ಲಿವಿಂಗ್ ಟುಗೆದರ್‌ನಲ್ಲಿದ್ದಾರಾ ನಟಿ ಐಶ್ವರ್ಯಾ ಸಿಂಧೋಗಿ & ನಟ ಶಿಶಿರ್ ಶಾಸ್ತ್ರಿ?
ಬಿಗ್ ಬಾಸ್ ಬಳಿಕ ನಟ ಶಿಶಿರ್ ಶಾಸ್ತ್ರಿ 'ಗಂಧದ ಗುಡಿ' ಸೀರಿಯಲ್ ಮೂಲಕ ಮತ್ತೆ ಕಿರುತೆರೆಯಲ್ಲಿ ಮಿಂಚಲು ಹೊರಟಿದ್ದಾರೆ. ಬಿಗ್ ಬಾಸ್‌ನಲ್ಲಿ ಜೋಡಿಯಾಗಿದ್ದ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯಾ ಸಿಂಧೋಗಿ ನಿಜ ಜೀವನದಲ್ಲೂ ಮದುವೆಯಾಗ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಪೂರಕವಾಗಿ ಇಬ್ಬರೂ ಒಟ್ಟಿಗೆ ಪ್ರವಾಸ ಹೋಗುವುದು, ರೀಲ್ಸ್ ಮಾಡುವುದು ಕಂಡುಬಂದಿತ್ತು. ಅಲ್ಲದೆ ಶಿಶಿರ್-ಐಶ್ವರ್ಯಾ ಲಿವಿಂಗ್ ಟುಗೆದರ್‌ನಲ್ಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಈ ಬಗ್ಗೆ ಶಿಶಿರ್ ಶಾಸ್ತ್ರಿ ಕೊನೆಗೂ ಮೌನ ಮುರಿದಿದ್ದಾರೆ.
'ಇಂಡಸ್ಟ್ರಿಗೆ ಬಂದಾಗಿನಿಂದ ಇಂತಹ ವಿಚಾರಗಳಿಗೆ ತಲೆಕೆಡಿಸಿಕೊಳ್ಳೋದನ್ನ ಬಿಟ್ಟೆ. ಮೊದಲು ಸ್ವಲ್ಪ ಮನಸ್ಸಿಗೆ ಹಾಕೋತಿದ್ದೆ. ಸಂಬಂಧ ಸೃಷ್ಟಿ ಮಾಡ್ತಾರೆ ಅಂದ್ರೆ ಅದು ಅವರಲ್ಲಿರೋ ಲೋಪ. ಯಾರ ಜೊತೆಗೆ ಯಾವ ಸಂಬಂಧ ಇದೆ ಅನ್ನೋ ಕ್ಲಾರಿಟಿ ನನಗಿದೆ. ಜನ ಅದಕ್ಕೆ ಬೇರೆ ಅರ್ಥ ಕೊಡೋದಕ್ಕೆ ಹೋದರೆ ಅದು ಅವರ ಸಮಸ್ಯೆ. ಮನೆಯಲ್ಲೂ ಇಂತಹ ಪೋಸ್ಟ್ ನೋಡಿದಾಗ ನಕ್ಕೊಂಡು ಎಂಜಾಯ್ ಮಾಡ್ತಾರೆ' ಎಂದಿದ್ದಾರೆ.

'ಕ್ಲಾರಿಟಿ ಬಂದ ಮೇಲೆ ಮದುವೆ'
'ನೂರಕ್ಕೆ ನೂರರಷ್ಟು ಕ್ಲಾರಿಟಿ ಬಂದ ಮೇಲಷ್ಟೇ ಮದುವೆ ಆಗಬೇಕು. ಮದುವೆ ಅನ್ನೋದು ಇಲ್ಲಿ ಎರಡು ವ್ಯಕ್ತಿಗಳ ನಡುವೆ ನಡೆಯೋದಲ್ಲ. ಎರಡು ಕುಟುಂಬಗಳು ಒಂದಾಗುತ್ತೆ. ಹಾಗಾಗಿ ಆ ಕ್ಷಣಕ್ಕೆ ಪ್ರೀತಿಯಾಗೋದು, ಅರೆಬರೆ ಕ್ಲಾರಿಟಿ ತಗೊಂಡು ಮದುವೆಯಾಗಲು ಮುಂದಾದ್ರೆ ಎಲ್ಲರಿಗೂ ಎಫೆಕ್ಟ್ ಆಗುತ್ತೆ. ನೀವು ನಾಳೆ ದಿನ ಚೆನ್ನಾಗಿಲ್ಲ ಅಂದಾಗ ಎರಡೂ ಕುಟುಂಬಗಳು ನೊಂದಿಕೊಳ್ಳುತ್ತವೆ' ಎಂದು ಶಿಶಿರ್ ಹೇಳಿದ್ದಾರೆ.
