Vaishnavi Gowda: ಅರೇ... ಸೀರೆಯುಟ್ಟರೂ 'ಸೀತಾ'ನಾ ಟ್ರೋಲ್ ಮಾಡ್ತಾ ಇರೋದೇಕೆ ಫ್ಯಾನ್ಸ್!
ಜನ ಧಾರಾವಾಹಿಗಳನ್ನು ಎಷ್ಟು ಇಷ್ಟಪಡುತ್ತಾರೋ ಅಷ್ಟೇ ಅದರಲ್ಲಿನ ಪಾತ್ರಧಾರಿಗಳು ಧರಿಸುವ ಬಟ್ಟೆ ಬಗ್ಗೆಯೂ ಹೆಚ್ಚು ಗಮನ ಹರಿಸುತ್ತಾರೆ. ತಮ್ಮ ನೆಚ್ಚಿನ ಪಾತ್ರಧಾರಿ ಧರಿಸುವ ಬಟ್ಟೆಗಳು ಹೀಗೆಯೇ ಇರಬೇಕು ಎಂದು ಅವರನ್ನು ಫಾಲೋ ಮಾಡುವವರ ಸಂಖ್ಯೆ ದೊಡ್ಡದಾಗಿಯೇ ಇದೆ. ಸದ್ಯಕ್ಕೆ ಇಷ್ಟೇಲ್ಲಾ ಯಾಕೆ ಹೇಳ್ತಾ ಇರೋದು ಅಂದ್ರೆ ಫೇಮಸ್ ನಟಿಯೊಬ್ಬರು ತಮ್ಮ ಡ್ರೆಸ್ಸಿಂಗ್ ಸೆನ್ಸ್‌ಗೆ ಸಕತ್ ಟ್ರೋಲ್‌ಗೆ ಒಳಗಾಗಿದ್ದಾರೆ.
ಹೌದು... ಜೀ ಕನ್ನಡದ ಸಖತ್ ಫೇಮಸ್ ಸೀರಿಯಲ್ ಸೀತಾ ರಾಮ. ಈ ಧಾರಾವಾಹಿಯಲ್ಲಿ ಈಗ ರಾಮ ಮತ್ತು ಸೀತೆ ಮದುವೆ ಸಂಭ್ರಮ ನಡೆಯುತ್ತಿದೆ. ಧಾರಾವಾಹಿಯಲ್ಲಿ ಮಿಡಲ್ ಕ್ಲಾಸ್ ಮನೆಯ ಮಗಳಾಗಿ ಕಾಣಿಸಿಕೊಂಡಿರುವ ನಟಿ ವೈಷ್ಣವಿ ಗೌಡ ಸಿಂಪಲ್ ಆಗಿ ಚೂಡಿದಾರ ಧರಿಸುತ್ತಿದ್ದಾರೆ. ಮದುವೆ ಕಾರ್ಯಕ್ರಮಗಳಲ್ಲಿ ಸೀರೆ ಉಟ್ಟು ಮಿಂಚುತ್ತಿದ್ದಾರೆ. ಸದ್ಯ ಇಬ್ಬರ ಮದುವೆ ಮಾತುಕತೆಗಾಗಿ ಸೀತಾ ಮನೆಗೆ ದೇಸಾಯಿ ಕುಟುಂಬ ಬಂದಿದೆ.

ಸೀತಾಗೆ ಇಲ್ವಾ ಡ್ರೆಸ್ಸಿಂಗ್ ಸೆನ್ಸ್!?
ಹೆಣ್ಣು ಕೇಳಲು ಶಾಂತಮ್ಮನ ವಠಾರಕ್ಕೆ ದೇಸಾಯಿ ಕುಟುಂಬ ಬಂದಿದೆ. ಈ ವೇಳೆ ಸಿಹಿ ಎಲ್ಲಾ ಜವಾಬ್ದಾರಿ ವಹಿಸಿ ತಾಂಬೂಲವನ್ನು ಕೊಟ್ಟಿದ್ದಾಳೆ. ಆದರೆ, ಪ್ರೇಕ್ಷಕರಿಗೆ ಇಲ್ಲಿ ಸಮಸ್ಯೆ ಕಾಣಿಸಿರುವುದು ನಟಿ ವೈಷ್ಣವಿ ಗೌಡ ಅವರು ಧರಿಸಿದ್ದ ಸೀರೆಯಲ್ಲಿ. ಹೌದು... ಯಾವುದೇ ಡ್ರೆಸ್ಸಿಂಗ್ ಸೆನ್ಸ್ ಇಲ್ಲದೆ ಇಂತಹ ಸೀರೆ ಧರಿಸಿದ್ದಾರೆ ಎಂದು ಜನ ಸಕತ್ ಟ್ರೋಲ್ ಮಾಡುತ್ತಿದ್ದಾರೆ.
ಧಾರಾವಾಹಿಯ ಈ ಎಪಿಸೋಡ್‌ನಲ್ಲಿ ಸೀತಾ ಕಡುನೀಲಿ ಬಣ್ಣದ ಮೇಲೆ ಬೆಳ್ಳಿ ಬಣ್ಣದ ದೊಡ್ಡ ಹೂಗಳ ಡಿಸೈನ್ ಇರುವ ಸೀರೆ ಧರಿಸಿದ್ದಾರೆ. ಸೀರಿಯಲ್‌ನಲ್ಲಿ ಇದು ಸಿಲ್ವರ್ ಕಲರ್ ಹೂಗಳಂತೆ ಕಾಣಿಸುತ್ತಿದೆ. ಆದರೆ, ಫೋಟೋಗಳಲ್ಲಿ ಗೋಲ್ಡ್ ಕಲರ್ ಕಾಣಿಸುತ್ತಿದೆ. ಈ ಸೀರೆಗೆ ನಟಿ ಗೋಲ್ಡ್ ಕಲರ್ ಬ್ಲೌಸ್ ಧರಿಸಿದ್ದಾರೆ. ಇದು ಮ್ಯಾಚ್ ಆಗುತ್ತಿಲ್ಲ ಎಂದು ಜನ ಕಾಲೆಳೆಯುತ್ತಿದ್ದಾರೆ.

