ಲಂಗ-ದಾವಣಿ, ಸೀರೆ ಹಾಕಿದ್ರೆ ದರ್ಶನ್ ಸರ್ ಬೈತಾರೆ: ನಟಿ ಸೋನಲ್ ಹೀಗಂದಿದ್ದೇಕೆ?
ಸ್ಯಾಂಡಲ್‌ವುಡ್ ನಟಿ ಸೋನಲ್ ಮೊಂಥೆರೋ (Sonal Monteiro) ಹಾಗೂ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಅವರು ಕೆಲ ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಬಳಿಕ ಸೋನಲ್ ಅವರು ನಟಿಸಿರುವ ಮೊದಲ ಸಿನಿಮಾ ಮಾದೇವ ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಲು ರೆಡಿಯಾಗಿದೆ. ಈ ಸಿನಿಮಾ ಪ್ರಚಾರದ ವೇಳೆ ಸೋನಲ್ ಅವರು ತಮ್ಮ ಮದುವೆ ಜೀವನದ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ನನಗೆ ಮದುವೆ ಆಗಿದೆ ಅಂತಾ ಅನಿಸುತ್ತಿಲ್ಲ ಎಂದು ಸೋನಲ್ ಹೇಳಿರುವುದು ಶಾಕ್ ನೀಡಿದೆ. ಅಲ್ಲದೆ ನಟ ದರ್ಶನ್ ಅವರ ಬಗ್ಗೆಯೂ ಅಚ್ಚರಿ ವಿಚಾರಗಳನ್ನು ಸೋನಲ್ ರಿವೀಲ್ ಮಾಡಿದ್ದಾರೆ.
ತಮ್ಮ ಸಿನಿಮಾ ಬಗ್ಗೆ ಮಾತನಾಡಿರುವ ಸೋನಲ್, ಮದುವೆಯಾದ ನಂತರ ನನ್ನ ಮೊದಲ ಸಿನಿಮಾ ರಿಲೀಸ್ ಆಗ್ತಿದೆ. ಮೊದಲ ಸಿನಿಮಾ ಆದ ಕಾರಣ ಅಷ್ಟೇ ಖುಷಿ, ಭಯ ಎರಡೂ ಇದೆ. ತುಂಬಾ ಒಳ್ಳೆಯ ಸಿನಿಮಾ ಇದು. ವಿನೋದ್ ಪ್ರಭಾಕರ್ ಅವರು ಇಲ್ಲಿವರೆಗೆ ಆಕ್ಷನ್ ಪಾತ್ರಗಳಿಗೆ ಹೆಸರಾಗಿದ್ದರು. ಈ ಸಿನಿಮಾದಲ್ಲಿ ಅವರ ಪಾತ್ರ ತುಂಬಾ ವಿಭಿನ್ನ. ಇಲ್ಲಿವರೆಗೆ ನನ್ನನ್ನು ಗ್ಲಾಮರ್ ಲುಕ್‌ನಲ್ಲಿ ನೋಡಿದ್ರಿ, ಈ ಸಿನಿಮಾದಲ್ಲಿ ಕಂಪ್ಲೀಟ್ ಆಗಿ ಲಂಗ ದಾವಣಿಯಲ್ಲೇ ನೋಡ್ತೀರಿ ಎಂದು ಸೋನಲ್ ಹೇಳಿದ್ದಾರೆ.

