Amruthadhare Serial: ಗೌತಮ್ ದಿವಾನ್‌ಗೆ ಸಿಕ್ಕಿದೆ ಮನದರಸಿಗೆ ಬಂದಿರೋ ಆಪತ್ತಿನ ಸುಳಿವು, ಮುಂದೇನು ?

Amruthadhare Serial: ಅಮೃತಧಾರೆ ಸೀರಿಯಲ್‌ನಲ್ಲಿ ರೋಚಕ ತಿರುವು ಪಡೆದುಕೊಂಡಿದೆ. ಗೌತಮ್ ದಿವಾನ್‌ಗೆ ಸಿಕ್ಕಿದೆ ಮನದರಸಿಗೆ ಬಂದಿರೋ ಆಪತ್ತಿನ ಸುಳಿವು! ಎನ್ನುವ ಸಾಲುಗಳೊಂದಿಗೆ ಜೀ ಕನ್ನಡ ವಾಹಿನಿಯಿಂದ ಹೊಸ ಪ್ರೋಮೋ ಹಂಚಿಕೊಳ್ಳಲಾಗಿದೆ. ಕೇಡಿ ಜೈದೇವ್ ಕೊಲೆ ಪ್ರಕರಣದಲ್ಲಿ ಭೂಮಿಕಾ ಹಾಗೂ ಜೀವಾಗೆ ಸಂಕಷ್ಟ ಎದುರಾಗಿದೆ. ಈ ಕೇಸ್‌ನಲ್ಲಿ ತಪ್ಪೊಪ್ಪಿಕೊಳ್ಳಬೇಕು ಎಂದು ಭೂಮಿಕಾ ಹೇಳಿದ್ದರೂ ಸಹ ಮಲ್ಲಿ ಈ ವಿಷಯದಲ್ಲಿ ರಾಜಿ ಆಗಿರಲಿಲ್ಲ. ಅಲ್ಲದೆ ಆಗಿರುವ ತಪ್ಪನ್ನು ನಾವು ಸರಿಪಡಿಸುವುದಕ್ಕೆ ಸಾಧ್ಯವಿಲ್ಲ. ಆದರೆ, ಮ್ಯಾನೇಜ್ ಮಾಡಬೇಕು ಎಂದು ಮಲ್ಲಿ ಹೇಳಿದ್ದಳು. ಇನ್ನೊಂದು ಕಡೆ ಜೈದೇವ್ ಏನಾಗಿದ್ದಾನೆ ಎನ್ನುವ ಚಿಂತೆಯಲ್ಲಿ ಶಕುಂತಲಾ ದೇವಿ ಇದ್ದಾಳೆ.

ಒಂದೊಂದು ವಿಷಯವನ್ನು ಕನೆಕ್ಟ್‌ ಮಾಡಿ ನೋಡಿದರೆ, ಜೈದೇವ್ ಕಾಣೆ ಆಗಿರುವುದಕ್ಕೂ ಮಲ್ಲಿ ಹಾಗೂ ಭೂಮಿಕಾ ಮಾತನಾಡುತ್ತಿರುವುದಕ್ಕೂ ಸಂಬಂಧವಿದೆ ಎಂದು ಅನಿಸುತ್ತದೆ ಎಂದು ಶಕುಂತಲಾ ದೇವಿ ಅನುಮಾನ ವ್ಯಕ್ತಪಡಿಸಿದ್ದಾಳೆ. ಭೂಮಿಕಾ ಯಾವ ವಿಷಯದಲ್ಲಿ ಒತ್ತಡಕ್ಕೆ ಒಳಗಾಗಿದ್ದಾಳೆ ಎನ್ನುವುದು ಗೌತಮ್ ದಿವಾನ್‌ಗೆ ತಿಳಿಯುತ್ತಿದೆ ಅಥವಾ ಸುಳಿವು ಸಿಕ್ಕಿದೆ ಎನ್ನುವಂತೆ ತೋರಿಸಲಾಗಿದೆ. ಭೂಮಿಕಾ ಮತ್ತು ಮಲ್ಲಿ ಇಬ್ಬರೂ ರೆಕಾರ್ಡಿಂಗ್ ಅಥವಾ ಇನ್ವೆಸ್ಟಿಗೇಷನ್ ಮಾಡುತ್ತಿದ್ದರು. ಆ ರೆಕಾರ್ಡಿಂಗ್ ಐಟಂ ಮನೆಯಲ್ಲಿಯೇ ಇದೆ ಶಕುಂತಲಾ, ಭೂಮಿಕಾ ರೂಮ್‌ಗೆ ಶಕುನಿ ಮಾವನನ್ನು ಕರೆದುಕೊಂಡು ಹೋಗಿದ್ದಾಳೆ. ಆದರೆ ಕಬೋಡ್‌ನಲ್ಲಿ ಇನ್ವೆಸ್ಟಿಗೇಷನ್‌ಗೆ ಬಳಸಿದ ಯಾವುದೇ ದಾಖಲೆಗಳು ಸಹ ಇಲ್ಲ.

