Shobitha Shivanna: ನಟಿ ಶೋಭಿತಾ ಶಿವಣ್ಣ ಸಾವು: ಪತಿಯ ವಿರುದ್ಧ ಈ ಮೂರು ಅನುಮಾನ

ಕನ್ನಡ ಕಿರುತೆರೆಯ ಖ್ಯಾತ ನಟಿ ಶೋಭಿತಾ ಶಿವಣ್ಣ ಸಾವಿಗೆ ಶರಣಾಗಿದ್ದಾರೆ. ಬ್ರಹ್ಮಗಂಟು, ನೀನಾದೆ ನಾ, ಸೇರಿದಂತೆ ಕನ್ನಡ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಶೋಭಿತಾ ಹೈದರಾಬಾದ್‌ನಲ್ಲಿರುವ ಪತಿಯ ನಿವಾಸದಲ್ಲಿ ಸಾವಿಗೆ ಶರಣಾಗಿದ್ದಾರೆ. ಸಕಲೇಶಪುರ ಮೂಲದವರಾದ ಶೋಭಿತಾ ಶಿವಣ್ಣ ಮದುವೆ ಬಳಿಕ ಹೈದರಾಬಾದ್‌ಗೆ ಶಿಫ್ಟ್‌ ಆಗಿದ್ದು, ಇದೀಗ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಕಳೆದ ವರ್ಷ ಅಂದರೆ 2023ರ ಮೇ 22ರಂದು ಶೋಭಿತಾ ಶಿವಣ್ಣ ಹೈದರಾಬಾದ್‌ನ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಸುಧೀರ್ ಎನ್ನುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೊಂದು ಪಕ್ಕಾ ಅರೇಂಜ್‌ ಮ್ಯಾರೇಜ್‌ ಆಗಿದ್ದು, ಅಕ್ಕನ ಗಂಡನ ಸಂಬಂಧಿಕರನ್ನೇ ಶೋಭಿತಾ ಶಿವಣ್ಣ ಮದುವೆಯಾಗಿದ್ದರು ಎನ್ನಲಾಗಿದೆ.

Actress Shobitha Shivanna Passes Away Questions Arise About Husband Sudheer

ಮದುವೆಯ ನಂತರ ಹೈದರಾಬಾದ್‌ನಲ್ಲಿ ಇದ್ದ ಕಾರಣ ಶೋಭಿತಾ ನಟನೆಯಿಂದ ದೂರವಿದ್ದರು. ಈ ಕೊರಗು ಅವರನ್ನು ಸದಾ ಕಾಡುತ್ತಿತ್ತು ಎನ್ನಲಾಗಿದೆ. ಅಲ್ಲದೇ ತಾನು ಮತ್ತೆ ಬಣ್ಣ ಹಚ್ಚಬೇಕು ತೆರೆ ಮೇಲೆ ಬರಬೇಕು ಎಂದು ಶೋಭಿತಾ ತಮ್ಮ ಸ್ನೇಹಿತರ ಬಳಿ ಆಗಾಗ ಹೇಳುತ್ತಿದ್ದರಂತೆ. ಇನ್ನು ಸದ್ಯದಲ್ಲೇ ಶೋಭಿತಾ ಪತಿ ಬೆಂಗಳೂರಿಗೆ ಶಿಫ್ಟ್ ಆಗಲು ಪ್ಲ್ಯಾನ್ ಮಾಡಿದ್ದರಂತೆ ಹೀಗಾಗಿ ಶೋಭಿತಾ ಬೆಂಗಳೂರಿಗೆ ಬಂದ ಮೇಲೆ ಮತ್ತೆ ನಟಿಸಬೇಕು ಎನ್ನುವ ಖುಷಿಯಲ್ಲಿದ್ದರಂತೆ.