ಯಾಕೆ ಸೀತಾ ಇಂತ ಡ್ರೆಸ್!?
ಸೀತಾ ರಾಮ ಧಾರಾವಾಹಿಯ ಪ್ರೋಮೊಗಳಿಗೂ ಕೂಡ ವೀಕ್ಷಕರು ಯಾಕೆ ಸೀತಾ ಇಂತಹ ಕಾಂಬಿನೇಷನ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮ್ಯಾಚಿಂಗ್ ಮಾಡೋಕೆ ಬರ್ತಾ ಇಲ್ವಾ?, ನಿಮ್ಮ ಬ್ಲೌಸ್ ತುಂಬಾ ಖರಾಬಾಗಿದೆ. ನೋಡೋಕೆ ಸ್ವಲ್ಪ ಕೂಡ ಚೆನ್ನಾಗಿಲ್ಲ.ಗ್ರ್ಯಾಂಡ್ ಡ್ರೆಸ್ ಬೇಕಾಗಿಲ್ಲ, ವಯಸ್ಸು ಆಗಿರುವ ಹಾಗೆ ಕಾಣಿಸುತ್ತಿದೆ. ನಿಮ್ಮ ಯೂಟ್ಯೂಬ್ ಚಾನಲ್‌ಗಾಗಿ ಮಾಡುವ ವೀಡಿಯೋಗಳಲ್ಲಿ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಚೆನ್ನಾಗಿರುತ್ತದೆ. ಸಿರೀಯಲ್‌ನಲ್ಲಿ ಯಾಕೆ ಹೀಗೆ ಎಂದು ಟೀಕಿಸುತ್ತಿದ್ದಾರೆ.
"ಎಲ್ಲಿ ಇಟ್ಟಿದ್ದೆ ತಾಯಿ ಈ ಸೀರೆ ಈ ಬ್ಲೌಸ್ ನಾ .... ಸ್ವಲ್ಪ ಬೇರೆ ಸೀರಿಯಲ್ ಹೀರೋಯಿನ್ ನಾ ನೋಡಿ ಕಲಿಯಮ್ಮ ಡ್ರೆಸ್ ಸೆನ್ಸ್ ಬಗ್ಗೆ', ಈ ಡ್ರೆಸ್ ಸೆಲೆಕ್ಟ್ ಮಾಡಿದ್ದು ಯಾರು..? ತುಂಬಾ ಕೆಟ್ಟದಾಗಿ ಮಾಡುತ್ತಾರೆ', ನಾನು ಯಾವಾಗಲೂ ನಿಮ್ಮ ಡ್ರೆಸ್ಸಿಂಗ್‌ನ ಅಭಿಮಾನಿಯಾಗಿದ್ದೆ. ಆದರೆ ಇತ್ತೀಚಿನ ದಿನಗಳಲ್ಲಿ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಸಂಪೂರ್ಣವಾಗಿ ಹಾಳಾಗಿದೆ, ಸೀತಾ ಪ್ರಿಯಾ ಟ್ರೆಂಡಿಂಗ್ ಅಲ್ಲಿ ಇರೋ ಬಟ್ಟೆ ಮತ್ತು ಆಕ್ಸೆಸರಿಸ್ ಹಾಕೋತಾರೆ ಪ್ರಿಯಾಗೆ ಡ್ರೆಸ್ಸಿಂಗ್ ಸೆನ್ಸ್ ಚೆನ್ನಾಗಿದೆ. ಸೀತಾ ಅಂತು ದಿನದಿಂದ ದಿನಕ್ಕೆ ಕೆಟ್ಟದಾಗಿ ಕಾಣಿಸುತ್ತಿದ್ದಾರೆ, 'ಕೊನೆಯ ಸಂಚಿಕೆಯಲ್ಲಿ ಸೀರೆ ಮತ್ತು ಈ ಸೀರೆಯು ಚೆನ್ನಾಗಿ ಕಾಣುತ್ತಿಲ್ಲ. ಬಟ್ಟೆಗಳನ್ನು ಬದಲಿಸಿ. ನೀವು ತುಂಬಾ ವಯಸ್ಸಾದವರಂತೆ ಕಾಣುತ್ತಿದ್ದಿರಿ', 'ಜಾತ್ರೆ ಸೀರೆ. ದಯವಿಟ್ಟು ಈ ರೀತಿಯ ಸೀರೆಗಳನ್ನು ಉಟ್ಟುಕೊಳ್ಳಬೇಡಿ......' ಹೀಗೆ ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ.












Click it and Unblock the Notifications