Tanisha Kuppanda: ಆ ಒಂದು ಬಯಕೆ ಈಡೇರಿಸಿಕೊಳ್ಳಲು ಎಂಟು ವರ್ಷ ಕಾದ ಬೆಂಕಿ ತನಿಷಾ
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಜನ್ 10 ಮುಗಿದು ವರ್ಷಗಳೇ ಕಳೆದರೂ ಈ ಸೀಜನ್‌ನ ಸ್ಪರ್ಧಿಗಳು ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ಪೈಕಿ ಬೆಂಕಿ ಖ್ಯಾತಿಯ ತನಿಷಾ ಕುಪ್ಪಂಡ ಕೂಡ ಪ್ರಮುಖರು. ಹೋಟೆಲ್ ಉದ್ಯಮದಲ್ಲಿದ್ದ ತನಿಷಾ ಕುಪ್ಪಂಡ ಇತ್ತೀಚಿಗೆ ಸಿಲ್ವರ್ ಜ್ಯುವೆಲ್ಲರಿ ಉದ್ಯಮಕ್ಕೆ ಕಾಲಿಟ್ಟಿದ್ದರು.
ಕುಪ್ಪಂಡಾಸ್ ಎಂಬ ತಮ್ಮದೇ ಬ್ರ್ಯಾಂಡ್ ಪ್ರಾರಂಭಿಸಿರುವ ತನಿಷಾ ಸಿಲ್ವರ್ ಜ್ಯುವೆಲ್ಲರಿ ಎರಡನೇ ಔಟ್‌ಲೆಟ್ ಕೂಡ ಆರಂಭಿಸಿದ್ದರು. ನಟನೆ ಜೊತೆಗೆ ಉದ್ಯಮಿಯಾಗಿರುವ ತನಿಷಾ ತಮ್ಮ ಪ್ರೊಡಕ್ಷನ್ ಹೌಸ್ ಕೂಡ ಪ್ರಾರಂಭಿಸುತ್ತಿದ್ದಾರೆ. ಸದ್ಯ ಉದ್ಯಮದಲ್ಲೂ ಯಶಸ್ಸು ಗಳಿಸುತ್ತಿರುವ ತನಿಷಾ ಅವರ ಗಳಿಕೆ ಮತ್ತು ಉಳಿಕೆ ಹೇಗಿದೆ..? ಎನ್ನುವುದರ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ.

ನ್ಯಾಷನಲ್ ಟಿವಿ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ಮೊದಲಿನಿಂದಲೂ ನಾನು ಮಾಡಿರುವ ಉಳಿತಾಯ ಏನೂ ಇಲ್ಲ. ನಾನು ಉಳಿತಾಯ ಮಾಡಿದ್ದು ಕಡಿಮೆ. ದುಡ್ಡು ಬರುತ್ತಿತ್ತು ಅದನ್ನು ಉಳಿಸಿಕೊಂಡಿಲ್ಲ ನಾನು ಅಷ್ಟೇ. ಬಂದ ಹಣವನ್ನು ಉಳಿತಾಯ ಮಾಡುವುದು ಒಂದು ಕಲೆ. ಅದನ್ನು ಇತ್ತೀಚಿಗೆ ನಾನು ಕಲಿತದ್ದು. ಕಳೆದ ನಾಲ್ಕೈದು ವರ್ಷದಿಂದ ನಾನು ಹಣ ಉಳಿತಾಯ ಮಾಡುವುದನ್ನು ಕಲಿತೆ' ಎಂದರು.
'ನನಗೆ ನನ್ನಿಷ್ಟದ ಒಂದು ಕಾರು ತೆಗೆದುಕೊಳ್ಳಲು ಎಂಟು ವರ್ಷ ಬೇಕಾಯ್ತು. ಬಹುಷಃ ನನ್ನ ಉಳಿತಾಯದ ಬಗ್ಗೆ ಅರ್ಥ ಆಗಿರಬಹುದು. ನಾವು ಧಾರಾವಾಹಿಗಳಲ್ಲಿ ಎಷ್ಟು ಗಳಿಸುತ್ತೇವೋ ಅಷ್ಟೇ ಖರ್ಚು ಇರುತ್ತದೆ. ನಮ್ಮ ಗಳಿಕೆ ಹೆಚ್ಚಾದಷ್ಟು ನಮ್ಮ ಖರ್ಚು ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಯಾರೋ ಮುಂದೆ ಶೋ ಆಫ್ ಮಾಡಲು ಅಲ್ಲ. ಆದರೆ ನಮ್ಮನ್ನು ನಾವು ಹಾಗೆ ಇಟ್ಟುಕೊಳ್ಳುವುದು ರೂಢಿ ಆಗುತ್ತದೆ'ಎಂದರು.

