ಡಿಬಾಸ್‌ ಫ್ಯಾನ್ಸ್‌ & ರೇಣುಕಾಸ್ವಾಮಿ ಮೆಸೇಜ್‌ಗೆ ಯಾವ ವ್ಯತ್ಯಾಸ ಇಲ್ಲ: ಸ್ಕ್ರೀನ್‌ಶಾಟ್‌ ಹಂಚಿಕೊಂಡ ರಮ್ಯಾ!

ಸೋಷಿಯಲ್‌ ಮೀಡಿಯಾದಲ್ಲಿ ನಟಿ ರಮ್ಯಾ ಹಾಗೂ ದರ್ಶನ್‌ ಅಭಿಮಾನಿಗಳ ನಡುವೆ ವಾಕ್ಸಮರ ಜೋರಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ ವಿಚಾರವಾಗಿ ನಟಿ ರಮ್ಯಾ ಅವರು ಪೋಸ್ಟ್‌ ಹಾಕಿದ್ದ ವಿಚಾರವಾಗಿ ಡಿಬಾಸ್‌ ಅಭಿಮಾನಿಗಳು ಕೆರಳಿದ್ದಾರೆ. ರೇಣುಕಾಸ್ವಾಮಿಗೆ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ರಮ್ಯಾ ಆಗ್ರಹಿಸಿದ್ದರು. ಇದೇ ಕಾರಣಕ್ಕೆ ನಟಿ ರಮ್ಯಾ ಅವರನ್ನು ಅವಾಚ್ಯ ಹಾಗು ಅಶ್ಲೀಲ ಪದಗಳಿಂದ ನಿಂದಿಸಿ ಕಾಮೆಂಟ್‌ ಹಾಕುತ್ತಿದ್ದಾರೆ. ಈಗ ಮತ್ತೊಂದು ಪೋಸ್ಟ್‌ ಮೂಲಕ ರಮ್ಯಾ ಅವರು ದರ್ಶನ್‌ ಅಭಿಮಾನಿಗಳ ವಿರುದ್ಧ ಸಿಡಿದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ತೂಗುದೀಪ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ ಜಾಮೀನು ರದ್ದು ಮಾಡುವಂತೆ ಕೋರಿರುವ ಪ್ರಕರಣ ಸದ್ಯ ಸುಪ್ರೀಂಕೋರ್ಟ್‌ನಲ್ಲಿದೆ. ಮೊನ್ನೆ ನಡೆದ ವಿಚಾರಣೆ ಬಳಿಕವೂ ರಮ್ಯಾ ಅವರು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದರು. ಇದರಿಂದ ದರ್ಶನ್‌ ಕೆಲ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಸೋಷಿಯಲ್‌ ಮೀಡಿಯಾಗಳಲ್ಲಿ ಕೆಟ್ಟ ಕಾಮೆಂಟ್‌ಗಳನ್ನು ಹಾಕುವ ಮೂಲಕ ರಮ್ಯಾ ವಿರುದ್ಧ ಆಕ್ರೋಶ ಹೊರಹಾಕಿದ್ದರು.

actress-ramya-says-no-difference-between-renukaswamy-dboss-darshan-fans-messages

ಒಂದು ದಿನದ ಹಿಂದೆಯಷ್ಟೇ ರಮ್ಯಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಡಿಬಾಸ್‌ ಅಭಿಮಾನಿಗಳನ್ನು ಉಲ್ಲೇಖಿಸಿ ಮತ್ತೊಂದು ಪೋಸ್ಟ್‌ ಮಾಡಿದ್ದರು. ಅದರಲ್ಲಿ "ಎಲ್ಲ ಡಿಬಾಸ್‌ ಅಭಿಮಾನಿಗಳಿಗೆ ನನ್ನ ಇನ್‌ಸ್ಟಾಗ್ರಾಂಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಏಕೆ ಸಿಗಬೇಕು? ಎಂಬುದಕ್ಕೆ ನಿಮ್ಮ ಕಾಮೆಂಟ್‌ಗಳೇ ಸಾಕ್ಷಿ" ಎಂದು ಬರೆದುಕೊಂಡಿದ್ದರು. ಇದರಿಂದ ಮತ್ತಷ್ಟು ಕೆರಳಿದ ಡಿಬಾಸ್‌ ಅಭಿಮಾನಿಗಳು ನಟಿ ರಮ್ಯಾ ಅವರ ಬಗ್ಗೆ ಅಶ್ಲೀಲ ಪದಗಳನ್ನು ಬಳಸಿ ಕಾಮೆಂಟ್‌, ಟ್ರೋಲ್‌ ಮಾಡಿದ್ದಾರೆ.

