Rashmika Mandanna: ಅಟಲ್ ಸೇತುವೆ ದೇಶದ ಹೆಮ್ಮೆ, 10 ವರ್ಷದಲ್ಲಿ ಭಾರತದ ವೇಗವಾಗಿ ಬೆಳೆಯುತ್ತಿದೆ: ನಟಿ ರಶ್ಮಿಕಾ
ಬೆಂಗಳೂರು, ಮೇ 15: ನ್ಯಾಷನಲ್ ಕ್ರಶ್ ಎಂದೆ ಪ್ರಸಿದ್ಧಿ ಪಡೆದ ಕರ್ನಾಟಕ ಮೂಲದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್‌ನಲ್ಲಿ 'ಅನಿಮಲ್' ಸಿನಿಮಾ ಸಕ್ಸಸ್ ಬಳಿಕ ಹಿಂದಿ ಸಿನಿಮಾಗಳಲ್ಲಿ ಬ್ಯೂಸಿಯಾಗುವತ್ತ ಗಮನಹರಿಸಿದ್ದಾರೆ. ಹೀಗಾಗಿ ಅವರು ಆಗಾಗ ಮುಂಬೈಗೆ ಪ್ರಯಾಣಿಸುತ್ತಿರುತ್ತಾರೆ. ಇದೇ ಮಾರ್ಗದಲ್ಲಿರುವ ಬರುವ 'ಅಟಲ್ ಟನಲ್ ಸೇತುವೆ' ಬಗ್ಗೆ ಎಎನ್‌ಐ ಜೊತೆಗೆ ಮಾತನಾಡಿದ ರಶ್ಮಿಕಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಇದೇ ವರ್ಷ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಮುಂಬೈ ಮತ್ತು ನವಿಮುಂಬೈಗೆ ಸಂಪರ್ಕ ಸಾಧಿಸುವ ಅಟಲ್ ಟನಲ್ ಅನ್ನು ಉದ್ಘಾಟಿಸಿದ್ದರು. ಇದು ಸೇರಿದಂತೆ ಭಾರತ ಕಳೆದ ಹತ್ತು ವರ್ಷಗಳಲ್ಲಿ ಕಂಡು ಅಭಿವೃದ್ಧಿಯನ್ನು ಅವರು ಕೊಂಡಾಡಿದ್ದಾರೆ.

ಮುಂಬೈನಿಂದ-ನವಿ ಮುಂಬೈಗೆ ಪ್ರಯಾಣಕ್ಕೆ ಸುಮಾರು ಎರಡು ಗಂಟೆ ಪ್ರಯಾಣದ ಸಮಯ ಹಿಡಿಯುತ್ತಿತ್ತು. ಈ ಅಟಲ್ ಸೇತುವೆ ಆ ಪ್ರಯಾಣವನ್ನು ಕೇವಲ 20 ನಿಮಿಷಕ್ಕೆ ಇಳಿಸಿದೆ. ಇದು ಸಂತೋಷದ ಸಂಗತಿ. ಭಾರತ ಅಸಾಧ್ಯವಾದದ್ದನ್ನು ಸಾಧ್ಯ ಮಾಡಿ ತೋರಿಸುತ್ತಿದೆ.
ಭಾರತ ವೇಗವಾಗಿ ಬೆಳೆಯುತ್ತಿರುವ ದೇಶ
ಅಟಲ್ ಸೇತುವೆಯು ಗೋವಾದಿಂದ ಮುಂಬೈ, ಬೆಂಗಳೂರಿನಿಂದ ಮುಂಬೈಗೆ ಸಂಪರ್ಕ ಸೇತುವೆಯಾಗಿದೆ. ವಿವಿಧ ನಗರಗಳ ಸಂಪರ್ಕವನ್ನು ಇದು ಬಹಳಸಷ್ಟು ಸರಳ ಮಾಡಿದೆ. ಇದರೊಂದಿಗೆ ದೇಶದಲ್ಲಿ ಇನ್ನೂ ಅನೇಕ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಗುವುದನ್ನು ನೋಡಿದರೆ ಹೆಮ್ಮೆ ಅನ್ನಿಸುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ.
ಭಾರತದಿಂದ ಸಾಧ್ಯವಿಲ್ಲ ಎಂದು ಹೇಳಾಗುವುದಿಲ್ಲ. ವೇಗವಾಗಿ ಬೆಳೆಯುತ್ತಿರುವ ಭಾರತವು ಏಳೇ ವರ್ಷಗಳಲ್ಲಿ22 ಕಿಲೋ ಮೀಟರ್ ಉದ್ದದ 'ಅಟಲ್ ಸೇತು' ನಿರ್ಮಿಸಿ ಸಾಧಿಸಿ ತೋರಿಸಿದೆ.

ಪ್ರಧಾನಿ ಮೋದಿ ಸಾಧನೆಗೆ ನಟಿ ಶ್ಲಾಘನೆ
ಹೆದ್ದಾರಿ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ದೇಶವು ವೇಗವಾಗಿ ಬೆಳೆಯುತ್ತಿದೆ. ಅನೇಕ ಸ್ಮಾರ್ಟ್ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯಲ್ಲಿ ಅವರು ಶ್ಲಾಘಿಸಿದರು.
#WATCH | Mumbai: On the Mumbai-trans Harbour Link (MTHL) Atal Setu, Actor Rashmika Mandana says, "Who would have thought that something like this would have been possible. Now we can easily travel from Mumbai to Navi Mumbai. India is moving very fast and growing at a fast pace.… pic.twitter.com/ACwSoSNaa7
— ANI (@ANI) May 14, 2024
ಭಾರತದ ಜನರು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎಂದು ನನಗನಿಸುತ್ತದೆ. ಸದ್ಯ ದೇಶದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ನಡೆಯುತ್ತಿದೆ. ದೇಶದ ಯುವಕರು ಜವಾಬ್ದಾರಿಯುತವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಅವರು ಹೇಳಿದರು. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ.
ಸದ್ಯಕ್ಕೆ ಮುಂಬೈನಲ್ಲೇ ರಶ್ಮಿಕಾ ನೆಲೆ?
ಈ ಹಿಂದೆ ತೆಲುಗಿನಲ್ಲೂ ಬ್ಯೂಸಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್‌ನಲ್ಲಿ ನೆಲೆಯೂರಿದ್ದರು. ಇದೀಗ ಹಿಂದಿಯ ಅನಿಮಲ್ ಸಕ್ಸಸ್ ಬಳಿಕ ಅವರಿಗೆ ಬಾಲಿವುಡ್‌ನಲ್ಲಿ ಸಾಕಷ್ಟು ಆಫರ್‌ಗಳು ಬರುತ್ತಿವೆ ಎಂದು ತಿಳಿದು ಬಂದಿದೆ. ಹೀಗಾಗಿ ಅವರು ಮುಂಬೈನಲ್ಲಿ ಇದ್ದು ಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಯೋಚನೆ ಹೊಂದಿದ್ದಾರೆ ಎನ್ನಲಾಗಿದೆ.
ಸದ್ಯ ಅವರು ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ನಾಯಕರಾಗಿ ನಟಿಸುತ್ತಿರುವ ಹೊಸ ಸಿನಿಮಾ 'ಸಿಕಂದರ್'ಗೆ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣಾ ಅವರು ಆಯ್ಕೆ ಆಗಿದ್ದಾರೆ. ಸಿನಿಮಾ ಚಿತ್ರೀಕರಣ ಆರಂಭಿಸಬೇಕಿದೆ.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications