ಖಾಸಗಿ ಫೋಟೋ ವೈರಲ್‌ ಹಿಂದಿನ ಸತ್ಯವೇನು? ನಟಿ ಸೋನು ಗೌಡ ಹೇಳಿದ್ದೇನು?

ಚಿಕ್ಕವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ಸು ಕಂಡ ಇಂತಿ ನಿನ್ನ ಪ್ರೀತಿಯ ನಟಿ ಸೋನು ಗೌಡ, ವೈಯಕ್ತಿಕ ಜೀವನದಲ್ಲಿ ಬಹಳ ನೋವು ಕಂಡವರು. ಪ್ರೀತಿ, ಮದುವೆ, ಡಿವೋರ್ಸ್‌, ಬಹಳ ಚಿಕ್ಕವಯಸ್ಸಿನಲ್ಲಿಯೇ ಎಲ್ಲವನ್ನೂ ಅನುಭವಿಸಿದವರು. ದಾಂಪತ್ಯದಲ್ಲಿ ಬಿರುಕಿನ ನೋವಿನ ನಡುವೆ ಅವರ ಖಾಸಗಿ ಫೋಟೋಗಳು ಕೂಡ ವೈರಲ್‌ ಆಗಿದ್ದವು. ಆ ಸಮಯದಲ್ಲಿ ಅವರು ಅನುಭವಿಸಿದ ಮಾನಸಿಕ ಹಿಂಸೆಯ ಬಗ್ಗೆ ಸ್ವತಃ ನಟಿ ಸೋನು ಗೌಡ ಮಾತನಾಡಿದ್ದಾರೆ.

ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅವರು, 'ನನ್ನ ಮಾಜಿ ಪತಿ ನಮ್ಮ ವೈಯಕ್ತಿಕ ಫೋಟೋಗಳನ್ನು ವೈರಲ್‌ ಮಾಡಿರಲು ಸಾಧ್ಯವೇ ಇಲ್ಲ. ನಾವು ಫೋಟೋ ತೆಗೆದುಕೊಂಡಿರುವುದು ಹೌದು. ಎಲ್ಲರೂ ಫೋಟೋ ತೆಗೆದುಕೊಂಡಿರುತ್ತಾರೆ. ಹಾಗೇ ನಾವು ಮದುವೆಯಾದ ಹೊಸತರಲ್ಲಿ ಫೋಟೋ ತೆಗೆದುಕೊಂಡಿದ್ದೇವು. ಆದರೆ ಕೂಡಲೇ ಅವುಗಳನ್ನು ಡಿಲೀಟ್‌ ಕೂಡ ಮಾಡಿದ್ದೆವು. ಅದು ಗೂಗಲ್‌ ಡ್ರೈವ್‌ನಲ್ಲಿ ಹೋಗಿ ಬ್ಯಾಕ್‌ಅಪ್‌ ಆಗಿತ್ತು. ಅದು ನನ್ನ ಫೇಸ್‌ಬುಕ್‌ ಅಕೌಂಟ್‌ನಿಂದಲೇ ಹ್ಯಾಕ್‌ ಆಗಿದೆ ಅನಿಸುತ್ತದೆ' ಎಂದರು.

Actress Sonu Gowda Addresses The Viral Photos And The Impact On Her Personal Life

'ಅಲ್ಲಿ ಸಿಕ್ಕ ಇಮೇಲ್‌ ಐಡಿ ತೆಗೆದುಕೊಂಡು ಹ್ಯಾಕ್‌ ಮಾಡಿ, ಬ್ಯಾಕ್‌ಅಪ್‌ ಮಾಡಿ ಫೋಟೋಗಳನ್ನು ತೆಗೆದುಕೊಂಡರು. ಅದು ಅವರು ಮಾಡಿರಲು ಸಾಧ್ಯವೇ ಇಲ್ಲ. ಖಂಡಿತವಾಗಿಯೂ ಇದನ್ನು ಯಾರೋ ಮೂರನೇ ವ್ಯಕ್ತಿ ಮಾಡಿರುವುದು. ಯಾಕೆಂದರೆ ಅವರಿಗೆ ಹಾಕಬೇಕು ಅಂದಿದ್ದರೆ ನಾವು ಎಷ್ಟೇಷ್ಟೋ ದೊಡ್ಡ ಜಗಳಗಳನ್ನು ಮಾಡಿದ್ದೆವು ಅವಾಗಲೇ ಹಾಕಬಹುದಿತ್ತು' ಎಂದು ಹೇಳಿದರು.

