Amruthadhare Serial: ಕಳಚಿ ಬಿತ್ತು ಶಕುಂತಲಾ, ಜೈದೇವ್ ಮುಖವಾಡ: ಗೌತಮ್ ಮನೆ ಬಿಟ್ಟು ಹೋಗಿದ್ದೆಲ್ಲಿಗೆ?
ಅಮೃತ ಧಾರೆ ಧಾರಾವಾಹಿಯಲ್ಲಿ ಮಗುವನ್ನು ಕಾಪಾಡಿಕೊಳ್ಳಲು ಮನೆ ಬಿಟ್ಟು ಹೋದ ಬಳಿಕ ಮನೆಯಲ್ಲಿ ಮೌನ ಆವರಿಸಿದೆ. ಭೂಮಿಕಾ ಹಾಗೂ ಮಗು ನೆನಪಿನಲ್ಲಿ ಗೌತಮ್ ದಿನ ಕಳೆಯುತ್ತಿದ್ದಾನೆ. ಎರಡು ಮಕ್ಕಳ ಸತ್ಯ ಗೊತ್ತಾಗಿದ್ದಕ್ಕೆ ಭೂಮಿಕಾ ಮನೆಯಿಂದ ಹೊರ ಹೋಗಿದ್ದು ಎಂದುಕೊಂಡು ನೊಂದುಕೊಂಡಿದ್ದಾನೆ. ಇತ್ತ ಪೊಲೀಸರ ಮೂಲಕ ಗೌತಮ್ ಭೂಮಿಕಾ ಹುಡುಕಾಟ ನಡೆಸುತ್ತಿದ್ದಾನೆ. ಇತ್ತ ಗೌತಮ್ ಬದುಕಿನಲ್ಲಿ ಆದ ಬೆಳವಣಿಗೆಗಳು ಹಾಗೂ ಕೆಲ ಕಹಿ ಘಟನೆಯ ಹಿಂದೆ ಕೇಡಿ ಜೈದೇವ್ ಹಾಗೂ ಶಕುಂತಲಾ ಇರುವುದು ಬಯಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಅಮೃತಧಾರೆ ಧಾರಾವಾಹಿ ರಣ ರೋಚಕ ತಿರುವು ಪಡೆಯುತ್ತಿರುವ ವಿಚಾರ ಜಗಜ್ಜಾಹೀರಾಗಿತ್ತು. ಭೂಮಿಕಾ ಮನೆಯಿಂದ ಹೊರಗಡೆ ಹೋದ ಬೆನ್ನಲ್ಲಿಯೇ, ಮಲ್ಲಿಯೂ ಕಾಣೆಯಾಗಿದ್ದಾಳೆ. ಭೂಮಿಕಾ ಹುಡುಕುವ ಪ್ರಯತ್ನದಲ್ಲಿ ಗೌತಮ್ ಸುತ್ತಾಡುತ್ತಿದ್ದಾನೆ. ಇತ್ತ ಶಕುಂತಲಾ ತನ್ನ ಮುದ್ದಿನ ಮಗ ಜೈದೇವ್ ಜೊತೆ ಸಂಭ್ರಮ ಪಡುತ್ತಿದ್ದಾಗ ಭಾಗ್ಯಮ್ಮನ ಮೂಲಕ ಗೌತಮ್ ಎದುರು ಶಕುಂತಲಾ ಮುಖವಾಡ ಕಳಚಿ ಬಿದ್ದಂತೆ ಪ್ರೋಮೋವನ್ನು ಬಿಡುಗಡೆ ಮಾಡಲಾಗಿತ್ತು.

ಭೂಮಿಕಾ ಮನೆ ಬಿಟ್ಟು ಹೋಗುವಾಗ ಯಾವುದೇ ಪತ್ರವನ್ನ ಬರೆದಿಲ್ಲ. ಆ ಪತ್ರ ಬರೆದಿರುವುದು ಶಕುಂತಲಾ ಎಂದು ಭಾಗ್ಯಮ್ಮನ ಸಹಾಯದಿಂದ ಗೌತಮ್ ಸತ್ಯ ಗೊತ್ತಾಗಿದೆ. ಭಾಗ್ಯಮ್ಮ ಜೊತೆ ಸೃಜನ್‌ನ ಕರೆದುಕೊಂಡು ಗೌತಮ್ ಮನೆಗೆ ಹೋಗಿದ್ದು, ಅಲ್ಲಿ ಜೈದೇವ್, ದಿಯಾ ಮತ್ತು ಶಕುಂತಲಾ ಮಾತನಾಡುತ್ತಾ ಕುಳಿತುಕೊಂಡಿರುತ್ತಾರೆ. ಭೂಮಿಕಾ ಮನೆ ಬಿಟ್ಟು ಹೋಗೋಕೆ ನಾನೇ ಹೇಳಿದ್ದು, ಇನ್ನೊಂದು ಮಗುವಿನ ವಿಷ್ಯವನ್ನ ಭೂಮಿಕಾಗೆ ಹೇಳಿದ್ದೆ ನಾನು ಹಾಗೂ ಆ ಪತ್ರ ಬರೆದು ಗೌತಮ್ ಮನೆ ಬಿಟ್ಟು ಹೋಗುವಂತೆ ಮಾಡಿದ್ದೇನೆ ಎಂದು ಶಕುಂತಲಾ ಹೇಳಿಕೊಂಡಿದ್ದಾಳೆ.