ಇದಕ್ಕೆ ಅಂಜದ ನಟಿ ರಮ್ಯಾ ಅವರು ಮತ್ತೊಂದು ಪೋಸ್ಟ್‌ ಮೂಲಕ ಡಿಬಾಸ್‌ ಅಭಿಮಾನಿಗಳಿಗೆ ಟಕ್ಕರ್‌ ಕೊಟ್ಟಿದ್ದಾರೆ. ಅಚ್ಚರಿ ಎಂದರೆ ಡಿಬಾಸ್‌ ಫ್ಯಾನ್ಸ್‌ ಮಾಡಿರುವ ಅತೀ ಕೆಟ್ಟದಾದ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ರಮ್ಯಾ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡು ದಿಟ್ಟತನ ಪ್ರದರ್ಶಿಸಿದ್ದಾರೆ. ಇದರಲ್ಲಿ ರಮ್ಯಾ ಅವರ ಬಗ್ಗೆ ಅಶ್ಲೀಲ ಪದಗಳನ್ನೇ ಹೆಚ್ಚಾಗಿ ಬಳಲಾಗಿರುವುದು ಕಂಡುಬಂದಿದೆ.

actress-ramya-says-no-difference-between-renukaswamy-dboss-darshan-fans-messages

ಇದರಿಂದಲೇ ಅ*ತ್ಯಾಚಾರ, ಕೊಲೆ!

"ರೇಣುಕಾಸ್ವಾಮಿ ಮೆಸೇಜ್‌ಗಳಿಗೂ ಡಿಬಾಸ್ ಅಭಿಮಾನಿಗಳ ಮೆಸೇಜ್‌ಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಈ ರೀತಿಯ ಸ್ತ್ರೀದ್ವೇಷದ ಮನಸ್ಥಿತಿಯನ್ನು ಹೊಂದಿರುವ ಟ್ರೋಲ್‌ಗಳಿಂದಾಗಿ ಮಹಿಳೆಯರು ಮತ್ತು ಯುವತಿಯರು ಕಿರುಕುಳ, ಅ*ತ್ಯಾಚಾರ ಮತ್ತು ಕೊಲೆಗೆ ಒಳಗಾಗುತ್ತಾರೆ" ಎಂದು ರಮ್ಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಕಾಮೆಂಟ್‌ನಲ್ಲೇನಿದೆ?

'ರೇಣುಕಾಸ್ವಾಮಿ ಮೊದಲು ನಿನಗೆ ಮೆಸೇಜ್‌ ಮಾಡಬೇಕಿತ್ತು, ದರ್ಶನ್‌ ಬಗ್ಗೆ ಮಾತನಾಡೋಕೆ ಏನ್‌ ಯೋಗ್ಯತೆ ಇದೆ ನಿಂಗೆ?, ಡಿಬಾಸ್‌ ತಂಟೆಗೆ ಬಂದ್ರೆ ಸರಿ ಇರಲ್ಲ..., ನ್ಯಾಯ ಕೊಡಿಸೋಣ ಬಿಡಿ ಆಂಟೀ..., ಫೇಮಸ್‌ ಆಗಬೇಕು ಅಂದ್ರೆ ಸಿನಿಮಾ ಮಾಡು, ಅದು ಬಿಟ್ಟು ಡಿಬಾಸ್‌ ವಿಷಯಕ್ಕೆ ಬರ್ಬೇಡ!' ಎಂದೆಲ್ಲ ಕಾಮೆಂಟ್‌ಗಳನ್ನ ಹಾಕಿದ್ದು, ರಮ್ಯಾ ಇದರ ಸ್ಕ್ರೀನ್‌ಶಾಟ್‌ ಹಂಚಿಕೊಳ್ಳುವ ಮೂಲಕ ವಿಕೃತ ಮನಸ್ಥಿತಿಗಳನ್ನು ಬಯಲಿಗಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+