ್ತು ಎಂದು ಹೇಳಿದ್ದಾರೆ.

ನನ್ನದೇ ಪೋಷಕರ ಮುರಿದ ಬಿದ್ದ ಮದುವೆ ನೋಡಿದ ಮೇಲೂ ನನಗೆ ಮದುವೆ ಆಗಬೇಕೆಂಬ ಕನಸು ಕಾಣುವುದರಲ್ಲಿ ಅರ್ಥವೇ ಇಲ್ಲ ಎನ್ನಿಸುತ್ತಿತ್ತು. ಆದರೆ ಈಗ, ವರ್ಷಗಳು ಉರುಳುತ್ತಿವೆ. ನನಗೂ ವಯಸ್ಸಾಗುತ್ತಿದೆ. ಎಲ್ಲರ ಜೀವನದಲ್ಲೂ ಮದುವೆ ಕಹಿ ಘಟನೆ ಆಗಲೇಬೇಕು ಎಂದೇನಿಲ್ಲ, ಅದು ಸುಮಧುರ ಕೂಡ ಆಗಬಹುದು ಎನ್ನಿಸುತ್ತಿದೆ. ಹೀಗಾಗಿ ನಾನು ಮದುವೆಯಾಗಲು ನಿರ್ಧರಿಸಿದ್ದೇನೆ. ಮದುವೆಯೇ ಬೇಡ ಎನ್ನುತ್ತಿದ್ದವಳು ಮದುವೆಗೆ ಗ್ರೀನ್ ಸಿಗ್ನಲ್ ನೀಡಿಬಿಟ್ಟಿದ್ದೇನೆ ಎಂದು ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ.

ನನಗೆ ಇದು ಎರಡನೇ ಅಥವಾ ಮೂರನೇ ಮದುವೆ ಅಲ್ಲ. ನನಗೆ ಇನ್ನೂ ಮದುವೆಯೇ ಆಗಿಲ್ಲ ಎಂದು ಆಂಕರ್‌ ಅನುಶ್ರೀ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಿಂದೆ ನನಗೆ ಬಹಳಷ್ಟು ಜನರು ಈಗಾಗಲೇ ಮದುವೆ ಮಾಡಿಸಿಬಿಟ್ಟಿದ್ದೀರಿ. ಒಮ್ಮೆ ನಟ ರಕ್ಷಿತ್ ಶೆಟ್ಟಿ ಜೊತೆ ಮದುವೆ ಮಾಡಿಸಿದ್ದೀರಿ. ಇನ್ನೊಮ್ಮೆ ನನ್ನ ಕಸಿನ್ ಗಂಡನ ಜೊತೆಯಲ್ಲೂ ಆಗಿಹೋಗಿದೆಯಂತೆ. ಅದನ್ನು ನನ್ನ ಕಸಿನ್ ಕಾಲ್ ಮಾಡಿ ಹೇಳಿ ನಕ್ಕಿದ್ದಾಳೆ. ಆದರೆ, ನನಗೆ ನಿಜವಾಗಿಯೂ ಮದುವೆ ಆಗಿಲ್ಲ ಎಂದು ತಿಳಿಸಿದ್ದಾರೆ.

ಮದುವೆಯಾಗಲಿರುವ ಹುಡುಗ ಯಾರು?

ನಾನು ಮದುವೆಯಾಗಲು ನಿರ್ಧರಿಸಿದ್ದೇನೆ. ನನಗೆ ಸೂಕ್ತ ವರ ಇನ್ನೂ ಸಿಕ್ಕಿಲ್ಲ. ದಯವಿಟ್ಟು ನನ್ನ ಕನಸಿನ ಹುಡುಗನನ್ನು ಯಾರಾದರೂ ಹುಡುಕಿಕೊಡಿ. ನೀವು ಎಷ್ಟು ಬೇಗ ಹುಡಕಿಕೊಡುತ್ತಿರೋ ಅಷ್ಟೂ ಬೇಗ ನಿಮಗೆ ನನ್ನ ಮದುವೆ ಊಟ ಸಿಗುತ್ತದೆ. ಇದು ಗ್ಯಾರಂಟಿ ಎಂದು ಆ್ಯಂಕರ್​ ಅನುಶ್ರೀ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+