ವೈಷ್ಣವಿ ಗೌಡ ಜೊತೆಗೆ ಅನುಕೂಲ ಮಿಶ್ರಾ ಮ್ಯಾಚ್ ಮಾಡಿದ್ದು ಇವರೇ..
ಅಗ್ನಿಸಾಕ್ಷಿ ಹಾಗೂ ಸೀತಾರಾಮ ಧಾರಾವಾಹಿಯ ನಟಿ ವೈಷ್ಣವಿ ಗೌಡ ಕೊನೆಗೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಇನ್ನೇನು ಮದುವೆಗಾಗಿ ಭರದ ಸಿದ್ಧತೆಗಳು ನಡೆದಿವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಚರ್ಚೆಗಳು ಆಗುತ್ತಿವೆ. ವೈಷ್ಣವಿ ಗೌಡ ಅವರನ್ನು ಮದುವೆಯಾಗುವ ಅನುಕೂಲ್ ಮಿಶ್ರಾ ಅವರಿಗೆ ಕನ್ನಡ ಬರುವುದಿಲ್ಲ. ಛತ್ತಿಸ್‌ಗಢದವರಾದ ಅನುಕೂಲ್ ಮಿಶ್ರಾ ಅವರು ಇಂಡಿಯನ್ ಏರ್‌ಫೋರ್ಸ್ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾದರೆ ಇವರಿಬ್ಬರು ಮ್ಯಾಚ್ ಆಗಿದ್ದು ಹೇಗೆ? ಇವರಿಬ್ಬರನ್ನು ಮ್ಯಾಚ್ ಮಾಡಿದವರು ಯಾರು? ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಕಳೆದ ಏಪ್ರಿಲ್ 14ರಂದು (2025) ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಇದಾದ ಬಳಿಕ ವೈಷ್ಣವಿ ಗೌಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡರು, ಹುಡುಗ ಏರ್‌ಪೋರ್ಟ್ ಅಲ್ಲಿ ಕೆಲಸ ಮಾಡುತ್ತಿದ್ದಾರೆ, ಹುಡುಗನ ಹೆಸರು ಅಕಾಯ್ ಎನ್ನುವ ಮಾತುಗಳು ಕೇಳಿ ಬಂದವು. ಇದಕ್ಕೆ ಖುದ್ದು ವೈಷ್ಣವಿ ಅವರೇ ವಿಡಿಯೋ ಹಂಚಿಕೊಂಡು ಸ್ಪಷ್ಟನೆ ನೀಡಿದರು. ಅವರು ಅಕಾಯ್ ಅಲ್ಲ ಅನುಕೂಲ್ ಮಿಶ್ರಾ. ಇಂಡಿಯನ್ ಏರ್‌ಫೋರ್ಸ್ ಅಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವೈಷ್ಣವಿ ತಮ್ಮ ಭಾವಿ ಪತಿಯ ಬಗ್ಗೆ ವಿವರಣೆ ನೀಡಿದ್ದರು.

ಇದಾದ ನಂತರ ಅನುಕೂಲ್ ಮಿಶ್ರಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸರ್ಚ್ ಮಾಡಲಾಗಿದೆ. ಆದರೆ ಯಾವುದೇ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಖಾತೆಯನ್ನು ಅನುಕೂಲ್ ಮಿಶ್ರಾ ಹೊಂದಿಲ್ಲ. ಹೀಗಾಗಿ ಅವರ ಬಗ್ಗೆ ಹೆಚ್ಚೇನು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ.
ಅಲ್ಲದೆ ವಿಡಿಯೋದಲ್ಲಿ ಖುದ್ದು ವೈಷ್ಣವಿ ಅವರೇ ಅನುಕೂಲ್ ಅವರಿಗೆ ಕನ್ನಡ ಬರುವುದಿಲ್ಲ. ಆದರೂ ಕನ್ನಡದಲ್ಲಿ ಒಂದು ಮಾತನ್ನು ಹೇಳಲು ಕಲಿತಿದ್ದಾರೆ ಎಂದಿದ್ದರು. ಆಗ ಅನುಕೂಲ್ 'ನಾನು ನಿನ್ನ ತುಂಬಾ ಪ್ರೀತಿಸುತ್ತೇನೆ' ಎಂದು ಹೇಳಲು ತುಂಬಾ ಕಷ್ಟಪಟ್ಟರು. ಅಲ್ಲಿಗೆ ಅನುಕೂಲ್ ಮಿಶ್ರಾ ಕನ್ನಡದವರು ಅಲ್ಲ ಅನ್ನೋದು ಸ್ಪಷ್ಟವಾಗಿದೆ.

