'ಮದುವೆ ಆಗ್ಲಿಕ್ ಹೆಣ್ ಸಿಗ್ತಿಲ್ಲ ವಿಚಾರ ಮಾಡಿ' ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಸೆಲೆಬ್ರಿಟಿಗಳಿಗೆ ನೆಟ್ಟಿಗರ ಕಿವಿ ಮಾತು...
ಕನ್ನಡದ ರ್‍ಯಾಪರ್ ಚಂದನ್ ಶೆಟ್ಟಿ ಹಾಗೂ ಸೆಲೆಬ್ರಿಟಿ ನಿವೇದಿತಾ ಗೌಡ ಅವರ ವಿಚ್ಚೇದನದ ಶಾಕ್‌ನಿಂದ ಅಭಿಮಾನಿಗಳು ಇನ್ನೂ ಹೊರಬಂದಿಲ್ಲ. ಇದರ ಬೆನ್ನಲ್ಲೆ ದೊಡ್ಮನೆ ಮೊಮ್ಮಗ ಯುವ ರಾಜಕುಮಾರ್ ತಮ್ಮ ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು ನೆಟ್ಟಿಗರು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಸೆಲೆಬ್ರಿಟಿಗಳಿಗೆ ಏನಾಗಿದೆ? ಯಾಕಿಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ? ಅವರು ತಮ್ಮ ಅಭಿಮಾನಿಗಳಿಗೆ ಯಾವ ಸಂದೇಶವನ್ನು ರವಾನಿಸುತ್ತಾರೆ ಎಂಬಿತ್ಯಾದಿ ಗಂಭೀರ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ. ಇನ್ನೂ ಕೆಲವರು ಹಾಸ್ಯಾಸ್ಪದವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಾಗಾದರೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ ಒಂದು ಬಾರಿ ನೋಡುವ ಬನ್ನಿ...

ಸೆಲೆಬ್ರಿಟಿಗಳಿಗೆ ನೆಟ್ಟಿಗರ ಕಿವಿ ಮಾತು
'ವಿವಾಹ ವಿಚ್ಚೇದನ ಅನ್ನೋದು ಕಲಿಯುಗದಲ್ಲಿ ಸಾಮಾನ್ಯವಾಗಿದೆ. ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ' ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
'ಸೆಲೆಬ್ರಿಟಿಗಳ ಖಾಸಗಿ ವಿಚಾರಗಳನ್ನು ಗೌರವಿಸಬೇಕು. ಕೆಲವರು ತಮ್ಮ ವೈಯಕ್ತಿಕ ಬೆಳವಣಿಗೆಗಾಗಿ ಅವರ ವಿಡಿಯೋ ಹಾಗೂ ತಪ್ಪಾಗಿ ಅವರನ್ನು ಬಿಂಬಿಸುವುದು ಒಳ್ಳೆಯದಲ್ಲ' ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
'ಚಂದನ್ ಶೆಟ್ಟಿ ಬಳಿಕ ದೊಡ್ಮನೆ ಕುಡಿ ಯುವರಾಜ್ ವಿಚ್ಚೇದನಕ್ಕೆ ಮುಂದಾಗಿದ್ದಾರೆ. ಡಾ. ರಾಜಕುಮಾರ್ ಅವರ ಕುಟುಂಬ ನಮ್ಮೆಲ್ಲರಿಗೂ ಮಾದರಿಯಾಗಿತ್ತು. ಆದರೆ ದೊಡ್ಮನೆಯಲ್ಲಿ ಇಂತಹ ಘಟನೆಗಳನ್ನು ನೋಡಲು ಯಾರೂ ಕೂಡ ಬಯಸುವುದಿಲ್ಲ' ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನೂ ಕೆಲವರು 'ಮದುವೆ ಆಗ್ಲಿಕ್ ಹೆಣ್ ಸಿಗ್ತಿಲ್ಲ.... ವಿಚಾರ ಮಾಡಿ ಡಿವೋರ್ಸ್ ಕೊಡಿ' ಅಂತ ಅಪಹಾಸ್ಯ ಮಾಡಿದ್ದಾರೆ.