'ಈ ಘಟನೆ ಆಗುತ್ತಿದ್ದಂತೆ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಗೂಗಲ್‌ ಮೇಲೆ ಕೇಸ್‌ ಹಾಕಿದ್ದೇವು. ಫೋಟೋಗಳನ್ನು ತೆಗೆದು ಹಾಕುವಂತೆ ಕೇಳಿಕೊಂಡೆವು. ನಾನು ಕೂಡ ಎಲ್ಲರಿಗೂ ಮನವಿ ಮಾಡಿದ್ದೆ, ಮೀಡಿಯಾದವರಿಗೂ ಕೇಳಿಕೊಂಡಿದ್ದೆ. ನಾವಿಬ್ಬರು ತುಂಬಾ ಶಾಕ್‌ನಲ್ಲಿದ್ದೆವು. ದಯವಿಟ್ಟು ಏನನ್ನೂ ಹಾಕಬೇಡಿ ಅಂತಾ ಮನವಿ ಮಾಡಿಕೊಂಡಿದ್ದೆವು. ಫೋಟೋಗಳು ಹೊರಗಡೆ ಬರುತ್ತಿದ್ದಂತೆ ಎಲ್ಲರೂ ಸುದ್ದಿ ಮಾಡಿದರು. ಆ ಸಮಯದಲ್ಲಿ ನನಗೆ ತುಂಬಾ ಕಷ್ಟದ ದಿನವಾಗಿತ್ತು. ಕೆಲವೊಂದು ಮಾಧ್ಯಮದವರೇ ಇಂಜಕ್ಷನ್‌ ಆರ್ಡರ್‌ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಕೆಲವರು ನನ್ನ ಜೊತೆಗೆ ನಿಂತುಕೊಂಡರು' ಎಂದರು.

Actress Sonu Gowda Addresses The Viral Photos And The Impact On Her Personal Life

'ಇದರಿಂದ ಹೊರಬರಲು ತುಂಬಾ ಸಮಯ ತೆಗೆದುಕೊಂಡಿತು. ಈಗಲೂ ಹೊರ ಬಂದಿದ್ದೇನೋ ಇಲ್ಲವೋ ಅನಿಸುತ್ತದೆ. ಈಗಲೂ ನನಗೆ ಯಾರನ್ನಾದರೂ ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಭಯವಾಗುತ್ತದೆ. ಈಗ ನನಗಿರುವುದು ಹಳೆಯ ಸ್ನೇಹಿತರೇ. ಹೊಸಬರು ಜೀವನದಲ್ಲಿ ಬಂದಾಗ ಖುಷಿಯಾಗುತ್ತದೆ. ಆದರೆ ಅವರಿಂದ ಮತ್ತದೇ ಬೇಜಾರಾದಾಗ ಸಾಕಪ್ಪ ಈ ಜೀವನ, ಇವರ ಸಹವಾಸ ಬೇಡ ಅನಿಸುತ್ತದೆ. ಮತ್ತೆ ನನ್ನ ಹಳೆಯ ಸ್ನೇಹಿತರೇ ಸಾಕು. ನಾನು ಅವರ ಜೊತೆಯಲ್ಲೇ ಖುಷಿಯಾಗಿ ಇದ್ದು ಬಿಡುತ್ತೇನೆ ಅನಿಸುತ್ತದೆ' ಎಂದು ಹೇಳಿದರು.

'ಈ ಘಟನೆ ಎಲ್ಲಾ ಆದ ಮೇಲೆ ನಾನು ಯಾರ ಜೊತೆಯಲ್ಲೂ ಮಾತನಾಡುತ್ತಿರಲಿಲ್ಲ. ನಾನು, ನನ್ನ ಕೆಲಸ ಅಷ್ಟೇ ಅಂದುಕೊಂಡು ಸುಮ್ಮನೆ ಇರುತ್ತಿದ್ದೆ. ನಾನು ಎಲ್ಲೇ ಹೋದರು ಹುಡುಗರು ನನ್ನ ಬೇರೆ ರೀತಿ ನೋಡುತ್ತಿದ್ದಾರೆ. ನಾನು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೀನಿ ಅಂದರೆ ಅವರು ನನ್ನ ಬೇರೆ ರೀತಿ ಕರೆಯುತ್ತಿದ್ದಾರೆ ಅಂತಾ ಅನಿಸಿತು. ಯಾವ ಹುಡುಗಿಗೂ ಈ ರೀತಿ ಆಗಬಾರದು. ಈ ರೀತಿ ಆದಾಗ ನಮ್ಮ ಆಲೋಚನೆಗಳು ಬದಲಾಗುತ್ತದೆ. ಯಾರೋ ಹುಡುಗ ಜೀವನದಲ್ಲಿ ಬಂದಾಗ ಅವನು ಬೇರೆ ರೀತಿಯಲ್ಲೇ ನೋಡುತ್ತಿದ್ದಾನೆ ಅಂತಾ ಅನಿಸಲು ಶುರುವಾಗುತ್ತದೆ. ನಾನು ಪ್ರೀತಿಯಲ್ಲಿ ದುರಾದೃಷ್ಟವಂತೆ ಹೀಗಾಗಿ ಮತ್ತೆ ಅದರ ಹಿಂದೆ ಹೋಗುವುದು ಬೇಡ ಅಂತಾ ಅನಿಸುತ್ತದೆ' ಎಂದು ನಟಿ ಸೋನುಗೌಡ ತಮ್ಮ ಜೀವನದಲ್ಲಿ ನಡೆದ ಅತ್ಯಂತ ಕಹಿ ಘಟನೆಯ ಬಗ್ಗೆ ನೋವು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+