ಈ ವಿಚಾರ ಮಾತ್ರವಲ್ಲದೆ ವೈಷ್ಣವಿ ಮದುವೆ ಆದ ಬಳಿಕ ಕರ್ನಾಟಕದಲ್ಲಿ ಇರುವುದಿಲ್ಲ ಅನ್ನೋ ಚರ್ಚೆಗಳು ಹೆಚ್ಚಾಗಿದ್ದವು. ಇದಕ್ಕೆಲ್ಲಾ ವೈಷ್ಣವಿ ಅವರೇ ಸ್ವಷ್ಟನೆ ನೀಡಿ ತಾವು ಬೆಂಗಳೂರಿನಲ್ಲೇ ಇರುವುದಾಗಿ ಹೇಳಿದ್ದಾರೆ. 300 ಮದುವೆ ಪ್ರಪೋಸಲ್ ಬಂದಿದ್ದರೂ ಕೂಡ ವೈಷ್ಣವಿ ಮದುವೆ ಮಾಡಿಕೊಳ್ಳಲು ಇಷ್ಟ ಪಟ್ಟಿದ್ದು ಅನುಕೂಲ್ ಅವರನ್ನು. ಹಾಗಾದರೆ ಈ ಸಂಬಂಧ ಕೂಡ ಬಂದಿದ್ದು ಹೇಗೆ? ಯಾರಿಂದ?
ವೈಷ್ಣವಿ ಮದುವೆ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ದ ತಾಯಿ ಭಾನು ರವಿಕುಮಾರ್ ಮೂರು ನಾಲ್ಕು ಕಡೆ ವೈಷ್ಣವಿ ಅವರ ಪ್ರೊಫೈಲ್ ಹಂಚಿಕೊಂಡಿದ್ದರು. ಅದರಲ್ಲಿ ಜ್ಯೋತಿ ನಿವಾಸ ಕಾಲೇಜು ಎದುರಿಗೆ ಇರುವ ಮ್ಯಾಟ್ರಿಮೋನಿಯ ಘಟ್ ಬಂಧನ್ ಸರ್ವಿಸ್ ಕೂಡ ಒಂದು. ಇಲ್ಲಿ ತಾಯಿ ಭಾನು ಅವರು ವೈಷ್ಣವಿಗೆ ಐಎಎಸ್, ಐಪಿಎಸ್ ಆಫೀಸರ್‌ಗಳು ನಮ್ಮ ಜಾತಿಯವರು ಒಳ್ಳೆಯ ಹುಡುಗ ಬೇಕು ಅಂತ ಹೇಳಿದ್ದರಂತೆ. ಇಲ್ಲಿನ ಸಿಬ್ಬಂದಿಯಾದ ನೇಹಾ ಅವರು ಅನುಕೂಲ್ ಮಿಶ್ರಾ ಅವರ ಪ್ರೋಫೈಲ್ ನೀಡಿದ್ದಾರೆ. ಆಗ ಮೊದಲು ಅವರ ಜಾತಕ ವೈಷ್ಣವಿ ಜಾತಕ ತೋರಿಸಿ ಇಬ್ಬರು ಜಾತಕ ಕೂಡಿ ಬಂದ ಬಳಿಕವಷ್ಟೇ ಕುಟುಂಬಸ್ಥರು ಭೇಟಿ ಮಾಡಿದ್ದಾರೆ.
ನಂತರ ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ದೇವಸ್ಥಾನದಲ್ಲಿ ಭೇಟಿ ಮಾಡಿ ಅಂದಿನಿಂದ ಮಾತನಾಡಲು ಶುರು ಮಾಡುತ್ತಾರೆ. ಬಳಿಕ ಒಂದು ವರ್ಷ ಸತತವಾಗಿ ವೈಷ್ ಹಾಗೂ ಅನುಕೂಲ್ ಅವರು ಮಾತನಾಡುತ್ತಾ ಭೇಟಿ ಕೂಡ ಮಾಡುತ್ತಾರೆ. ಕುಟುಂಬಸ್ಥರೂ ಕೂಡ ಪರಸ್ಪರ ಆಗಾಗ ಭೇಟಿ ಮಾಡುತ್ತಲೇ ಇರುತ್ತಾರೆ. ಹೀಗೆ ವೈಷ್ಣವಿ ಹಾಗೂ ಅನುಕೂಲ್ ಮಿಶ್ರಾ ಪರಸ್ಪರ ಅರ್ಥ ಮಾಡಿಕೊಂಡ ನಂತರ ಮದುವೆ ಆಗಲು ನಿರ್ಧರಿಸಿದ್ದಾರೆ.
ವೈಷ್ಣವಿ ಹಾಗೂ ಅನುಕೂಲ್ ಮಿಶ್ರಾ ಭೆಟಿ ಮಾಡಿ ಒಂದು ವರ್ಷದ ನಂತರ ವೈಷ್ಣವಿ ನಿಶ್ಚಿತಾರ್ಥ ಆಗಿದೆ. ಇದೀಗ ಮದುವೆ ತಯಾರಿ ಕೂಡ ನಡೆದಿವೆ. ಒಟ್ಟಿನಲ್ಲಿ ವೈಷ್ಣವಿ ಹಾಗೂ ಅನುಕೂಲ್ ಮಿಶ್ರಾ ಅವರ ಜೋಡಿ ಅದ್ಭುತವಾಗಿದ್ದು, ಎಲ್ಲರೂ ಮೆಚ್ಚಿಕೊಂಡಿದ್ದಾರೆ.












Click it and Unblock the Notifications