ಈ ವೇಳೆ ನನಗೆ ಖುಷಿಯಾಗಿದೆ ಎಂದು ಜೈದೇವ್ ಹೇಳುತ್ತಾನೆ. ಇದೇ ಸಮಯದಲ್ಲಿ ಅಲ್ಲಿಗೆ ಗೌತಮ್, ಸೃಜನ್ ಹಾಗೂ ಭಾಗ್ಯಮ್ಮ ಬರುತ್ತಾರೆ. ಈ ವೇಳೆ ಗೌತಮ್ ಯಾಕಮ್ಮ ಹೀಗೆ ಮಾಡಿದ್ರೀ, ನಾನು ನಿಮಗೇನು ಅನ್ಯಾಯ ಮಾಡಿದ್ದೇ ಎಂದು ಪ್ರಶ್ನೆ ಕೇಳುತ್ತಾನೆ. ಒಂದು ವೇಳೆ ನನ್ನ ಮನಸಿನಲ್ಲಿ ಹಾಗೇನಾದರೂ ಇದ್ದಿದ್ದರೆ ನನ್ನ ಅಪ್ಪ ಯಾವತ್ತು ಈ ಐವರ ಜವಾಬ್ಧಾರಿ ನಿಂದು ಎಂದು ಕೈಗೆ ಒಪ್ಪಿಸಿ ಹೋದ್ರಲ್ಲ ಅವತ್ತೇ ನಾನು ನಿಮ್ಮನ್ನು ಬೀದಿ ಪಾಲು ಮಾಡಬಹುದಿತ್ತು ಎಂದು ಗೌತಮ್ ಹೇಳುತ್ತಾನೆ.
ಗೌತಮ್ ಮುಂದೆ ಭೂಮಿಕಾ ಮನೆ ಬಿಟ್ಟು ಹೋದ ಸತ್ಯ ಬಯಲಾಗಿದೆ. ಮನೆಯ ಸದಸ್ಯರಾದ ಪಾರ್ಥ, ಅಪೇಕ್ಷಾ, ಸುಧಾ, ಸೃಜನ್, ಮತ್ತು ಗೆಳೆಯನ ಆನಂದನ ಮುಂದೆ ಗೌತಮ್ ನನಗೆ ಯಾಕೆ ಮೋಸ ಮಾಡಿದ್ರಿ ಎಂದು ಪ್ರಶ್ನಿಸುತ್ತಾನೆ. ನಿಮಗೇನು ಬೇಕು ಅದು ಸಿಗುತ್ತೆ ಎಂದು ಹೇಳಿ ಆಸ್ತಿ ಪತ್ರಗಳನ್ನು ನೀಡಿದ್ದಾನೆ. ಇವತ್ತಿಗೆ ನನ್ನ ಮತ್ತು ಈ ಮನೆಯ ಋಣ ಮುಗೀತು ನಾನು ನೆಮ್ಮದಿಯನ್ನು ಹುಡುಕಿಕೊಂಡು ಹೊರಡ್ತೀನಿ ಮನೆಯಾಚೆ ಹೊರಡುತ್ತಾನೆ.
ಶಕುಂತಲಾಳ ಮೋಸದಿಂದಾಗಿ ಗೌತಮ್ ಮನೆ ಬಿಟ್ಟು ಹೋಗುತ್ತಾನೆ. ಮಲತಾಯಿ ಶಕುಂತಲಾ ಅವನನ್ನು ಮತ್ತು ಭೂಮಿಕಾಳನ್ನು ಬೇರ್ಪಡಿಸುತ್ತಾಳೆ. ಗೌತಮ್ ನಿಜವಾದ ಸತ್ಯ ತಿಳಿದುಕೊಂಡು ನೋವಿನಿಂದ ಮನೆ ಬಿಟ್ಟು ಹೋಗುತ್ತಾನೆ. ಬಳಿಕ ಐದು ವರ್ಷಗಳ ನಂತರದ ಕಥೆಯಲ್ಲಿ ಗೌತಮ್ ಕಾರು ಚಾಲಕನಾಗಿ ಕೆಲಸ ಮಾಡುತ್ತಾ ಇರುತ್ತಾನೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಐದು ವರ್ಷ ಕಾಲ ಕಾರು ಡ್ರೈವರ್ ಆಗಿ ಭೂಮಿಕಾಳ ಹುಡುಕುತ್ತಾ ಕಳೆದು ಹೋಗಿವೆ. ಈ ವೇಳೆ ಒಮ್ಮೆ ಗೌತಮ್ ಗೆ ಮಗ ಹಾಗೂ ಭೂಮಿಕಾ ಸಿಗುತ್ತಾರೆ. ಇದನ್ನ ಕಂಡು ಗೌತಮ್ ಖುಷಿ ಪಡುತ್ತಾನೆ. ಈ ವೇಳೆ ಮತ್ತೆ ಇವರು ಒಂದಾಗುತ್ತಾರಾ ಎಂಬುದು ಸದ್ಯ ಕುತೂಹಲ ಮೂಡಿಸಿದೆ.












Click it and Unblock the Notifications