Amruthadhare Serial: ಭೂಮಿಕಾ ಬೆನ್ನಲ್ಲೇ ಕಾಣೆಯಾದ ಮಲ್ಲಿ, ಗೌತಮ್ ಕೈಗೆ ಸಿಕ್ತು ಹೆಂಡತಿ ಬರೆದ ಪತ್ರ: ಮುಂದೆ ಆಗಿದ್ದೇನು?
ಅಮೃತಧಾರೆ ಧಾರಾವಾಹಿಯಲ್ಲಿ ದಿನಕ್ಕೊಂದು ತಿರುವು ತೀವ್ರ ಕುತೂಹಲವನ್ನ ಮೂಡಿಸುತ್ತಿದೆ. ಒಂದು ಕಡೆ ಭೂಮಿಕಾ ಎಲ್ಲಾ ಸಮಸ್ಯೆಗಳನ್ನ ಮೀರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಹೆಣ್ಣು ಮಗು ಹುಟ್ಟಿ ಕೆಲ ಕ್ಷಣದಲ್ಲೇ ಮಗು ಪಿಡ್ನಾಪ್ ಆಗಿದ್ದು, ಹುಟ್ಟಿರುವುದು ಒಂದೇ ಮಗು ಎಂದು ಗೌತಮ್ ಮನೆ ಮಂದಿ ಎಲ್ಲಾರಿಗೂ ಹೇಳಿದ್ದಾರೆ. ಆದರೆ, ಇನ್ನೊಂದು ಮಗು ಯಾವ ಸಿಗುತ್ತೋ ಎಂದು ಗೌತಮ್ ಹುಡುಕಾಟವನ್ನ ನಡೆಸಿದ್ದಾರೆ. ಇತ್ತ ಜೈದೇವ್ ಹಾಗೂ ಶಕುಂತಲಾ ಇನ್ನೊಂದು ಮಗುವನ್ನ ಕಿಡ್ನಾಪ್ ಮಾಡಲು ಕುತಂತ್ರ ರೂಪಿಸಿದ್ದು, ಹೆಣ್ಣು ಮಗು ಹಾಗೂ ಮಗನ ಮುಗಿಸಲು ಕೇಡಿಗಳ ತಂತ್ರಕ್ಕೆ ಬೆಚ್ಚಿ ಬಿದ್ದ ಭೂಮಿಕಾ ಮಗನನ್ನ ಉಳಿಸಿಕೊಳ್ಳಲು ಮನೆ ಬಿಟ್ಟು ಹೋಗಿದ್ದಾಳೆ.
''ಅಮೃತಧಾರೆ'' ಧಾರಾವಾಹಿಯಲ್ಲಿ ಈಗಾಗಲೇ ಹೆಣ್ಣು ಮಗುವನ್ನ ಕಳೆದುಕೊಂಡಿದ್ದೇನೆ. ಇರುವ ಮಗನನ್ನ ಕಳೆದುಕೊಳ್ಳುವ ಇಷ್ಟ ಇಲ್ಲ ಎಂದು ಭೂಮಿಕಾ ಮನೆ ಬಿಟ್ಟು ಹೋಗಿದ್ದಾಳೆ. ಮನೆ ಬಿಟ್ಟು ಭೂಮಿಕಾ ಹೋಗುವ ವೇಳೆ ಭೂಮಿಕಾ ಬೇಡ ಅಂದರೂ ಕೂಡ ಹಿಂದೆ ಹಿಂದೆ ಹೋಗಿರುವ ಮಲ್ಲಿಗೆ ಭೂಮಿಕಾ ನಿಮ್ಮ ತಂದೆಯ ಆಸೆಯನ್ನ ನೀನು ಈಡೇರಿಸಬೇಕು. ನಿನ್ನ ಜೀವನವನ್ನ ನೀನೇ ರೂಪಿಸಿಕೊಳ್ಳಬೇಕು. ನೀನು ಬಂದರೆ ನಿನ್ನ ಜವಾಬ್ಧಾರಿಯನ್ನು ನೋಡಿಕೊಳ್ಳೋರು ಯಾರು..? ನಿನಗೆ ಉಜ್ವಲ ಭವಿಷ್ಯ ಇದೆ ಎಂದು ಭೂಮಿಕಾ ಬುದ್ದಿವಾದ ಹೇಳುತ್ತಾಳೆ.