'ಹೀಗಾಗಿ ರೂಢಿನ ಬಿಟ್ಟು ಕೊಡಲು ಆಗುವುದಿಲ್ಲ. ಜೊತೆಗೆ ನಾವು ಹಾಗೆ ಇದ್ದಾಗ ನಮಗೆ ಮತ್ತೊಂದು ಒಳ್ಳೆ ಅವಕಾಶ ಸಿಗಬಹುದು. ನಾನು ಅಂದ ಚಂದದ ಬಗ್ಗೆ ಹೇಳುತ್ತಿಲ್ಲ. ಆದರೆ ಬಟ್ಟೆ ಆಗಿರಬಹುದು, ಚಪ್ಪಳಿಗಳಾಗಿರಬಹುದು, ನಾವು ಬಳಸುವ ಮೇಕಪ್ ಆಗರಬಹುದು, ಪ್ರತಿಯೊಂದು ನಮಗೆ ಲೆಕ್ಕಕ್ಕೆ ಬರುತ್ತದೆ ಯಾಕೆಂದರೆ ನಾವು ಕಲಾವಿದರು.
ಮೇಕಪ್ ಇಲ್ಲದೇ ಓಡಾಡುವುದು ನಮಗೂ ಇಷ್ಟ ಇರುತ್ತದೆ. ಆದರೆ ಅಲ್ಲಿ ಯಾರೋ ನೋಡಿ ರೋಗಿ ತರ ಕಾಣಿಸುತ್ತಿದ್ದೀಯಾ ಅಂತಾ ಹೇಳಿ ಬಿಡುತ್ತಾರೆ. ಎಲ್ಲವೂ ಲೆಕ್ಕಕ್ಕೆ ಬರುತ್ತದೆ. ಕೆಲವೊಂದು ಸಲ ನಮಗೆ ನಮ್ಮ ಹಣವನ್ನು ಎಲ್ಲಿ ಹಾಕಿರುತ್ತೇವೆ ಎಂದು ಗೊತ್ತಾಗುದಿಲ್ಲ. ಮನೆಗಳಲ್ಲಿಯೂ ಸಹ ಜವಾಬ್ದಾರಿಗಳಿರುತ್ತದೆ. ಅದನೆಲ್ಲಾ ಖುರ್ಚು ಎನ್ನಲು ಆಗುವುದಿಲ್ಲ ಎಂದು ತನಿಷಾ ಹೇಳಿದರು.
ಈಗ ನಾಲ್ಕೈದು ವರ್ಷದಿಂದ ಸಣ್ಣದಾಗಿ ಉಳಿತಾಯ ಮಾಡುವುದು ಹೇಗೆ ಅಂತಾ ಕಲಿತೆ. ಜೊತೆಗೆ ಉಳಿಸಿದನ್ನು ಎಲ್ಲಿ ಬಂಡವಾಳ ಹಾಕಬೇಕು ಅಂತಾ ಕಲಿತೆ. ನಾವು ನೂರು ರೂಪಾಯಿ ದುಡಿದರೆ ಹತ್ತು ರೂಪಾಯಿ ಉಳಿಸಿರುತ್ತೇವೆ. ಆ ಹತ್ತು ರೂಪಾಯಿನಾ ಬಂಡವಾಳ ಹಾಕಿದರೆ ಹನ್ನೆರಡು ರೂಪಾಯಿ ಆಗುತ್ತಲ್ಲ. ಅದು ಉಳಿತಾಯದಲ್ಲಿ ಹೋಗುತ್ತದೆ. ಅದು ನನಗೆ ಅರ್ಥ ಆಗಲು ಸಮಯ ತೆಗೆದುಕೊಂಡಿತು. ಈಗ ಆ ಉಳಿತಾಯವನ್ನು ಒಳ್ಳೆ ಕೆಲಸಕ್ಕೆ ಹಾಕುತ್ತಿದ್ದೇನೆ ಎಂದರು.












Click it and Unblock the Notifications