'ಹಾಗಾಗಿ ಮದುವೆ ಆಗುವವರು ಕ್ಲಾರಿಟಿ ತಗೊಂಡ ಮೇಲೆ ನಿರ್ಧಾರ ತೆಗೆದುಕೊಳ್ಳಿ. ನಾನು ಕೂಡ ಅದನ್ನೇ ಫಾಲೋ ಮಾಡ್ತಿದ್ದೀನಿ. ಈಗ ನಾನು ಕೆಲಸದ ವಿಚಾರವಾಗಿ ತುಂಬಾ ಬ್ಯುಸಿಯಾಗಿದ್ದೀನಿ. ಈಗಷ್ಟೇ ಗಂಧದ ಗುಡಿ ಹೊಸ ಸೀರಿಯಲ್ ಶುರುವಾಗಿದೆ. ಹಾಗಾಗಿ ಸದ್ಯಕ್ಕೆ ಮದುವೆ ಪ್ಲ್ಯಾನ್ ಏನಿಲ್ಲ' ಎಂದು ಶಿಶಿರ್ ಸ್ಪಷ್ಟಪಡಿಸಿದ್ದಾರೆ.
'ಲಿವಿಂಗ್ ಟುಗೆದರ್ ಅರ್ಥ ಗೊತ್ತಾ?'
'ಇಬ್ಬರೂ ಒಂದೇ ಮನೇಲಿ ಒಟ್ಟಿಗೆ ಬದುಕೋದು ಲಿನ್ ಇನ್. ಆದರೆ ನನಗೆ ಅಂತ ಒಂದು ಮನೆ ಇದೆ. ನಾನು ನನ್ನ ಅಪ್ಪ ನಮ್ಮನೆಯಲ್ಲಿ ಇದ್ದೀವಿ. ಐಶ್ವರ್ಯಾ ಕೂಡ ತುಂಬಾ ಕಷ್ಟ ಪಡುತ್ತಾ ಅವರ ಮನೆಯಲ್ಲಿ ಇದ್ದಾರೆ. ಇಬ್ಬರ ಪ್ರಪಂಚಗಳು ಬೇರೆ, ನಾವು ಯಾವ ಲಿವಿಂಗ್‌ನಲ್ಲೂ ಇಲ್ಲ. ಇಂತಹ ವಿಚಾರವನ್ನು ಹೇಳುವ ಮುನ್ನ ಸ್ವಲ್ಪ ಯೋಚಿಸಿ' ಎಂದು ಶಿಶಿರ್ ಗರಂ ಆಗಿದ್ದಾರೆ.
'ಲಿವಿಂಗ್ ಟುಗೆದರ್‌ನ ಅರ್ಥ ಗೊತ್ತಿಲ್ಲದೆ ದಯವಿಟ್ಟು ಯಾರೂ ಮಾತನಾಡಬೇಡಿ. ಐಶ್ವರ್ಯ ಅವರ ಮನೆಯಲ್ಲಿದ್ದಾರೆ. ನಾನು ನಮ್ಮ ಮನೆಯಲ್ಲಿದ್ದೀನಿ. ಮುಂದೆ ಅಂತಹ ಜಂಟಿಯಾಗುವ ಯೋಚನೆಗಳು ಸದ್ಯಕ್ಕಿಲ್ಲ. ಮುಂದೆ ಏನಾಗುತ್ತೋ ಗೊತ್ತಿಲ್ಲ, ಎಲ್ಲ ದೇವರಿಗೆ ಬಿಟ್ಟಿದ್ದು' ಎಂದಿದ್ದಾರೆ ಶಿಶಿರ್.












Click it and Unblock the Notifications