ಮದುವೆಯ ನಂತರ ವೈಷ್ಣವಿ ಗೌಡ ವಿದೇಶಕ್ಕೆ ಶಿಫ್ಟ್: ಕರ್ನಾಟಕದಲ್ಲಿ ಇರುವುದಿಲ್ಲ ಕನ್ನಡತಿ
ಕನ್ನಡತಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ತುಂಬಾ ಅದ್ದೂರಿಯಾಗಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈಷ್ಣವಿ ಎಂಗೇಜ್‌ಮೆಂಟ್ ವಿಡಿಯೋ ಹಾಗೂ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿವೆ. ಅಪ್ಪಟ ಕನ್ನಡತಿಯಾದ ವೈಷ್ಣವಿ ಗೌಡ, ಕನ್ನಡದಲ್ಲಿ ಅನೇಕ ಸೀರಿಯಲ್ ಹಾಗೂ ಸಿನಿಮಾ ಮಾಡುವುದರ ಮುಖಾಂತರ ಪ್ರತಿಯೊಬ್ಬರ ಮನೆ ಮಗಳಾದವರು. ಸ್ಪಷ್ಟವಾದ ಕನ್ನಡ, ಸಂಪ್ರದಾಯಸ್ತ ಹುಡುಗಿ ವೈಷ್ಣವಿ ಗೌಡ. ಆದರೆ ಮದುವೆ ಆದ ಬಳಿಕ ಅವರು ಕರ್ನಾಟಕದಲ್ಲಿ ಇರುವುದಿರಲಿ ದೇಶದಲ್ಲೇ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.
ಮಿಲ್ಕಿ ಬ್ಯೂಟಿ ಅಂತ ಕರೆಸಿಕೊಳ್ಳುವ ವೈಷ್ಣವಿಯನ್ನು ನೋಡಿ ಅದೆಷ್ಟೋ ಜನ ಇದ್ದರೆ ಈ ರೀತಿ ಹುಡುಗಿ ಇರಬೇಕು ಅಂದುಕೊಂಡಿರುವುದೇ ಹೆಚ್ಚು. ಕನ್ನಡದ ಹೆಮ್ಮೆಯನ್ನು ಸಾರುವಂತಹ ವೈಷ್ಣವಿಯನ್ನು ಜನ ಇಷ್ಟಪಟ್ಟಿದ್ದು ಅವರು ಅಪ್ಪಟ ಕನ್ನಡತಿ ಎಂದು. ಅವರ ನಿಶ್ಚಿತಾರ್ಥದ ವಿಚಾರ ಕೇಳಿ ತುಂಬಾ ಜನ ಖುಷಿ ಆಗಿದ್ದಾರೆ. ಆದರೆ ಕೆಲವರು ಬೇಸರ ಕೂಡ ಮಾಡಿಕೊಂಡಿದ್ದಾರೆ.

ಇದಕ್ಕೆ ಕಾರಣ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡ ಹುಡುಗನ ಹಿನ್ನಲೆ. ಈ ಬೇಸರ ಯಾಕೆ ಅಂದರೆ ವೈಷ್ಣವಿ ಇನ್ನುಮುಂದೆ ಅಂದರೆ ಮದುವೆ ಆದ ಬಳಿಕ ಕರ್ನಾಟಕದಲ್ಲಿ ಅಲ್ಲಿ ಈ ದೇಶದಲ್ಲೇ ಇರೋದಿಲ್ಲ. ಯಾಕೆಂದರೆ ಹುಡುಗ ಈ ದೇಶದಲ್ಲಿ ಇರುವುದಿಲ್ಲ. ಆದರೆ ವೈಷ್ಣವಿ ಫ್ಯಾನ್ಸ್ ಇದನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ.
