Rashmika Mandanna: ನಟಿ ರಶ್ಮಿಕಾ ಬದುಕಲ್ಲಿ ದಿಢೀರನೆ ಏನಾಯ್ತು? ಫ್ಯಾನ್ಸ್‌ಗೆ ಶಾಕಿಂಗ್‌ ನ್ಯೂಸ್‌

ಬಹುಭಾಷಾ ನಟಿ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಶಾಕಿಂಗ್‌ ವಿಚಾರವೊಂದು ಹೊರಬಿದ್ದಿದೆ. ಪುಷ್ಪ-2 ಸಿನಿಮಾದ ಸಕ್ಸಸ್‌ನಲ್ಲಿರುವ ರಶ್ಮಿಕಾ ಅವರ ಬದುಕಿನಲ್ಲಿ ಕಹಿ ಘಟನೆಯೊಂದು ನಡೆದು ಹೋಗಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಕೂಡ ಶಾಕ್‌ಗೆ ಒಳಗಾಗಿದ್ದಾರೆ.

ಹೌದು ನಟಿ ರಶ್ಮಿಕಾ ಮಂದಣ್ಣ ಅವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಶ್ಮಿಕಾ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಪೆಟ್ಟು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ರಶ್ಮಿಕಾ ಅವರು ಸಲ್ಮಾನ್‌ ಖಾನ್‌ ನಟನೆಯ ಸಿಖಂದರ್‌ ಸಿನಿಮಾದ ಶೂಟಿಂಗ್‌ಗೆ ಹೋಗಬೇಕಿತ್ತು. ಇದರ ನಡುವೆಯೇ ರಶ್ಮಿಕಾ ಜಿಮ್‌ನಲ್ಲಿ ಪೆಟ್ಟು ಮಾಡಿಕೊಂಡಿದ್ದಾರೆ.

Actress Rashmika Mandanna Injured During Workout Shooting Halted Temporarily

ಅದೃಷ್ಟವಶಾತ್‌ ರಶ್ಮಿಕಾ ಅವರಿಗೆ ಯಾವುದೇ ಅನಾಹುತವಾಗಿಲ್ಲ. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಪೆಟ್ಟಾಗಿದೆ ಎಂದು ಹೇಳಲಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಧೈರ್ಯ ತುಂಬಿದ್ದಾರೆ. ಸದ್ಯ ಪೆಟ್ಟಾಗಿರುವ ಕಾರಣ ರಶ್ಮಿಕಾ ಅವರು ಕೆಲ ದಿನಗಳವರೆಗೆ ರೆಸ್ಟ್‌ ಮಾಡಬೇಕಾಗಿದೆ. ಈ ಹಿನ್ನೆಲೆ ಸಲ್ಮಾನ್ ಖಾನ್ 'ಸಿಖಂದರ್' ಚಿತ್ರದ ಶೂಟಿಂಗ್ ಕೂಡ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇನ್ನು ರಶ್ಮಿಕಾ ಅವರು ಸಂಪೂರ್ಣವಾಗಿ ಗುಣಮುಖರಾದ ಮೇಲೆಯೇ ಶೂಟಿಂಗ್‌ಗೆ ಮರಳಲಿದ್ದಾರೆ ಎಂದು ವರದಿಯಾಗಿದೆ.

ಇನ್ನು ರಶ್ಮಿಕಾ ಅವರು ಪೆಟ್ಟು ಮಾಡಿಕೊಂಡಿರುವ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ರಶ್ಮಿಕಾ ಅಭಿಮಾನಿಗಳು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ರಶ್ಮಿಕಾ ಬೇಗ ಗುಣಮುಖರಾಗಲಿ..ಮತ್ತೆ ಸಿನಿಮಾಗಳಲ್ಲಿ ಅಬ್ಬರಿಸಲಿ ಎಂದು ಪ್ರಾರ್ಥಿಸಿದ್ದಾರೆ.

