ನನ್ನ ಹಳೆಯ ಬಾಯ್​ಫ್ರೆಂಡ್ ನೆನಪಿಗೆ ಬಂದ: ಬಿಗ್‌ ಬಾಸ್‌ ಮನೆಯಲ್ಲಿ ಕಣ್ಣೀರು ಹಾಕಿದ ಐಶ್ವರ್ಯಾ

ಬಿಗ್​ ಬಾಸ್ ಕನ್ನಡ ಪ್ರತಿ ಸೀಸನ್‌ ನಲ್ಲೂ ಪ್ರೀತಿ-ಪ್ರೇಮದ ಹಲವು ಸಂಗತಿಗಳು ಕಂಡು ಬಂದಿವೆ. ಈ ಬಾರಿಯ ಬಿಗ್‌ ಬಾಸ್‌ ​ ಕನ್ನಡ 11ರ ಮನೆಯಲ್ಲಿ ಪ್ರತಿ ಸ್ಪರ್ಧಿಯೂ ಬಳಿಯ ಹಂಚಿಕೊಳ್ಳದ ವಿಚಾರವಿದ್ದರೆ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಂಡಿದ್ದಾರೆ.

ಕನ್ಫೆಷನ್ ರೂಮ್​ನಲ್ಲಿ ಎಲ್ಲರೂ ತಮ್ಮ ಬದುಕಿನ ನೋವಿನ ಸಂದರ್ಭವನ್ನು ಮೆಲುಕು ಹಾಕಿದ್ದಾರೆ. ಪ್ರತಿ ಬಾರಿಯೂ ಬಿಗ್ ಬಾಸ್ ಮನೆ ಒಳಗೆ ಹಲವು ವಿಚಾರಗಳಿಗೆ ಅಳುತ್ತಿದ್ದರು. ಆದರೆ, ಇದೀಗ ಹಳೆಯ ನೆನಪುಗಳನ್ನ ಹೇಳಿಕೊಂಡು ಐಶ್ವರ್ಯಾ ಅವರು ಕಣ್ಣೀರು ಹಾಕಿದ್ದಾರೆ. ಐಶ್ವರ್ಯಾ ಅವರು ತಂದೆ-ತಾಯಿ ಇಲ್ಲದೆ ಬೆಳೆದವರು. ಅವರು ಸಣ್ಣ ವಯಸ್ಸಲ್ಲೇ ಪಾಲಕರನ್ನು ಕಳೆದುಕೊಂಡರು. ಈ ದುಃಖ ಅವರನ್ನು ಸದಾ ಕಾಡುತ್ತದೆ. ಇದರ ಜೊತೆಗೆ ಬ್ರೇಕಪ್ ವಿಚಾರವೂ ಅವರಿಗೆ ಸಾಕಷ್ಟು ನೋವು ಮಾಡಿದೆ ಎಂದು ಶಿಶಿರ್ ಬಳಿ ಈ ವಿಚಾರ ರಿವೀಲ್ ಮಾಡಿದ್ದಾರೆ.

Aishwarya shindogi cried In Bigg Boss Kannada house

ನಿಮಗೆಲ್ಲ ಮನೆಯಿಂದ ಡ್ರೆಸ್ ಕಳಿಸುತ್ತಾರೆ. ಆಗ ನನಗೆ ಒಂಥರಾ ಆಗುತ್ತದೆ' ಎನ್ನುತ್ತಾ ಮತ್ತೆ ಕಣ್ಣೀರು ಹಾಕಿದರು. ನನ್ನ ಹಳೆಯ ಬಾಯ್​ಫ್ರೆಂಡ್ ನೆನಪಿಗೆ ಬಂದ. ನನಗೆ ಬ್ರೇಕಪ್ ಆಗಿ ಆರು ತಿಂಗಳು ಕಳೆದಿವೆ ಎಂದು ಐಶ್ವರ್ಯಾ ಅವರು ಹೇಳಿಕೊಂಡಿದ್ದಾರೆ. ಆ ಬಳಿಕ ಶಿಶಿರ್ ಅವರು ಐಶ್ವರ್ಯಾ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ಆದರೆ, ಅವರು ಸಮಾಧಾನ ಆಗಲಿಲ್ಲ.ನಾನು ಹೊರಕ್ಕೆ ಹೋಗಿ ನಿನಗೆ ಬಟ್ಟೆ ಕಳುಹಿಸಲೇ' ಎಂದು ಕೇಳಿದರು ಶಿಶಿರ್. ಇದಕ್ಕೆ ಬೇಡ ಎಂಬ ಉತ್ತರವನ್ನ ಐಶ್ವರ್ಯಾ ಅವರು ನೋಡಿದರು.