ಭೂಮಿಕಾ ಮಲ್ಲಿಗೆ ಎಷ್ಟೇ ಬುದ್ದಿ ಹೇಳಿ ಮನವೊಲಿಸಲು ಪ್ರಯತ್ನ ಮಾಡಿದರು ಕೂಡ ಒಪ್ಪದ ಭೂಮಿಕಾ ಇಡೀ ಸಾಮ್ರಾಜ್ಯ ಕುಸಿದು ಬೀಳುತ್ತೆ. ನಿನ್ನ ನಂಬಿಕೊಂಡು ಸಾವಿರಾರು ಜನ ಇದ್ದಾರೆ ಮಲ್ಲಿ ಅವರನ್ನೆಲ್ಲ ಕೈ ಬಿಡಬೇಡ ಎಂದು ಭೂಮಿಕಾ ಹೇಳುತ್ತಾಳೆ. ಅಲ್ಲದೇ ಅದೇ ಸಂದರ್ಭದಲ್ಲಿ ಮಲ್ಲಿ ಮುಂದೆಯೇ ಸಿಮ್ ಮುರಿದು ಹಾಕಿ ಮೊಬೈಲ್ ಭೂಮಿಕಾ ಬೀಸಾಕಿದ್ದಾಳೆ. ನಾನು ಬರೀ ಹೋಗ್ತಿಲ್ಲ ಮಲ್ಲಿ ಕಳೆದು ಹೋಗ್ತಿದ್ದೀನಿ ಇನ್ಮುಂದೆ ನಿಮ್ಮ ಯಾರ ಕಣ್ಣಿಗೂ ನಾನು ಕಾಣಿಸಲ್ಲ ಎಂದು ಭೂಮಿಕಾ ಹೇಳಿ ಬಸ್ ಹತ್ತಿ ಹೊರಡುತ್ತಾಳೆ.
ಮನೆಗೆ ಬಂದ ಪಾರ್ಥ ಹಾಗೂ ಸೃಜನ್, ಭೂಮಿಕಾ, ಮಲ್ಲಿ ಇಲ್ಲ ಎಂದು ಆತಂಕಗೊಳ್ಳುತ್ತಾರೆ. ಈ ಸಮಯದಲ್ಲಿ ತನಗೇನೂ ಗೊತ್ತಿಲ್ಲ ಎನ್ನುವಂತೆ ಬರುವ ಶಕುಂತಲಾ ಯಾಕೆ ಇಷ್ಟು ಟೆನ್ಷನ್‌ನಲ್ಲಿದ್ದೀರಾ ಎಲ್ಲರೂ ಎಂದು ಕೇಳುತ್ತಾಳೆ. ಆಗ ಭೂಮಿಕಾ ಬಗ್ಗೆ ಪಾರ್ಥ ವಿಚಾರಿಸಿದ್ದು ಗೌತಮ್‌ನ ಡ್ರಾಪ್ ಮಾಡಿ ಮಗು ಜೊತೆ ಬಂದಿದ್ದಳು, ನನಗೆ ಕೆಲಸ ಇತ್ತು ನಾನು ಹೊರಗಡೆ ಹೋಗಿದ್ದೇ ಈಗ ಬರ್ತಿದೀನಿ ಎಂದು ಹೇಳುತ್ತಾಳೆ.ಈ ವೇಳೆ ಅತ್ತಿಗೆ, ಮಗು ಹಾಗೂ ಮಲ್ಲಿ ಕಾಣುತ್ತಿಲ್ಲ ಎಂದು ಪಾರ್ಥ ಹೇಳುತ್ತಾನೆ.
