Cine Gossip: ಸದ್ದಿಲ್ಲದೆ ಸುತ್ತಾಡುತ್ತಿರುವ ರುಕ್ಮಿಣಿ ವಸಂತ್, ಜೊತೆಗಿರುವ ವ್ಯಕ್ತಿ ಯಾರೆಂಬ ಪ್ರಶ್ನೆಗೆ ಸಿಕ್ಕಿದೆ ಉತ್ತರ
Actress Rukmini Vasanth: ನಟಿ ರುಕ್ಮಿಣಿ ವಸಂತ್ ಅವರು ವ್ಯಕ್ತಿಯೊಬ್ಬರ ಜೊತೆ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿತ್ತು. ಇದು ಅಭಿಮಾನಿಗಳ ಗಮನ ಸೆಳೆದಿದ್ದು, ಅವರ ಜೊತೆ ಕಾಣಿಸಿಕೊಂಡಿರುವ ವ್ಯಕ್ತಿ ಯಾರು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ಕೊನೆಗೂ ಮಾಹಿತಿಯೊಂದು ಹೊರಬಿದ್ದಿದೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ನಟಿ ರುಕ್ಮಿಣಿ ವಸಂತ್ ಜೊತೆ ಪೋಟೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯನ್ನು ಸಿದ್ಧಾಂತ್ ನಾಗ್ ಎಂದು ಗುರುತಿಸಲಾಗಿದ್ದು, ಅವರು ಫೋಟೋಗ್ರಾಫರ್ ಮತ್ತು ಪೋಡ್ಕಾಸ್ಟ್ ಹೋಸ್ಟ್ ಎನ್ನಲಾಗಿದೆ. ಈ ಫೋಟೋ 2023 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿದ್ದು, ಇದರಲ್ಲಿ ರುಕ್ಮಿಣಿ ಮತ್ತು ಸಿದ್ಧಾಂತ್ ಒಟ್ಟಿಗೆ ಒಬ್ಬರ ಭುಜದ ಮೇಲೊಬ್ಬರು ತಲೆ ಇಟ್ಟು ಕುಳಿತುಕೊಂಡಿದ್ದಾರೆ.

ಫೋಟೋದಲ್ಲಿ ಕಾಣಿಸಿಕೊಂಡಿದ್ದು ಯಾರು?: ಚಿತ್ರದಲ್ಲಿ ರುಕ್ಮಿಣಿ ವಸಂತ್ ಅವರು ಸಿದ್ಧಾಂತ್ ಅವರ ಭುಜವನ್ನು ಹಿಡಿದಿಟ್ಟುಕೊಂಡಿರುವಂತೆ ಕಾಣುತ್ತಿದ್ದು, ಇದನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಜೋಡಿ ಎಂದು ಕರೆದಿದ್ದಾರೆ. ಆದರೆ, ಈ ಫೋಟೋ ಬಗ್ಗೆ ಇಷ್ಟೆಲ್ಲ ಚರ್ಚೆಗಳು ಆಗುತ್ತಿದ್ದರೂ ಸಹ ರುಕ್ಮಿಣಿ ವಸಂತ್ ಹಾಗೂ ಸಿದ್ಧಾಂತ್ ನಾಗ್ ಇಬ್ಬರೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ರುಕ್ಮಿಣಿ ವಸಂತ್ ಜೊತೆ ಕಾಣಿಸಿಕೊಂಡ ವ್ಯಕ್ತಿ ಅವರ ಆಪ್ತ ಸ್ನೇಹಿತ/ಪರಿಚಿತ ವ್ಯಕ್ತಿ ಎನ್ನಲಾಗುತ್ತಿದೆ. ಆದರೆ, ಇದನ್ನು ರುಕ್ಮಿಣಿ ವಸಂತ್ ಅಥವಾ ಅವರ ಕುಟುಂಬ ಅಧಿಕೃತವಾಗಿ ದೃಢಪಡಿಸಿಲ್ಲ. ಶೂಟಿಂಗ್, ವೈಯಕ್ತಿಕ ಕೆಲಸಗಳು ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯುವ ಸಂದರ್ಭದಲ್ಲೇ ಅವರು ಒಟ್ಟಿಗೆ ಕಾಣಿಸಿಕೊಂಡಿರಬಹುದು ಎನ್ನುವುದು ಆಪ್ತ ವಲಯದ ಮಾತಾಗಿದೆ.
ಸದ್ಯಕ್ಕೆ ಇದು ಗಾಸಿಪ್ ಮಟ್ಟದಲ್ಲೇ ಇದ್ದು, ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದ್ದರಿಂದ ಅವರ ವೈಯಕ್ತಿಕ ಜೀವನದ ಬಗ್ಗೆ ಊಹಾಪೋಹಗಳಿಗೆ ತೆರೆ ಎಳೆಯುವಂತೆ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ರುಕ್ಮಿಣಿ ವಸಂತ್ ಅವರು ತಮ್ಮ ವೃತ್ತಿಜೀವನದ ಮೇಲೆಯೇ ಹೆಚ್ಚಿನ ಗಮನ ಹರಿಸುತ್ತಿದ್ದು, ಮುಂದಿನ ಚಿತ್ರಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.
ಟಾಕ್ಸಿಕ್‌ನಲ್ಲಿ ರುಕ್ಮಿಣಿ ವಸಂತ್ ಪಾತ್ರ: ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್ 'ಮೆಲಿಸ್ಸಾ' ಎಂಬ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 2026ರ ಮಾರ್ಚ್ 19ರಂದು ಬಿಡುಗಡೆ ಆಗಲಿರುವ ಈ ಚಿತ್ರದಲ್ಲಿ ರುಕ್ಮಿಣಿ ವಿಶೇಷವಾಗಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ರುಕ್ಮಿಣಿ ವಸಂತ್ ಟಾಕ್ಸಿಲ್ ಚಿತ್ರದಲ್ಲಿ 'ಮೆಲಿಸ್ಸಾ' ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಪಾತ್ರವು ತುಂಬಾ ನಿಗೂಢವಾಗಿದೆ ಎಂದು ನಿರ್ದೇಶಕಿ ಗೀತು ಮೋಹನ್‌ದಾಸ್ ತಿಳಿಸಿದ್ದಾರೆ. ಈಗಾಗಲೇ ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ರುಕ್ಮಿಣಿ ವಸಂತ್ ಅವರು ನೀಲಿ ಹಾಗೂ ಹಸಿರು ಬಣ್ಣ ಮಿಶ್ರಿತ ಗೌನ್ ಧರಿಸಿ, ರೆಟ್ರೋ ಸ್ಟೈಲ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ನಟನೆಯ ಕಾಂತಾರಾ ಚಾಪ್ಟರ್ 1ನಲ್ಲಿ ರುಕ್ಮಿಣಿ ವಸಂತ್ ಅವರು ಒಂದು ಸಾಮ್ರಾಜ್ಯದ ರಾಣಿ ಪಾತ್ರದಲ್ಲಿ ಮಿಂಚಿದ್ದಾರೆ. ಇದಕ್ಕೂ ಮುಂಚೆ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ, ರುಕ್ಮಿಣಿ ವಸಂತ್ ಅವರ ಈ ಪಾತ್ರ ಕನ್ನಡ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಇದೀಗ ಅವರು ಯಶ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಟಾಕ್ಸಿಕ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಅವರೊಂದಿಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications