Amruthadhaare: ಅಮೃತಧಾರೆ ಮಹಾ ತಿರುವು: ಜನುಮದ ಜೋಡಿ ದೂರ ದೂರ!
Amruthadhaare: ಕನ್ನಡದ ಟಾಪ್ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾರೆ ಸೀರಿಯಲ್ ಇದೀಗ ರೋಚಕ ತಿರುವುಪಡೆದುಕೊಂಡಿದೆ. ಆದರೆ ಈ ಸೀರಿಯಲ್‌ನಲ್ಲಿ ಈ ರೀತಿ ಹೊಸ ತಿರುವು ತರುತ್ತಿರುವುದಕ್ಕೆ ಪ್ರೇಕ್ಷಕರು ಅಚ್ಚರಿ ಹಾಗೂ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್ ಹಲವು ಕಾರಣಗಳಿಗೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅದರಲ್ಲೂ ಕಳೆದ 10 ದಿನಗಳಿಂದ ಅಮೃತಧಾರೆ ಸೀರಿಯಲ್ ಮೂಡಿಬರುತ್ತಿರುವ ದೃಶ್ಯಗಳು ಹಾಗೂ ಸನ್ನಿವೇಶಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದವು. ಆದರೆ ಇದೀಗ ಬಂದಿರುವ ಮಹಾ ತಿರುವು ಅಮೃತಧಾರೆ ಸೀರಿಯಲ್‌ನ ದಿಕ್ಕನ್ನೇ ಬದಲಾಯಿಸಲಿದೆ.
ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಶಕುಂತಲಾ ಷಡ್ಯಂತ್ರ ಗೆದ್ದಿದೆ! ಆದರೆ ದೈವ ನಿರ್ಣಯ ಬೇರೇನೇ ಇದೆ! ಜೋಡಿ ಹೃದಯಗಳ ಯುಗಳ ಗೀತೆ ಮುಂದುವರೆದಿದೆ ಎನ್ನುವ ಸಾಲುಗಳೊಂದಿಗೆ ಅಮೃತಧಾರೆಯ ಹೊಸ ಪ್ರೋಮೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ಶಕುಂತಲಾ - ಭೂಮಿಕಾಗೆ ನಿನಗೆ ಹುಟ್ಟಿದ್ದು ಎರಡು ಮಕ್ಕಳು ಅದರಲ್ಲಿ ಒಂದು ಮಗವನ್ನು ಕಣ್ಣು ಬಿಡುವುದಕ್ಕಿಂತ ಮುಂಚೆಯೇ ಮುಗ್ಸಿಬಿಟ್ಟಿದ್ದೇವೆ. ಆ ವಿಷಯ ಗೌತಮ್‌ಗೂ ಗೊತ್ತಿದೆ. ಆದರೆ ಆ ವಿಷಯವನ್ನ ಅವನು ನಿನ್ನಿಂದ ಮುಚ್ಚಿಟ್ಟಿದ್ದಾನೆ.

ಇನ್ನೊಂದು ಮಗುವನ್ನ ನಿನ್ನ ಕಣ್ಣಮುಂದೆಯೇ ಮುಗಿಸಬೇಕು ಅಂತಾ ನಾನು ಅಂದುಕೊಂಡಿದ್ದೀನಿ. ನಿನಗೆ ಈ ಮಗುವಿನ ಮೇಲೆ ಆಸೆ ಇದ್ದರೆ, ಈ ಮನೆ ಬಿಟ್ಟು ತೊಲಗು ಎಂದು ಶಕುಂತಲಾ ಹೇಳಿರುವುದು ಇದೆ. ನನ್ನ ಮತ್ತು ಗೌತಮ್ ಅವರ ಜವಾಬ್ದಾರಿ ನಿಮ್ಮದು ಎಂದು ದೇವರ ಮುಂದೆ ಹೇಳಿದ್ದಾರೆ ಭೂಮಿಕಾ. ಇದನ್ನು ಹೇಳಿ ಮನೆ ಬಿಟ್ಟು ಹೋಗುತ್ತಿರುವ ದೃಶ್ಯವನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಇದಕ್ಕೂ ಶಾಕ್ ಕೊಡುವ ತಿರುವುಗಳನ್ನೂ ಇದರಲ್ಲಿ ಕೊಡಲಾಗಿದೆ.
ಇನ್ನು ನನ್ನ ಮಾತಿಗೆ ಹೆದರಿ ಭೂಮಿಕಾ ಮನೆನೇ ಬಿಟ್ಟು ಹೋಗಿಬಿಟ್ಟಳು ಅಂತಾ ಶಕುಂತಲಾ ಹೇಳಿದ್ದು, ಇದು ಗೌತಮ್ ದಿವಾನ್ ಕಿವಿಗೆ ಬಿದ್ದಿದೆ. ಇನ್ನು ಗೌತಮ್ ನಾನು ಹಾಕುವ ತಾಳಕ್ಕೆ ಕುಣಿಯಬೇಕು ಎಂದಿದ್ದಾರೆ. ಆಗ ಗೌತಮ್ ವಾವ್ಹ್ ನಾನು ನಿಮ್ಮನ್ನು ಹೆತ್ತ ತಾಯಿ ಎಂದುಕೊಂಡಿದ್ದೆ. ಆದರೆ ನೀವು ಪ್ರೀತಿ ಬದಲು ನನಗೆ ವಿಷ ಕೊಟ್ಟು ಬಿಟ್ಟರಿ, ಇಷ್ಟೆಲ್ಲಾ ನೀವು ಮಾಡಿದ್ದು ಕರಗುವ ಆಸ್ತಿಗಾಗಿಯೇ ಅಲ್ವಾ. ಎಲ್ಲಾನೂ ನೀವೇ ತಿಂದು ತೇಗಿ ಅಂತಾ ಆಸ್ತಿ ಪತ್ರಗಳನ್ನು ಶಕುಂತಲಾ ಮುಖದ ಮೇಲೆ ಎಸೆದು ಹೋಗಿದ್ದಾರೆ.
ನನಗೆ ಬೇಕಾಗಿರುವುದು ಕರಗದೆ ಇರುವ ಪ್ರೀತಿ ಅದು ಭೂಮಿಕಾ. ಎಲ್ಲೇ ಇದ್ದರೂ ನಾನು ಭೂಮಿಕಾ ಅವರನ್ನು ಹುಡುಕುತ್ತೇನೆ ಎಂದು ಅಗರ್ಭ ಶ್ರೀಮಂತ ಗೌತಮ್ ದಿವಾನ್ ಅವರು ಮನೆ & ಆಸ್ತಿ ಎಲ್ಲವನ್ನೂ ಬಿಟ್ಟು ಕಾರ್ ಡ್ರೈವರ್ ಆಗಿ ಬದಲಾಗಿರುವುದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಅಲ್ಲದೇ ದೈವ ನಿರ್ಣಯ 5 ವರ್ಷಗಳ ನಂತರ... ಭೂಮಿಕಾ ಮತ್ತು ಮಗು ಸಿಗುವಂತೆ ತೋರಿಸಲಾಗಿದೆ. ಈ ರೋಚಕ ತಿರುವಿನ ಬಗ್ಗೆ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications