Vaishnavi Gowda: ನಟಿ ವೈಷ್ಣವಿ ಗೌಡಗೆ ಒಲಿದ ಅದೃಷ್ಟ, ಮದುವೆ ಬಳಿಕ ಕೊಟ್ಟರು ದೊಡ್ಡ ಗುಡ್‌ನ್ಯೂಸ್
'ಅಗ್ನಿಸಾಕ್ಷಿ', 'ಸೀತಾರಾಮ' ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಕಳೆದ ಜೂನ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಭಾರತೀಯ ವಾಯುಸೇನೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಅನುಕೂಲ್ ಮಿಶ್ರಾ ಅವರೊಂದಿಗೆ ವೈಷ್ಣವಿ ಮದುವೆಯಾಗಿದ್ದರು. ಬಳಿಕ ವೈಷ್ಣವಿ ಅವರು ನಟನೆಯಿಂದ ದೂರ ಉಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಇನ್ನು ವೈಷ್ಣವಿ ಅವರ ಮದುವೆಯಾಗಿ ಮೂರು ತಿಂಗಳು ಕಳೆದಿದ್ದು, ಆಗಲೇ ದೊಡ್ಡ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
'ಮದುವೆ ಬಳಿಕ ಸಾಕಷ್ಟು ಬದಲಾವಣೆ'
ಈ ಬಗ್ಗೆ ವೈಷ್ಣವಿ ಗೌಡ ತಮ್ಮ ಯುಟ್ಯೂಬ್ ಚಾನಲ್‌ನಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ಮದುವೆ ಬಳಿಕ ಸಾಕಷ್ಟು ಬದಲಾವಣೆಗಳಾಗುತ್ತೆ. ಮದುವೆಗೂ ಮುಂಚೆ ನಾನು ಪ್ರತಿಯೊಂದಕ್ಕೂ ನನ್ನ ತಂದೆ ತಾಯಿ ಮೇಲೆ ಡಿಪೆಂಡ್ ಆಗಿದ್ದೆ. ಈಗ ಪ್ರತಿ ಕೆಲಸನೂ ನಾನೇ ಮಾಡಿಕೊಳ್ಳಬೇಕು. ಈಗ ನನಗೆ ಏನೇ ಬೇಕಾದ್ರೂ ನಾನೇ ಹೋಗಿ ತೆಗೆದುಕೊಳ್ಳಬೇಕು. ಇದೆಲ್ಲ ನನಗೆ ನಿಜಕ್ಕೂ ಹೊಸ ಅನುಭವ. ಇದನ್ನು ನಾನು ಎಂಜಾಯ್ ಕೂಡ ಮಾಡ್ತಿದ್ದೀನಿ' ಎಂದಿದ್ದಾರೆ ವೈಷ್ಣವಿ.