ಇನ್ನೂ ಮೋಕ್ಷಿತಾ ಪೈ ಅವರು ಸಹ ತಮ್ಮ ನೋವನ್ನು ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಂಡಿದ್ದಾರೆ. ಒಂದು ವರ್ಷದಿಂದ ಮನೆಯಲ್ಲಿ ಮದುವೆಗೆ ಒತ್ತಾಯ ಮಾಡಲಾಗುತ್ತಿದೆ. ನನಗಿರುವ ಜವಾಬ್ದಾರಿಗಳು. ನಾನು ಇಲ್ಲಿಗೆ ಬರಲು ಅಮ್ಮ ಕಾರಣ. ಒಂದು ವರ್ಷದಿಂದ ಮದುವೆಗೆ ಒತ್ತಾಯ ಮಾಡುತ್ತಿದ್ದಾರೆ. ನನ್ನ ತಮ್ಮ ಫಿಸಿಕಲಿ ಚಾಲೆಂಜಿಂಗ್ ಆಗಿರುವವನಾಗಿರುವುದಿಂದ ಮನೆಗೆ ಮಗ ಮತ್ತು ಮಗಳು ಎರಡೂ ನಾನೇ ಆಗಿದ್ದೇನೆ. ಒಂದು ವೇಳೆ ಮದುವೆ ಆದರೆ ಮನೆಯವರನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆ ಇದೆ ಎಂದು ಮನಸ್ಸಿನ ಬಾರವನ್ನ ಹೊರಹಾಕಿದ್ದಾರೆ.

ನಾನು ಮದುವೆಯಾದರೇ.. ಮದುವೆಯಾದ ಹುಡುಗ ಎಲ್ಲಿಂದ ಅಪ್ಪ-ಅಮ್ಮನಿಂದ ದೂರ ಮಾಡುತ್ತಾನೆ ಎನ್ನುವ ಭಯ ಇದೆ. ಮದುವೆ ಆದರೆ ಎಲ್ಲಿ ನಿಮ್ಮಿಂದ ದೂರ ಆಗ್ತೀನೋ ಎನ್ನುವ ಭಯ ಇದೆ. ಇದರಿಂದ ಮದುವೆ ಮುಂದಕ್ಕೆ ಹಾಕಿ ನಿಮಗೆ ನೋವು ಕೊಟ್ಟಿದ್ದೇನೆ. ನಾನು ನಿನಗೆ ಯಾವತ್ತೂ ಮಿಸ್‌ ಯೂ ಅಂತ ಹೇಳಿಲ್ಲ ಅಮ್ಮ ಆದರೆ ಈಗ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಬಿಗ್ ಬಾಸ್​ಗೆ ಬರಬೇಕು ಎಂಬುದು ನಿಮ್ಮ ಕನಸು. ಹಾಗಾಗಿ ನಿಮಗೆ ನಿರಾಸೆ ಮಾಡಲ್ಲ ಎಂದು ಬಿಗ್‌ ಬಾಸ್‌ ಸ್ಪರ್ಧಿ ಮೋಕ್ಷಿತಾ ಪೈ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+