Tharun Sonal wedding: ಮದುವೆಯಲ್ಲಿ ಭಾವುಕರಾದ ನಟಿ ಸೋನಲ್..
ಇಂದು ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮದುವೆ ಅದ್ದೂರಿಯಾಗಿ ನೆರವೇರಿದೆ. ಕಾಟೇರ ಸಿನಿಮಾದ ಖ್ಯಾತ ನಿರ್ದೇಶಕ ತರುಣ್ ಹಾಗೂ ಸೋನಲ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭದಲ್ಲಿ ಖ್ಯಾತ ನಟ ನಟಿಯರು ಹಾಗೂ ರಾಜಕೀಯ ಗಣ್ಯರು ಆಗಮಿಸಿ ಜೋಡಿಗಳಿಗೆ ಶುಭ ಹಾರೈಸಿದರು. ಈ ವೇಳೆ ಸೋನಲ್ ಕಣ್ಣೀರು ಹಾಕಿದ್ದಾರೆ.
ಹೌದು.. ತರುಣ್ ತಾಳಿ ಕಟ್ಟುವ ಶುಭ ಗಳಿಗೆಯಲ್ಲಿ ಸೋನಲ್ ಭಾವುಕರಾಗಿದ್ದು ಕಂಡು ಬಂದಿದೆ. ಮದುವೆಯಲ್ಲಿ ಗೋಲ್ಡ್ ಹಾಗೂ ರೆಡ್ ಬಾರ್ಡರ್ ಸೀರೆಯಲ್ಲಿ ವಧುವಾಗಿ ಅಲಂಕಾರಗೊಂಡ ಸೋನಾಲ್ ನೋಡುಗರ ಗಮನ ಸೆಳೆದರು. ತರುಣ್ ಸುಧೀರ್ ಕೂಡ ಗೋಲ್ಡ್ ಬಣ್ಣದ ಉಡುಪು ಧರಿಸಿ ಮದುವೆ ಸಮಾರಂಭದಲ್ಲಿ ಮಿಂಚಿದ್ದು ಕಂಡು ಬಂದಿದೆ.

ತರುಣ್ ಹಾಗೂ ಸೋನಲ್‌ದು ಪ್ರೇಮ ವಿವಾಹ. ಖಳನಟ ಸುದೀರ್ ಪುತ್ರ, ನಿರ್ದೇಶಕ ತರುಣ್ ಮೈಸೂರು ಪೇಟ ತೊಟ್ಟು ಗಮನ ಸೆಳೆದರು.
ಇನ್ನೂ ಮದುವೆಗಾಗಿ ಅದ್ಬುತವಾಗಿ ಸೆಟ್ ಹಾಕಲಾಗಿತ್ತು. ದಕ್ಷಿಣ ಭಾರತದ ಶೈಲಿಯಲ್ಲಿ ಕಲ್ಯಾಣ ಮಂಟಪದ ಅಲಂಕಾರ ಮಾಡಲಾಗಿತ್ತು. ಪ್ರವೇಶ ದ್ವಾರದಲ್ಲಿ ಮಹಾದ್ವಾರದ ಮಾದರಿಯಲ್ಲಿ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 10.50 ರಿಂದ 11.35ರ ತುಲಾ ಲಗ್ನದಲ್ಲಿ ತರುಣ್ ಅವರು ಸೋನಲ್‌ಗೆ ಮಾಂಗಲ್ಯ ಧಾರಣೆ ಮಾಡಿದರು. ಈ ಮೂಲಕ ತರುಣ್ ಹಾಗೂ ಸೋನಲ್ ಸತಿ-ಪತಿ ಆಗಿದ್ದಾರೆ. ಈ ಮದುವೆಗೆ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸುದೀಪ್, ಯಶ್, ರಚಿತಾ ರಾಮ್, ಧ್ರುವ ಸರ್ಜಾ, ಟಾಲಿವುಡ್ ನಟ ಜಗಪತಿ ಬಾಬು ಹೀಗೆ ಗಣ್ಯಾತಿ ಗಣ್ಯರು ಸಾಕ್ಷಿ ಆದರು.
ಬೆಂಗಳೂರಿನ ಕೆಂಗೇರಿ ಬಳಿಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತರುಣ್ ಮತ್ತು ಸೋನಲ್ ಮದುವೆ ನೆರವೇರಿತು. ಶನಿವಾರ ಸಂಜೆ ಅದ್ದೂರಿ ರಿಸೆಪ್ಷನ್ ನಡೆದಿದೆ. ಈ ವೇಳೆ ಬಿಎಸ್ ಯಡಿಯೂರಪ್ಪ ಸೇರಿದಮತೆ, ಹಂಸಲೇಖ, ರೂಪೇಶ್ ಶೆಟ್ಟಿ, ಅನಿರುದ್ಧ ಜತ್ಕರ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಇನ್ನೂ ಹಲವು ಕಲಾವಿದರು ಆಗಮಿಸಿದ್ದರು. ಇಂದು ಡಿಸಿಎಂ ಡಿಕೆ ಶಿವಕುಮಾರ್ ನವ ದಂಪತಿಗಳಿಗೆ ಶುಭ ಕೋರಿದರು.

ಮದುವೆಗೆ ವಿಶೇಷ ಅಲಂಕಾರ
ತರುಣ್ ಸುಧೀರ್ ಹಾಗೂ ಸೋನಲ್ ಮದುವೆ ಅದ್ಧೂರಿಯಾಗಿಯೇ ನೆರವೇರಿದೆ. ಮದುವೆ ಹಾಲ್ ಎಂಟ್ರನ್ಸ್ ವಿಶೇಷವಾಗಿ ಡಿಸೈನ್ ಮಾಡಲಾಗಿತ್ತು. ಮದುವೆ ಹಾಲ್‌ನ ಔಟ್ ಡೋರ್ ಫಿಲ್ಮ್ ಕಾನ್ಸೆಪ್ಟ್‌ನಲ್ಲಿ ತಯಾರಾಗಿತ್ತು. ಇಡೀ ಮದುವೆ ಕಾರ್ಯಕ್ರಮವನ್ನು ಯೂಟ್ಯೂಬ್ ನಲ್ಲಿ ಲೈವ್ ಟೆಲಿಕಾಸ್ಟ್ ಮಾಡಲಾಗಿತ್ತು.
ಇಂದು ಕೂಡ ಹಲವಾರು ಸೆಲೆಬ್ರಿಟಿಗಳು ತರುಣ್ ಸುಧೀರ್ ಹಾಗೂ ಸೋನಲ್ ಮದುವೆಯಲ್ಲಿ ಭಾಗಿಯಾಗಿದ್ದರು. ನಟ ಶರಣ್ ದಂಪತಿ, ನಟಿ ಶೃತಿ ಕುಟುಂಬಸ್ಥರು, ನೆನಪಿರಲಿ ಪ್ರೇಮ್ ದಂಪತಿ ಸೇರಿದಂತೆ ಇನ್ನೂ ಹಲವಾರು ಸ್ಟಾರ್ ನಟ ನಟಿಯರು ಮದುವೆಯಲ್ಲಿ ಭಾಗವಹಿಸಿ ನವ ಜೋರಿಗೆ ಶುಭ ಕೋರಿದರು. ಸದ್ಯ ಸ್ಟಾರ್ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕಲ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ. ಸದ್ಯ ತರುಣ್ ಸುಧೀರ್ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.












Click it and Unblock the Notifications