'ಬೆಳಿಗ್ಗೆ ಎದ್ದ ಕೂಡಲೇ ಯೋಗ, ಪ್ರಾಣಾಯಾಮ ಮುಗಿಸಿ ಆರೋಗ್ಯ ದೃಷ್ಟಿಯಿಂದ ಕಷಾಯ ಕುಡಿಯುತ್ತೇನೆ. ಹೊಟ್ಟೆಯುಬ್ಬಿನ ಸಮಸ್ಯೆಗೆ ಇದು ಒಳ್ಳೆಯದು. ಇದನ್ನು ಮುಂದಿನ ವಿಡಿಯೋ ಮಾಹಿತಿ ಹಂಚಿಕೊಳ್ಳುವೆ. ನನಗೆ ದೇವರ ಮಂತ್ರಗಳನ್ನ ಕೇಳೋಕೆ ತುಂಬಾ ಇಷ್ಟ. ಹಾಡು ಕೇಳುತ್ತಲೇ ನನ್ನ ಕೆಲಸಗಳನ್ನು ಮುಂದುವರಿಸುತ್ತೇನೆ' ಎಂದು ತಮ್ಮ ದಿನಚರಿ ಬಗ್ಗೆಯೂ ವೈಷ್ಣವಿ ಮಾತನಾಡಿದ್ದಾರೆ.
ವೆಬ್ ಸಿರೀಸ್‌ನಲ್ಲಿ ವೈಷ್ಣವಿ
ವೈಷ್ಣವಿ ಗೌಡ ಮತ್ತೆ ನಟನೆಗೆ ಮರುಳುತ್ತಾರಾ ಎನ್ನುವ ಪ್ರಶ್ನೆಗೂ ಉತ್ತರಿಸಿದ್ದಾರೆ. 'ತುಂಬಾ ಜನ ಮುಂದಿನ ಪ್ರಾಜೆಕ್ಟ್ ಯಾವುದು ಅಂತ ಕೇಳುತ್ತಿದ್ರು. ಪ್ರೀತಂ ಗುಬ್ಬಿ ಅವರ ಜೊತೆ ಒಂದು ವೆಬ್‌ಸಿರೀಸ್ ಮಾಡುತ್ತಿದ್ದೇವೆ. ಇದರಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಇದೊಂದು ತುಂಬಾ ಡಿಫರೆಂಟ್ ಕ್ಯಾರೆಕ್ಟರ್. ಇಲ್ಲಿವರೆಗೆ ಅಂತಹ ಪಾತ್ರ ನಾನು ಮಾಡಿರಲಿಲ್ಲ. ಇವತ್ತಿನಿಂದ ಶೂಟಿಂಗ್ ಶುರುವಾಗುತ್ತಿದೆ' ಎಂದು ಸಿಹಿಸುದ್ದಿ ಹಂಚಿಕೊಂಡಿದ್ದಾರೆ.

'ವೆಬ್‌ಸಿರೀಸ್‌ನಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ಇಶಿತಾ ವರ್ಷ ಅವರು ಕೂಡ ನಟಿಸುತ್ತಿದ್ದು, ವಿಡಿಯೋದಲ್ಲಿ ಈ ಬಗ್ಗೆ ವೈಷ್ಣವಿ ಪರಿಚಯ ಮಾಡಿಕೊಟ್ಟಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್ ಬಳಿಕ ವೈಷ್ಣವಿ ಹಾಗೂ ಇಶಿತಾ ಮತ್ತೆ ಒಂದಾಗಿದ್ದಾರೆ. ಅಗ್ನಿಸಾಕ್ಷಿ ಶೂಟಿಂಗ್ ವೇಳೆ ಸಿಕ್ಕಾಪಟ್ಟೆ ನಗ್ತಿದ್ವಿ, ಇದೇ ಕಾರಣಕ್ಕೆ ಬೈದಿದ್ದರು ಎಂದು ವೈಷ್ಣವಿ ನೆನೆದಿದ್ದಾರೆ. ಈ ವೆಬ್‌ಸಿರೀಸ್‌ನಲ್ಲೂ ಒಬ್ಬರೂ ಮತ್ತೆ ನಟಿಸುತ್ತಿದ್ದು, ಅಪ್ಡೇಟ್‌ಗಾಗಿ ಕಾಯುತ್ತಿರಿ' ಎಂದು ಕುತೂಹಲ ಮೂಡಿಸಿದ್ದಾರೆ.
ಮ್ಯಾಟ್ರಿಮೋನಿ ಮೂಲಕ ವೈಷ್ಣವಿ ಗೌಡ ಮತ್ತು ಅನುಕೂಲ್ ಮಿಶ್ರಾ ಅವರ ಪರಿಚಯವಾಗಿತ್ತು. ಬಳಿಕ ಎರಡೂ ಕುಟುಂಬಗಳ ಒಪ್ಪಿಗೆಯಂತೆ ಮದುವೆ ನಿಶ್ಚಯವಾಯಿತು. ಜೂನ್ 4ರಂದು ಬೆಂಗಳೂರಿನಲ್ಲಿ ಇವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತ್ತು.












Click it and Unblock the Notifications