Actress Rashmika Mandanna Injured During Workout Shooting Halted Temporarily

ಸಿಖಂದರ್ ಸಿನಿಮಾದ ಕೊನೆಯ ಶೆಡ್ಯೂಲ್ ಜನವರಿ 10ರಂದು ಮುಂಬೈನಲ್ಲಿ ಆರಂಭವಾಗಬೇಕಿತ್ತು. ಸಲ್ಮಾನ್ ಮತ್ತು ರಶ್ಮಿಕಾ ಮಂದಣ್ಣ ಮತ್ತೆ ಸೆಟ್‌ಗೆ ಹೋಗಬೇಕಿತ್ತು. ಈ ಸಿನಿಮಾವು ಮಾರ್ಚ್‌ನಲ್ಲಿ ಬಿಡುಗಡೆಯಾಗಬೇಕಿರುವ ಕಾರಣ ಆದಷ್ಟು ಬೇಗನೆ ಶೂಟಿಂಗ್‌ ಪೂರ್ಣಗೊಳಿಸುವ ಚಿಂತನೆಯಲ್ಲಿದ್ದರು. ಆದರೆ, ರಶ್ಮಿಕಾ ಶೂಟಿಂಗ್‌ ಕ್ಯಾನ್ಸಲ್‌ ಆಗಿರುವುದರಿಂದಲೂ ಯಾವುದೇ ತೊಂದರೆಯೇನಿಲ್ಲ. ತ್ವರಿತವಾಗಿಯೇ ಶೂಟಿಂಗ್‌ ಮುಗಿಸುವ ವಿಶ್ವಾಸದಲ್ಲಿದೆ ಚಿತ್ರತಂಡ.

ಇತ್ತೀಚೆಗಷ್ಟೇ ಪುಷ್ಪ ಸಿನಿಮಾದ ಸಕ್ಸಸ್‌ನಿಂದಾಗಿ ರಶ್ಮಿಕಾ ಅವರ ಫೇಮ್‌ ಮತ್ತಷ್ಟು ಹೆಚ್ಚಾಗಿದ್ದು, ಸಾಲು ಸಾಲು ಸಿನಿಮಾಗಳು ಕೈಯಲ್ಲಿವೆ. ಸದ್ಯ ರಶ್ಮಿಕಾ ಸಲ್ಮಾನ್ ಖಾನ್ ಜೊತೆ ಸಿಕಂದರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಎಆರ್ ಮುರುಗದಾಸ್ ನಿರ್ದೇಶಿಸುತ್ತಿದ್ದಾರೆ. ಇದಾದ ಬಳಿಕ ರಾಹುಲ್ ರವೀಂದ್ರನ್ ನಿರ್ದೇಶನದ ದಿ ಗರ್ಲ್ ಫ್ರೆಂಡ್ ಚಿತ್ರದಲ್ಲಿ ರಶ್ಮಿಕಾ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್‌ ಅನ್ನು ರಶ್ಮಿಕಾ ಆಪ್ತರೂ ಆದ ವಿಜಯ್‌ ದೇವರಕೊಂಡ ರಿಲೀಸ್‌ ಮಾಡಿದ್ದರು.

Actress Rashmika Mandanna Injured During Workout Shooting Halted Temporarily

ಇಂದು ಪುಷ್ಪ ಸಿನಿಮಾದ ಡೈರೆಕ್ಟರ್‌ ಸುಕುಮಾರ್‌ ಅವರ ಹುಟ್ಟುಹಬ್ಬದ ಹಿನ್ನೆಲೆ ರಶ್ಮಿಕಾ ಅವರು ತಮ್ಮ ಇನ್ಸ್‌ಟಾಗ್ರಾಂನಲ್ಲಿ ಸ್ಪೆಷಲ್‌ ಫೋಟೋ ಹಂಚಿಕೊಂಡು ವಿಶ್‌ ಮಾಡಿದ್ದಾರೆ. ಪುಷ್ಪ-2 ಸಿನಿಮಾದ ಸೆಟ್‌ಗಳಿಂದ ತೆಗೆದುಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ಜೊತೆಗೆ, ಹ್ಯಾಪಿಯೆಸ್ಟ್ ಬರ್ತ್‌ಡೇ ಸುಕುಮಾರ್‌ ಸರ್‌, ನಾನು ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಆದರೆ ನಾನು ನಿಮ್ಮ ಅನೇಕ ಉತ್ತಮ ಫೋಟೋಗಳನ್ನು ಹೊಂದಿದ್ದೇನೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+