ಇಷ್ಟೆಲ್ಲಾ ಪ್ಲ್ಯಾನ್‌ಗಳನ್ನು ಮಾಡಿಕೊಂಡಿದ್ದ ಶೋಭಿತಾಗೆ ಅದೇನಾಯ್ತೋ ಗೊತ್ತಿಲ್ಲ ಪತಿ ಸುಧೀರ್ ಮನೆಯಲ್ಲಿದ್ದಾಗಲೇ ಶೋಭಿತಾ ಅವರು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಹೈದರಾಬಾದ್‌ನ ಕೊಂಡಾಪುರ ಶ್ರೀರಾಮ ಕಾಲೋನಿಯಲ್ಲಿ ವಾಸವಾಗಿದ್ದ ಶೋಭಿತಾ, ನವೆಂಬರ್‌ 30ರಂದು ರೂಮ್‌ನಲ್ಲಿ ಒಬ್ಬರೇ ಇದ್ದರಂತೆ. ಪತಿ ಸುಧೀರ್ ಅವರು ಕೆಲಸದ ನಿಮಿತ್ತ ಲ್ಯಾಪ್ ಟಾಪ್‌ನಲ್ಲಿ ಕೆಲಸ ಮಾಡುತ್ತಾ ಹಾಲ್‌ನಲ್ಲಿ‌ ನಿದ್ರೆಗೆ ಜಾರಿದ್ದರಂತೆ. ಬೆಳಗ್ಗೆ ಎದ್ದು ನೋಡಿದರೆ ಶೋಭಿತಾ ರೂಮ್‌ನ ಬಾಗಿಲು ತೆರೆದಿಲ್ಲ. ಎಷ್ಟೇ ಕರೆದರೂ ಪ್ರತಿಕ್ರಿಯಿಸಿಲ್ಲ.

Actress Shobitha Shivanna Passes Away Questions Arise About Husband Sudheer

ಹೀಗಾಗಿ ಸುಧೀರ್‌, ಕೂಡಲೇ ಶೋಭಿತಾ ಸಹೋದರ ವಿಜಯ್‌ಗೆ ಈ ವಿಚಾರ ಮುಟ್ಟಿಸಿದ್ದು ಅವರು ಫ್ಲಾಟ್‌ಗೆ ಬಂದು, ಬಾಗಿಲು ಒಡೆದ ವೇಳೆ ಶೋಭಿತಾ ಮೃತದೇಹ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇನ್ನು ಶೋಭಿತಾ ಹಾಗೂ ಪತಿ ಸುಧೀರ್‌ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂದು ಆಪ್ತರು ಹೇಳುತ್ತಿದ್ದಾರೆ. ಆದರೆ ಶೋಭಿತಾ ಯಾಕೆ ಏಕಾಏಕಿ ಈ ನಿರ್ಧಾರ ತೆಗೆದುಕೊಂಡರು ಎನ್ನುವುದು ಸದ್ಯ ಯಕ್ಷ ಪ್ರಶ್ನೆಯಾಗಿದೆ. ಆದರೂ ಕೆಲವರು ಅವರ ಪತಿ ವಿರುದ್ಧ ಕೆಲವು ಅನುಮಾನಗಳನ್ನು ಹೊರಹಾಕುತ್ತಿದ್ದಾರೆ. ಇಬ್ಬರೇ ಇದ್ದ ಮನೆಯಲ್ಲಿ ಎಲ್ಲವೂ ಸರಿ ಇತ್ತಾ..? ಬೆಂಗಳೂರಿಗೆ ಶಿಫ್ಟ್‌ ಆಗಲು ಪ್ಲ್ಯಾನ್‌ ಮಾಡಿದ್ದು ನಿಜನಾ..? ಶೋಭಿತಾ ಮತ್ತೆ ನಟನೆ ಮಾಡುವುದು ಸುಧೀರ್‌ಗೆ ಇಷ್ಟ ಇರಲಿಲ್ವಾ.? ಹೀಗೆ ಅನೇಕ ಅನುಮಾನಗಳನ್ನು ಹೊರಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+