'ಚಂದನ್ ಆಯ್ತು, ಯುವ ರಾಜಕುಮಾರ್ ಆಯ್ತು... ಮುಂದೆ?' ಎಂದು ಇನ್ನೂ ಕೆಲವರು ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ ಕೆಲವರು ಬಂಗಾರದಂತಹ ಸಂಸಾರದಲ್ಲಿ ಹುಳಿ ಹಿಂಡಿದ ಮೂರನೇ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ. ಸೆಲೆಬ್ರಿಟಿಗಳು ಸಾಮಾನ್ಯ ಜನರಲ್ಲ. ಅವರನ್ನು ಕಂಡು ಅನುಸರಿಸುವವರು ತುಂಬಾ ಜನ ಅಭಿಮಾನಿಗಳು ಇದ್ದಾರೆ. ಅವರಂತೆ ಜೀವನ ಶೈಲಿಯನ್ನೂ ರೂಢಿಸಿಕೊಳ್ಳುವವರು ನಮ್ಮ ನಡುವೆ ಸಾಕಷ್ಟು ಜನ ಇದ್ದಾರೆ. ಹೀಗಿರುವಾಗ ಸೆಲೆಬ್ರಿಟಿಗಳ ಇಂಥಹ ನಿರ್ಧಾರ ಅಭಿಮಾನಿಗಳ ಮನಸ್ಸಿನಲ್ಲಿ ಕೆಟ್ಟ ಪರಿಣಾಮ ಬೀರಬಹುದು. ಅವರೂ ಕೂಡ ಇಂತಹ ನಿರ್ಧಾರಕ್ಕೆ ಮುಂದಾಗಬಹುದು. ಹೀಗಾಗಿ ಸೆಲೆಬ್ರಿಟಿಗಳು ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇದೆಲ್ಲವನ್ನೂ ಯೋಚಿಸಬೇಕು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಚೇದನ
ರ್‍ಯಾಪರ್ ಚಂದನ್ ಶೆಟ್ಟಿ ಹಾಗೂ ಸೆಲೆಬ್ರಿಟಿ ನಿವೇದಿತಾ ಗೌಡ ಅವರ ವಿಚ್ಚೇದನದ ಪಡೆದುಕೊಂಡಿದ್ದಾರೆ. ಆದರೆ ಇದಕ್ಕೆ ಕಾರಣ ಏನು ಎನ್ನುವುದು ಮಾತ್ರ ಈವರೆಗೂ ತಿಳಿದು ಬಂದಿಲ್ಲ. ಅವರಿಬ್ಬರೂ ಇಂದು ಸುದ್ದಿಗೋಷ್ಟಿಯನ್ನು ಕರೆದಿದ್ದು ವಿಚ್ಚೇದನಕ್ಕೆ ಕಾರಣವನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.
ದೊಡ್ಮನೆ ಮೊಮ್ಮಗ ಯುವ ರಾಜಕುಮಾರ್ ವಿಚ್ಚೇದನ
ಇನ್ನೂ ನವರಸ ಡಾ. ರಾಜಕುಮಾರ್ ಅವರ ಮೊಮ್ಮಗ ಯುವ ರಾಜಕುಮಾರ್ ಅವರು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದು ದೊಡ್ಮನೆ ಅಭಿಮಾನಿಗಳಿಗೆ ಬೇಸರ ತಂದಿದೆ. ಯುವ ರಾಜಕುಮಾರ್ ಅವರ ಐದು ವರ್ಷದ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ. ಪತ್ನಿ ಶ್ರೀದೇವಿಯಿಂದ ಯುವ ರಾಜಕುಮಾರ್ ದೂರವಾಗಲು ಬಯಸಿದ್ದಾರೆ. ಒಟ್ಟಿನಲ್ಲಿ ಸೆಲೆಬ್ರಿಟಿಗಳ ವಿಚ್ಚೇದನದ ನಿರ್ಧಾರಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications