'ನನ್ನನ್ನು ಬೆಳ್ಳಗೆ ಮಾಡು': ರಾಧಿಕಾ ಕುಮಾರಸ್ವಾಮಿ ಮಗಳಿಗೆ ಈ ಬೇಡಿಕೆ ಯಾಕೆ?
ಬೆಂಗಳೂರು, ಸೆಪ್ಟೆಂಬರ್ 11: ಹಲವು ವರ್ಷಗಳು ಸಿನಿಮಾ ಹಾಗೂ ಚಿತ್ರರಂಗದಿಂದ ದೂರ ಉಳಿದಿದ್ದ ರಾಧಿಕಾ ಕುಮಾರಸ್ವಾಮಿ ಈಗೀಗ ಒಂದೊಂದೇ ಸಿನಿಮಾದ ಮೂಲಕ ನಟನೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಬಹು ಸಮಯದ ನಂತರ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಧಿಕಾ ಕುಮಾರಸ್ವಾಮಿ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದು, ಈ ವೇಳೆ ತಮ್ಮ ಮಗಳ ಬಗ್ಗೆ ಮಾತನಾಡಿದ್ದಾರೆ.
ಮಗಳು ಸಿನಿಮಾದಲ್ಲಿ ನಟನೆ ಮಾಡುವ ಬಗ್ಗೆ ಮಾತನಾಡಿದ ಅವರು, 'ಈ ಭೈರಾದೇವಿ ಸಿನಿಮಾದಲ್ಲಿ ನನ್ನ ಮಗಳು ನಟನೆ ಮಾಡಬೇಕಿತ್ತು. ಆದರೆ ನಾನೇ ಬೇಡ ಎಂದು ನಿರ್ದೇಶಕರ ಕಡೆಯಿಂದ ಹೇಳಿಸಿದೆ. ಈ ಸಿನಿಮಾ ಬೇಡ ಮುಂದಿನ ಸಿನಿಮಾದಲ್ಲಿ ಮಾಡೋಣ ಅಂತಾ ಹೇಳಿಸಿ ಈ ಸಿನಿಮಾದ ಮಗು ಪಾತ್ರದಿಂದ ಅವಳನ್ನು ದೂರ ಉಳಿಸಿದೆ' ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.

'ಭೈರಾದೇವಿ ಸಿನಿಮಾದ ನಿರ್ದೇಶಕರು ನನ್ನ ಮಗಳನ್ನು ನೋಡಿ ಒಂದು ಸೀನ್ ತೆಗೆದುಕೊಂಡು ಬಂದರು. ಕಥೆ ಹಾಗೂ ಪಾತ್ರದ ಬಗ್ಗೆ ಕೇಳಿ ನಾನು ಮೊದಲು ಒಕೆ ಅಂತಾ ಹೇಳಿದೆ. ಸರಿ ಆಯ್ತು ಅವಳಿಂದಲೇ ಈ ಪಾತ್ರ ಮಾಡಿಸೋಣ ಚೆನ್ನಾಗಿದೆ ಅಂತಾ ಅಂದಿದ್ದೆ. ನನ್ನ ಜೊತೆ ನನ್ನ ಸಿನಿಮಾದಲ್ಲೇ ಇರುತ್ತಾಳೆ ಅಂತಾ ಒಕೆ ಅಂದಿದ್ದೆ'.
'ಬಳಿಕ ನಿರ್ದೇಶಕರು ಅವಳಿಗೆ ಆ ಸೀನ್ ಕೊಟ್ಟರು ಈ ಸಮಯದಲ್ಲಿ ಅವಳನ್ನು ನೋಡಿ ಇವಳು ನನ್ನನ್ನೇ ಮೀರಿಸುತ್ತಾಳೆ ಅಂತಾ ನನಗೆ ಅನಿಸಿತು. ಅಂದರೆ ಒಂದು ಅಳುವ ಸೀನ್ ಇತ್ತು. ಆ ಅಳುವ ದೃಶ್ಯವನ್ನು ಎಷ್ಟು ಚೆನ್ನಾಗಿ ಮಾಡಿದಳು ಅಂದರೆ, ನನ್ನ ಮಗಳಲ್ಲಿ ನಟನೆ ಎನ್ನುವ ಟ್ಯಾಲೆಂಟ್ ಇದೆ ಅಂತಾ ಅಲ್ಲಿಯವರೆಗೂ ನನಗೆ ಗೊತ್ತಿರಲಿಲ್ಲ. ಎಷ್ಟು ಚೆನ್ನಾಗಿ ಮಾಡಿದಳು ಅಂದರೆ ಡೈರೆಕ್ಟರ್‌ಗೆ ಖುಷಿ ಆಯ್ತು'.

'ಮೇಡಂ ಸಕ್ಕತ್ತಾಗಿ ಮಾಡುತ್ತಾರೆ ಇವರನ್ನೇ ಹಾಕಿ ಅಂದರೆ ನಾನು ಕೂಡ ಒಪ್ಪಿಕೊಂಡೆ. ಆದರೆ ಅವತ್ತು ಇಡೀ ದಿವಸ ಅವಳು ನಿದ್ದೆ ಮಾಡಿಲ್ಲ. ನನ್ನ ಬೆಳ್ಳಗೆ ಮಾಡು. ನನ್ನ ಚೆನ್ನಾಗಿ ಮಾಡಿ ನೀವು. ನಾನು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು. ನನಗೆ ನಟನೆ ಹೇಳಿಕೊಡಿ. ನಾಳೆ ಡೈರೆಕ್ಟರ್ ಬರುತ್ತಾರೆ ಇದನೆಲ್ಲಾ ನಾನು ಕಲಿಯಬೇಕು ಅಂತಾ ರಾತ್ರಿ ಎಲ್ಲಾ ಹೇಳುತ್ತಿದ್ದಳು'.
'ಆಮೇಲೆ ನನಗೆ ಅನಿಸಿತು ಇದು ಬೇಡ. ಓದುವ ಕಡೆ ಗಮನ ಹೊರಟು ಹೋಗುತ್ತದೆ. ಯಾಕೆಂದರೆ ಜೀವನದಲ್ಲಿ ಶಿಕ್ಷಣ ಎನ್ನುವುದು ಬಹಳ ಮುಖ್ಯ. ಅದಕ್ಕೆ ನಾನು ನನ್ನ ಅಣ್ಣನ ಹತ್ತಿರ ಮಾತನಾಡಿ ನಿರ್ದೇಶಕರಿಗೆ ಬೇಡ ಅಂತಾ ಹೇಳಿದೆ. ಡೈರೆಕ್ಟರ್ ಈ ಸಿನಿಮಾ ಬೇಡ ಮುಂದಿನ ಸಿನಿಮಾ ಬೇಡ ಅಂದಾಗ ಶಾಕ್ ಆದಳು. ನಾನು ಚೆನ್ನಾಗಿ ಆ್ಯಕ್ಟಿಂಗ್ ಮಾಡಿಲ್ವಾ ಅಂತಾ ಕೇಳಿದಳು. ಆದರೆ ಡೈರೆಕ್ಟರ್ ಸಮಾಧಾನ ಮಾಡಿ ಅದನ್ನು ಅಲ್ಲಿಗೆ ನಿಲ್ಲಿಸಿದರು. ಈ ಟೆನ್ನಿಸ್ ಕಲಿಯುತ್ತಿದ್ದಾಳೆ' ಎಂದು ಹೇಳಿದರು.












Click it and Unblock the Notifications