ʼಮಾದೇವ ಶೂಟಿಂಗ್ ಟೈಮಲ್ಲಿ ದರ್ಶನ್ ಸರ್ ಜೊತೆ ಮಾತನಾಡಿದೆ. ಆಗ ಅವರು ಶೂಟಿಂಗ್ ಹೇಗೆ ಆಗ್ತಿದೆ? ಏನು ನಿನ್ನ ಪಾತ್ರ ಎಂದು ಕೇಳಿದ್ರು. ಅವರಿಗೆ ಜನರಲ್ಲಾಗಿ ನಾನು ಸೀರೆ, ಲಂಗ ದಾವಣಿ ಹಾಕಿದ್ರೆ, ಅಯ್ಯೋ ಥು ನೋಡೋಕಾಗಲ್ಲ ನಿಂಗೆ ಅಂತಾರೆ. ಅವರು ಬ್ರೋ ಬ್ರೋ ಅಂತ ಫಿಕ್ಸ್ ಆಗಿದ್ದಾರೆ. ಅವರೂ ಈ ಸಿನಿಮಾ ನೋಡಬೇಕು ಅನ್ನೋ ಆಸೆ ಇದೆ, ನೋಡೋಣ ಎಂದಿದ್ದಾರೆ. ನಾನು ದರ್ಶನ್ ಸರ್‌ನ ಭೇಟಿಯಾಗೋಕೆ ಟ್ರೈ ಮಾಡಿದೆ. ಇವಾಗ ಅವರು ಶೂಟಿಂಗ್‌ನಲ್ಲಿ ಬ್ಯುಸಿ ಇರುವುದರಿಂದ ಭೇಟಿಯಾಗಲು ಆಗಲಿಲ್ಲ. ಖಂಡಿತವಾಗಿಯೂ ಅವರನ್ನು ಮೀಟ್ ಮಾಡ್ತೀನಿ ಎಂದು ಸೋನಲ್ ಹೇಳಿದ್ದಾರೆ.

ʼನನಗೆ ಮದುವೆ ಆಗಿದೆ ಅನಿಸುತ್ತಿಲ್ಲʼ
ನನ್ನ ಗಂಡ ಮಾದೇವ ಸಿನಿಮಾ ನೋಡಿದ್ರು. ಅವರು ಡೈರೆಕ್ಟ್ ಮಾಡ್ತಾರೆ ನಿಜ. ಆದ್ರೆ ಮನೆಯಲ್ಲಿ ಅವರನ್ನ ನಾನೇ ಡೈರೆಕ್ಟ್ ಮಾಡೋದು ಎಂದು ಸೋನಲ್ ಹೇಳಿದ್ದಾರೆ. ನನಗೆ ಮದುವೆ ಆದ ಮೇಲೆ ಏನೆಲ್ಲ ಚೇಂಜ್ ಆಗುತ್ತೆ ಅನ್ನೋದು ಮೊದಲು ಇತ್ತು. ಆದ್ರೆ ಅದೆಲ್ಲ ಮೈಂಡ್‌ಸೆಟ್‌ನಲ್ಲಿರೋದು ಅಷ್ಟೇ. ನಾವು ನಮ್ಮ ಕೆಲಸವನ್ನು ಚೆನ್ನಾಗಿ ಮಾಡಿಕೊಂಡು ಹೋದರೆ ಜನ ನಮ್ಮ ಕೈಹಿಡೀತಾರೆ. ಇಲ್ಲಿ ಮದುವೆಗೆ ಮುಂಚೆ ಹಾಗೂ ಮದುವೆ ಆದ ಮೇಲೆ ಅನ್ನೋದೆಲ್ಲ ಇಲ್ಲ. ನನಗಂತೂ ಮದುವೆ ಆಗಿದೆ ಅನ್ನೋ ವ್ಯತ್ಯಾಸವೇ ಕಾಣ್ತಿಲ್ಲ. ನನ್ನ ಗಂಡ ತರುಣ್ ಅವರು ಕೂಡ ಸಿನಿಮಾರಂಗದಲ್ಲೇ ಇರುವುದರಿಂದ ಅವರು ಕೂಡ ನನಗೆ ತುಂಬಾ ಸಪೋರ್ಟ್ ಮಾಡ್ತಾರೆ. ಹಾಗಾಗಿ ನನಗೆ ಯಾವುದೇ ವ್ಯತ್ಯಾಸ ಕಾಣ್ತಿಲ್ಲ. ಮೊದಲು ನನಗೆ ಅಭಿಮಾನಿಗಳು ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ ಎಂದಿದ್ದಾರೆ.












Click it and Unblock the Notifications