Actress Ramya: ದರ್ಶನ್‌ಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆಯ ಸುದ್ದಿ ರಿಟ್ವೀಟ್ ಮಾಡಿದ ನಟಿ ರಮ್ಯಾ

ಬೆಂಗಳೂರು, ಜೂನ್. 11: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಇವರ ಜೊತೆಗೆ ಇವರ ಗೆಳತಿ ಪವಿತ್ರಾ ಗೌಡ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇಡು ಸ್ಯಾಂಡಲ್‌ವುಡ್‌ಗೆ ದೊಡ್ಡ ಶಾಕ್ ಆಗಿದೆ. ಇದರ ಬೆನ್ನಲ್ಲೇ ಮೋಹಕ ತಾರೆ ರಮ್ಯಾ ರಿಟ್ವೀಟ್ ಸಕತ್ ವೈರಲ್ ಆಗುತ್ತಿದೆ.

ನಟಿ ರಮ್ಯಾ (ದಿವ್ಯ ಸ್ಪಂದನ) ಅವರು ನಟ ದರ್ಶನ್ ವಿಚಾರವಾಗಿ ಇರುವ ಸುದ್ದಿಯೊಂದನ್ನು ರಿಟ್ವೀಟ್ ಮಾಡಿದ್ದಾರೆ. ಸುದ್ದಿಯಲ್ಲಿ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರಿಗೆ ಯಾವ ಶಿಕ್ಷೆಯಾಗಬಹುದು ಎಂಬ ಬಗ್ಗೆ ಚರ್ಚಿಸಲಾಗಿದೆ. ಇದು ಜಮೀನು ರಚಿತ ಅಪರಾಧ ಎಂಬಂತ ವಿಷಯಗಳಿರುವ ಟ್ವೀಟ್ ಅನ್ನು ರಿಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ದರ್ಶನ್‌ಗೆ ಶಿಕ್ಷೆಯಾಗಲಿ ಎಂದಿದ್ದಾರೆ.

Actress Ramya retweeted a tweet that said Darshan should be punished life imprisonment or sentence

ದರ್ಶನ್‌ಗೆ ಶಿಕ್ಷೆಯಾಗಲಿ ಎಂದ ನಟಿ ರಮ್ಯಾ

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ವಿಚಾರಣೆ ನಡೆಯುತ್ತಿದ್ದು, ಸಂಜೆ ದರ್ಶನ್ ಸೇರಿ 13 ಆರೋಪಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಮೇಲೆ ಯಾವ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂಬು ಮಾಹಿತಿ ಸಿಗೇಬಕಿದೆ. ಸೆಕ್ಷನ್ 302 (ಕೊಲೆ), 369 (ಅಪಹರಣ) ಇನ್ನೂ ಕೆಲವು ಸೆಕ್ಷನ್​ಗಳನ್ನು ಹೇರಲಾಗುತ್ತದೆ.

ಇದರ ಬೆನ್ನಲ್ಲೇ ನಟಿ ರಮ್ಯಾ ಅವರು, ಖಾಸಗಿ ಚಾನೆಲ್ ಒಂದರ ಸ್ಕ್ರೀನ್ ಶಾಟ್‌ಗಳಿರುವ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಕರ್ನಾಟಕ ಬಾಕ್ಸ್ ಆಫೀಸ್ ಎಂಬ ಖಾತೆಯಿಂದ ಒಂದು ಪೋಸ್ಟ್ ಮಾಡಲಾಗಿದೆ. ಅದರಲ್ಲಿ "ಸೆಕ್ಷನ್ 302 ರ ಅಡಿಯಲ್ಲಿ, ನಟ ದರ್ಶನ್ ಜೀವಾವಧಿ ಶಿಕ್ಷೆ ಅಥವಾ ಶಿಕ್ಷೆಯನ್ನು ಪಡೆಯುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಶಿಕ್ಷೆ ಆಗದಿದ್ದಲ್ಲಿ ಹಣದ ಪ್ರಭಾವ ಕೆಲಸ ಮಾಡಿದೆ ಎಂದರ್ಥ ಹಾಗೂ ಭಾರತೀಯ ಕಾನೂನು ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂದು ತೋರಿಸುವ ಅಪಹಾಸ್ಯದ ಪ್ರಕರಣ ಇದಾಗಲಿದೆ. ಸಂತ್ರಸ್ತರಿಗೆ ಸಿಗಬೇಕಾದ ನ್ಯಾಯ ಸಿಗುತ್ತದೆ ಎಂದು ಆಶಿಸುತ್ತೇವೆ" ಎಂದಿದೆ.

Actress Ramya retweeted a tweet that said Darshan should be punished life imprisonment or sentence

ಈ ಪೋಸ್ಟ್ ಹಂಚಿಕೊಂಡಿರುವ ನಟಿ ರಮ್ಯಾ ಏನು ಶೀರ್ಷಿಕೆ ನೀಡಿಲ್ಲ. ಇನ್ನು, ರಮ್ಯಾ ಹಾಗೂ ದರ್ಶನ್ ತೂಗುದೀಪ 'ದತ್ತ' ಸಿನಿಮಾದಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಆದರೆ, ದರ್ಶನ್ ಅಭಿಮಾನಿಗಳ ಅತಿರೇಕದ ವರ್ತನೆ ಬಗ್ಗೆ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+