ಭೂಮಿಕಾ ಹಾಗೂ ಮಲ್ಲಿ ಎಲ್ಲಿಗೂ ಕಾಣದ ಕಾರಣ ಗೌತಮ್ ಗೆ ಪಾರ್ಥ ಕರೆ ಮಾಡಿ ಎಲ್ಲಾ ವಿಚಾರವನ್ನ ಹೇಳುತ್ತಾನೆ. ಇತ್ತ ಶಾಪಿಂಗ್ ಮಾಡಿಕೊಂಡು ಬರುತ್ತಿರುವ ಗೌತಮ್‌ಗೆ ಪಾರ್ಥನ ಕರೆ ಬಂದಿದ್ದು, ವಿಚಾರವನ್ನೆಲ್ಲಾ ತಿಳಿದು ಗೌತಮ್ ಬೇಗ ಮನೆಗೆ ಬರುತ್ತಾನೆ. ಮನೆಗೆ ಬಂದ ಗೌತಮ್ ಪಾರ್ಥಗೆ ಆದ ಗಾಯ ಕಂಡು ಇನ್ನೂ ಗಾಬರಿಯಾಗಿದ್ದಾನೆ. ಭೂಮಿಕಾಗೆ ಏನೂ ಆಗಿಲ್ಲವಲ್ಲಾ ಎಂದು ಕೇಳುತ್ತಾನೆ. ಆಗ ಪಾರ್ಥ ಅತ್ತಿಗೆ ಮನೆಗೆ ಬಂದಿದ್ದರು ಆದರೆ ಈಗ ಕಾಣ್ತಿಲ್ಲ ಎಂದು ಹೇಳಿದ್ದು ಶಕುಂತಲಾಗೆ ಗೌತಮ್, ನೀವು ಭೂಮಿಕಾನ ನೋಡಲಿಲ್ವಾ ಎಂದು ಕೇಳುತ್ತಾನೆ. ಆಗ ಶಕುಂತಲಾ ಮತ್ತೆ ನಾಟಕವಾಡಿದ್ದು ನನಗೇನು ಗೊತ್ತಿಲ್ಲ ಎಂದು ಹೇಳುತ್ತಾಳೆ.
ಗಾಬರಿಯಿಂದ ಯೋಚಿಸುತ್ತಿದ್ದ ಗೌತಮ್ ಗೆ ನಿನ್ನ ಜೊತೆ ಮಾತನಾಡಬೇಕು ಬಾ ಎಂದು ಶಕುಂತಲಾ ಕರೆದುಕೊಂಡು ಹೋಗುತ್ತಾಳೆ. ನಾನು ಮನೆಯಲ್ಲಿಯೇ ಇದ್ದೇ ಎಂದ ಶಕುಂತಲಾ ಗೌತಮ್‌ನ ರೂಮ್‌ಗೆ ಕರೆದುಕೊಂಡು ಬಂದಿರುವ ಶಕುಂತಲಾ, ಭೂಮಿಕಾ ಬಂದಾಗ ನಾನು ಮನೆಯಲ್ಲಿಯೇ ಇದ್ದೇ ಎನ್ನುತ್ತಾಳೆ. ಶಕುಂತಲಾ ಮಾತು ಕೇಳಿ ಗೌತಮ್ ಶಾಕ್ ಆಗಿದ್ದು ಮನೆಯಲ್ಲಿದ್ದಾಗಲೇ ಮನೆ ಬಿಟ್ಟು ಹೋದರಾ? ಯಾಕೆ ಹೀಗೆ ಮಾಡಿದರು ? ಎನ್ನುತ್ತಾನೆ. ಆಗ ಇನ್ನೊಂದು ಮಗು ವಿಚಾರ ಅವಳಿಗೆ ಗೊತ್ತಾಗಿದೆ ಎಂದು ಶಕುಂತಲಾ ಹೇಳಿದ್ದು ಇನ್ನೊಂದು ಮಗು ವಿಚಾರ ಅವರಿಗೆ ಹೇಗೆ ಗೊತ್ತಾಯ್ತು ? ಹೇಗೆ ಸಾಧ್ಯ ? ಎಂದು ಪ್ರಶ್ನೆ ಮಾಡುತ್ತಾನೆ.
ಇನ್ನೂ ಕೇಡಿ ಜೈದೇವ್ ಹಾಗೂ ಶಕುಂತಲಾ ಭೂಮಿಕಾ ಹೆಸರಿನಲ್ಲಿ ಪತ್ರ ಬರೆದ ಶಕುಂತಲಾ ಕೆಲಸದವರು ಮನೆ ಕ್ಲೀನ್ ಮಾಡುವಾಗ ಒಂದು ಲೆಟರ್ ಸಿಕ್ತು ಎಂದು ತಂದು ಕೊಟ್ಟಿದ್ದಾರೆ ಎಂದು ಪತ್ರವನ್ನು ಗೌತಮ್‌ಗೆ ಕೈಗೆ ಕೊಡುತ್ತಾಳೆ. ಎಂದಿನಂತೆ ಗೌತಮ್ ಆ ಪತ್ರವನ್ನು ಬರೆದಿದ್ದು ಭೂಮಿಕಾನೇ ಎಂದು ನಂಬಿದ್ದು, ಭೂಮಿಕಾನ ಹುಡುಕುತ್ತಾ ಗೌತಮ್ ಹೊರಡುವುದು ಯಾವಾಗ ? ಎನ್ನುವುದನ್ನು ಕಾದು ನೋಡಬೇಕಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications