Actress Prema: ಫ್ಯಾನ್ಸ್‌ಗೆ ದೊಡ್ಡ ಸರ್‌ಪ್ರೈಸ್ ಕೊಡಲಿದ್ದಾರೆ ನಟಿ ಪ್ರೇಮಾ, ಏನದು?
ಸ್ಯಾಂಡಲ್‌ವುಡ್ ಮಾತ್ರವಲ್ಲದೆ ತಮಿಳು, ತೆಲುಗು ಸಿನಿಮಾಗಳಲ್ಲೂ ಮಿಂಚಿರುವ ನಟಿ ಪ್ರೇಮಾ ಅವರು ಹಲವು ವರ್ಷಗಳ ಕಾಲ ಪರದೆಯಿಂದ ದೂರ ಸರಿದಿದ್ದರು. ಕನ್ನಡದಲ್ಲಿ ಹಿಟ್ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅವರು ಬಹುತೇಕ ಕನ್ನಡದ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಓಂ, ಉಪೇಂದ್ರ, ಯಜಮಾನ ಸೇರಿದಂತೆ ಹಲವು ಎವರ್‌ಗ್ರೀನ್ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಪ್ರೇಮಾ ಅವರು ಹಲವು ವರ್ಷಗಳ ಬಳಿಕ ತಮ್ಮ ಅಭಿಮಾನಿಗಳಿಗೆ ಖುಷಿ ವಿಚಾರವೊಂದನ್ನು ತಿಳಿಸಿದ್ದಾರೆ. ಅಭಿಮಾನಿಗಳ ಅದೆಷ್ಟೋ ವರ್ಷದ ಕನಸು ಈಡೇರುವ ಸುಳಿವು ನೀಡಿದ್ದಾರೆ ಪ್ರೇಮಾ.
ಸಿನಿಮಾಗಳಲ್ಲಿ ಸೈ ಎನಿಸಿಕೊಂಡಿದ್ದ ಪ್ರೇಮಾ ಅವರು ಕಿರುತೆರೆ ಅಂಗಳಕ್ಕೂ ಕಾಲಿಟ್ಟು ಹವಾ ಕ್ರಿಯೇಟ್ ಮಾಡಿದ್ದರು. ಹಿರಿತೆರೆ ಮಾತ್ರವಲ್ಲದೆ ಕಿರುತೆರೆ ಪ್ರೇಕ್ಷಕರಿಗೂ ಅವರು ಮನಸ್ಸಿಗೆ ಹತ್ತಿರವಾಗಿದ್ದರು. ಅಲ್ಲಿಯೂ ಕಾರಣಾಂತರಗಳಿಂದ ದೂರವಾಗಿದ್ದ ಅವರು ಇದೀಗ ಮತ್ತೊಮ್ಮೆ ಕಿರುತೆರೆ ಅಂಗಳಕ್ಕೆ ಬರಲು ರೆಡಿಯಾಗಿದ್ದಾರೆ. ಈ ವಿಚಾರ ಕೇಳಿ ಪ್ರೇಮಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಪ್ರೇಮಾ ಅವರು ಎರಡನೇ ಬಾರಿ ಕಿರುತೆರೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ರಿಯಾಲಿಟಿ ಶೋಗಳ ತೀರ್ಪುಗಾರರಾಗಿಯೂ ಗಮನ ಸೆಳೆದಿದ್ದ ಪ್ರೇಮಾ ಅವರು ಇದೀಗ ಮತ್ತೊಂದು ರಿಯಾಲಿಟಿ ಶೋ ಮೂಲಕ ಮಿಂಚಲು ಸಜ್ಜಾಗಿದ್ದಾರೆ. ಈ ಹಿಂದೆ ಅವರು ಮಹಾನಟಿ ರಿಯಾಲಿಟಿ ಶೋನ ತೀರ್ಪುಗಾರರಾಗಿದ್ದರು, ಇದೀಗ ಈ ರಿಯಾಲಿಟಿ ಶೋನ ಎರಡನೇ ಸೀಸನ್ ಕೂಡ ಶುರುವಾಗಲಿದ್ದು, ಇದರಲ್ಲಿಯೂ ಪ್ರೇಮಾ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ.
ಇದೇ ಜೂನ್ 14ರಿಂದ ಈ ಕಾರ್ಯಕ್ರಮ ತೆರೆಕಾಣಲಿದೆ. ಇದರಲ್ಲಿಯೂ ಪ್ರೇಮಾ ಅವರು ಮತ್ತೊಮ್ಮೆ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಸೀಸನ್‌ನಲ್ಲಿ ನಟ ರಮೇಶ್ ಅರವಿಂದ್, ತರುಣ್ ಸುಧೀರ್, ನಿಶ್ವಿಕಾ ನಾಯ್ಡು ಹಾಗೂ ಪ್ರೇಮಾ ಅವರು ತೀರ್ಪುಗಾರರಾಗಿದ್ದರು. ಈ ಬಾರಿಯೂ ಅದೇ ತಂಡ ಕಾಣಿಸಿಕೊಳ್ಳಲಿದೆ. ಈಗ ರಿಲೀಸ್ ಆಗಿರುವ ಪ್ರೋಮೋದಲ್ಲಿ ಪ್ರೇಮಾ ಕಾಣಿಸಿಕೊಂಡಿದ್ದಾರೆ. ನಿಶ್ವಿಕಾ, ತರುಣ್ ಸುಧೀರ್ ಕೂಡ ಪ್ರೋಮೋದಲ್ಲಿ ಮಿಂಚಿದ್ದಾರೆ. ಈ ಮೂಲಕ ಅಭಿಮಾನಿಗಳ ಮುಂದೆ ಪ್ರೇಮಾ ಅವರು ಮತ್ತೆ ಬರಲಿದ್ದಾರೆ.
"ಸವ್ಯಸಾಚಿ" ಸಿನಿಮಾ ಮೂಲಕ ನಟನೆ ಶುರು ಮಾಡಿದ ಅವರು ತಮ್ಮ ಎರಡನೇ ಸಿನಿಮಾಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ "ಓಂ" ಸಿನಿಮಾ ಪ್ರೇಮಾ ಅವರ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟಿತ್ತು. ಶಿವಣ್ಣ ಹಾಗೂ ಪ್ರೇಮಾ ಜೋಡಿಯನ್ನು ಜನ ಮೆಚ್ಚಿದ್ದರು. ಅಂದು ಪ್ರೇಮಾ ನಟಿಸಿದ ಸಿನಿಮಾಗಳು ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದೆ. 2007ರಿಂದ ಸಿನಿಮಾಗಳಿಂದ ದೂರವಿದ್ದ ಅವರು 2017ರಲ್ಲಿ ಉಪೇಂದ್ರ ಮತ್ತೆ ಬಾ ಸಿನಿಮಾದಿಂದ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದರು. ನಟಿ ಪ್ರೇಮಾ ಅವರು ಸುಮಾರು 70ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.












Click it and Unblock the Notifications