Amruthadhare Serial Gautam Diwan Senses Danger Ahead What Happens Next

ಇದನ್ನು ನೋಡಿದ ಶಕುನಿ ಮಾವ, ಏನ್ ಸಿಸ್ಟರ್ ರೆಕಾರ್ಡಿಂಗ್‌... ರೆಕಾರ್ಡಿಂಗ್ ಅಂತ ಹೇಳ್ದೆ ನೋಡಲ್ಲಿ ಏನೂ ಇಲ್ವಲ್ಲ ಅಂತ ಹೇಳಿದ್ದಾನೆ. ಅದಕ್ಕೆ ಶಕುಂತಲಾ ದೇವಿ ಇಲ್ಲ ಅಣ್ಣ... ನಾನೇ ನನ್ನ ಕಣ್ಣಾರೆ ನೋಡಿದ್ದೀನಿ. ರೆಕಾರ್ಡಿಂಗ್‌ನ ಕೇಳಿಸಿಕೊಂಡಿದ್ದೀನಿ ಜೈ ಏನೆಲ್ಲ ಮಾತನಾಡುತ್ತಿದ್ದ ಎನ್ನುವುದೆಲ್ಲ ಇದರಲ್ಲಿ ರೆಕಾರ್ಡ್ ಆಗಿತ್ತು. ಇದನ್ನು ನೋಡಿ ಮನಸ್ಸಿನಲ್ಲಿಯೇ ಶಕುನಿ ಮಾವ, ಅವನೇನೋ ಮನೆ ಹಾಳು ಮಾಡುವ ಕೆಲಸ ಮಾಡಿದ್ದಾನೆ, ಇವರೇನೋ ಮಾಡಿರ್ತಾರೆ. ಹೇಗಾದರೂ ಡೈವರ್ಟ್ ಮಾಡಬೇಕು ಅಂತ ಸಿಸ್ಟರ್‌ ಅದೇನೋ ಕಲ್ಪನೆಗೆ ರೂಪಕೊಟ್ಟಿದ್ಯ ಅಂತ ಹೇಳಿದ್ದಾನೆ. ಶಕುನಿ ಮಾವನ ಮಾತುಗಳಿಗೆ ಶಕುಂತಲಾ ದೇವಿ ಒಪ್ಪಿಕೊಂಡಿಲ್ಲ. ನನಗೆನು ಹುಚ್ಚ ಅಂತ ಪ್ರಶ್ನಿಸಿದ್ದಾಳೆ.

Amruthadhare Serial: ಗೌತಮ್ ದಿವಾನ್‌ಗೆ ಸಿಕ್ಕಿದೆ ಮನದರಸಿಗೆ ಬಂದಿರೋ ಆಪತ್ತಿನ ಸುಳಿವು!

ಗೌತಮ್ ದಿವಾನ್‌ಗೆ ಭೂಮಿಕಾ ಯಾವುದೋ ಸಂಕಷ್ಟದಲ್ಲಿ ಸಿಲುಕಿದ್ದಾಳೆ ಎನ್ನುವ ಅನುಮಾನ ಶುರುವಾಗಿದೆ. ಭೂಮಿಕಾ ಅವರಿಗೆ ಪದೇ ಪದೇ ಫೋನ್ ಮಾಡ್ತಾ ಇದ್ದಿನಿ ಅವರು ಕಾಲ್ ರಿಸೀವ್ ಮಾಡ್ತಿಲ್ಲ ಅಂತ ಗೌತಮ್, ಶಕುಂತಲಾ ದೇವಿಗೆ ಕಾಲ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ಶಕುಂತಲಾ ಹೇಗೆ ಹೇಳಬೇಕು ಅಂತ ಗೊತ್ತಿಲ್ಲಪ್ಪ ಭೂಮಿಕಾ ಮನೆಯಲ್ಲಿ ಇಲ್ಲ. ಭೂಮಿಕನಾ ಪೊಲೀಸ್ ಅವರು ಸ್ಟೇಷನ್‌ಗೆ ಕರ್ಸಿದ್ದಾರೆ ಅಂತ ಹೇಳಿದ್ದಾಳೆ.

ಜೈದೇವ್ ಕಾಣಿಸುತ್ತಿಲ್ಲ ಅವನು ಮಿಸ್ಸಿಂಗ್ ಅಂತ ಯಾರೋ ಕಂಪ್ಲೇಂಟ್ ಕೊಟ್ಟಿದ್ದಾರೆ. ಅದಕ್ಕೆ ಪೊಲೀಸ್ ಭೂಮಿಕ ಅವರನ್ನ ಪೊಲೀಸ್ ಸ್ಟೇಷನ್‌ಗೆ ಇನ್ವೆಸ್ಟಿಗೇಷನ್‌ಗೆ ಕರೆದುಕೊಂಡು ಹೋಗಿದ್ದಾರೆ ಅಂತ ಹೇಳಿದ್ದಾಳೆ. ಅವನು ಕಾಣೆ ಆಗಿರುವುದಕ್ಕೂ ಭೂಮಿಕಾಗೂ ಏನು ಸಂಬಂಧ ಎನ್ನುವ ಗೌತಮ್ ಪ್ರಶ್ನೆಗೆ ಅವನು ಕಾಣೆ ಆಗುವುದಕ್ಕೂ ಮೊದಲು ಭೂಮಿಕಾಗೆ ಫೋನ್ ಮಾಡಿದ್ನಂತೆ ಶಕುಂತಲಾ ದೇವಿ ಹೇಳಿದ್ದಾಳೆ. ಜೈದೇವ್ ಭೂಮಿಕಾಗೆ ಯಾಕೆ ಫೋನ್ ಮಾಡಿದ್ದಾನೆ ಎನ್ನುವ ವಿಚಾರವು ಅನುಮಾನಕ್ಕೆ ಕಾರಣವಾಗಿದೆ ಎಂದ ಗೌತಮ್ ದಿವಾನ್ ಹೇಳಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+