ಹೌದು ವೈಷ್ಣವಿ ಯಾವುದೇ ಸಿನಿಮಾ, ಧಾರಾವಾಹಿ ನಟ-ನಟಿಯರಿಗೆ ಕಮ್ಮಿ ಇಲ್ಲದಂತೆ ತುಂಬಾ ಗ್ರ್ಯಾಂಡ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡರು. ಈ ಫೋಟೋಗಳಲ್ಲಿ ಹುಡುಗನನ್ನು ನೋಡುತ್ತಿದ್ದಂತೆ ಅನೇಕ ಜನರು ಅಕಾಯ್ ಹೆಸರನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಎಲ್ಲಾ ಕಡೆ ಅಕಾಯ್ ಅವರನ್ನು ಸರ್ಚ್ ಮಾಡಿದ್ದಾರೆ. ಆದರೆ ಎಲ್ಲಿಯೂ ಕೂಡ ಒಂದೇ ಒಂದು ಸುಳಿವೂ ಕೂಡ ಅಕಾಯ್ ಬಗ್ಗೆ ಸಿಕಿಲ್ಲ. ವೈಷ್ಣವಿ ಗೌಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಾಕಿದ್ದರು. ಆದರೆ ಟ್ಯಾಗ್ ಮಾಡಿಲ್ಲ. ಇದರಿಂದ ಅಕಾಯ್ ಹಿನ್ನೆಲೆ ಬಗ್ಗೆ ಸುಳಿವು ಸಿಕ್ಕಿಲ್ಲ.
ವೈಷ್ಣವಿ ಎಷ್ಟು ಚಂದ ಕನ್ನಡ ಮಾತನಾಡುತ್ತಾರೋ ಅದಕ್ಕೆ ವಿರುದ್ಧವಾಗಿ ಅಕಾಯ್‌ಗೆ ಕನ್ನಡ ಬರೋದಿಲ್ಲ. ಕನ್ನಡ ಬಾರದ ಹುಡುಗನನ್ನು ವೈಷ್ಣವಿ ವರಿಸಲಿದ್ದಾರೆ. ಇದು ಕನ್ನಡಿಗರ ಹೃದಯದ ಬಡಿತವನ್ನು ಹೆಚ್ಚಿಸಿದೆ. ವೈಷ್ಣವಿಗೆ ನಮ್ಮ ರಾಜ್ಯದಲ್ಲಿ ಯಾರೂ ಕೂಡ ಹುಡುಗರು ಸಿಗಲಿಲಲ್ವಾ ಅನ್ನೋ ಪ್ರಶ್ನೆಯನ್ನು ಫ್ಯಾನ್ಸ್ ಹಾಕಿದ್ದಾರೆ.
ಇದೆಲ್ಲದಕ್ಕೂ ವೈಷ್ಣವಿ ಉತ್ತರ ಕೊಟ್ಟಿದ್ದಾರೆ. ನಾನು ಎಲ್ಲಿಗೇ ಹೋದರೂ ಕೂಡ ಹೇಗಿದಿಯಾ ಅಂತ ಕೇಳುವ ಬದಲು ಯಾವಾಗ ಮದುವೆ ಆಗ್ತೀಯಾ ಅಂತ ಕೇಳುವವರೇ ಹೆಚ್ಚಾಗಿದ್ದರು. ಆ ಕಾರಣಕ್ಕೆ ನಾನು ಈ ಹುಡುಗನನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಅಕಾಯ್ ಅವರು ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಾರೆ ಅಂತ ವೈಷ್ಣವಿ ಅವರೇ ಪರಿಚಯ ಮಾಡಿಸಿದ್ದಾರೆ. ಅವರು ಸೆಟಲ್ ಆಗಿರುವುದು ಕೂಡ ಬೇರೆ ದೇಶದಲ್ಲಿ ಎಂದು ಹೇಳಲಾಗುತ್ತಿದೆ. ಅಕಾಯ್ ಏರ್‌ಫೋರ್ಸ್ ಅಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರು ದೇಶದೆಲ್ಲೆಡೆ ಸುತ್ತಬೇಕಾಗುತ್ತದೆ. ಹೀಗಾಗಿ ವೈಷ್ಣವಿ ಗೌಡ ಕೂಡ ಅವರ ಜೊತೆಗೆ ಇರುವ ಕಾರಣ ಕರ್ನಾಟಕದಲ್ಲಿ ಇರುವುದಿಲ್ಲ ಎನ್ನಲಾಗುತ್ತಿದೆ. ಇದು ವೈಷ್ಣವಿ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಒಟ್ಟಿನಲ್ಲಿ ಈ ಹಿಂದೆ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ವೈಷ್ಣವಿ ಗೌಡ ಮದುವೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವುದು ಮಾತ್ರವಲ್ಲದೆ ಪರ ವಿರೋಧ ಕೂಡ ವ್ಯಕ್ತವಾಗಿದೆ.












Click it and Unblock the Notifications