Pavithra Gowda: ಅವನೇ ಭಗವಂತನ ಪ್ರತಿರೂಪ ಎಂದ ನಟಿ ಪವಿತ್ರಾ ಗೌಡ
Pavithra Gowda: ನಟಿ ಪವಿತ್ರಾ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಅವರು ಇನ್ಸ್ಟಾಗ್ರಾಮ್ (Instagram)ನಲ್ಲಿ ಮಾಡುವ ಕೆಲವೊಂದು ಪೋಸ್ಟ್‌ಗಳು ಭಾರೀ ವೈರಲ್ ಆಗುವುದು ಇದೆ. ಇದೀಗ ಅವರು ಮಾಡಿರುವ ಪೋಸ್ಟ್‌ವೊಂದು ಗಮನ ಸೆಳೆದಿದ್ದು, ವೈರಲ್ ಆಗುತ್ತಿದೆ. ಈಚೆಗೆ ಪವಿತ್ರಾ ಗೌಡ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಸ್ಟೋನಿ ಬ್ರೂಕ್ ಡಿ ಬಾಸ್ ಸಫಾರಿಗೆ ಭೇಟಿ ಕೊಟ್ಟಿದ್ದರು. ಇದೇ ವಿಡಿಯೋವನ್ನು ಪ್ರದೀಪ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಇನ್ನು ಈಗ ಶೇರ್ ಮಾಡಿಕೊಂಡುರುವ ಪೋಸ್ಟ್‌ನಲ್ಲಿ ಪವಿತ್ರಾ ಅವರು ಸ್ಪೆಷಲ್ ಮೆಸೇಜ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಹೆಣ್ಣಿನ ಭಾವನೆಗಳ ಬಗ್ಗೆ ಪೋಸ್ಟ್‌ವೊಂದನ್ನು ಪವಿತ್ರಾ ಗೌಡ ಅವರು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ "ಹೆಣ್ಣಿನ ಭಾವನೆಗಳನ್ನು ಭಗವಂತನೊಬ್ಬನಿಂದಲೇ ಅರಿಯಲು ಸಾಧ್ಯ. ಹಾಗೆಂದಾದರೂ ಒಬ್ಬ ವ್ಯಕ್ತಿ ಅವಳ ಭಾವನೆಗಳನ್ನು ಅರಿತಿದ್ದಾನೆಂದರೆ, ಬಹುಶಃ ಅವನು ಪಾಲಿಗೆ ಅವನೇ ಭಗವಂತನ ಪ್ರತಿರೂಪನಾಗಿರುತ್ತಾನೆ" ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪವಿತ್ರಾ ಅವರು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು. ಆಗಾಗ ಕೆಲವೊಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವೊಂದು ಪೋಸ್ಟಗಳು ಮಾರ್ಮಿಕವಾಗಿದ್ದರೆ ಇನ್ನೂ ಕೆಲವೊಂದು ಪೋಸ್ಟ್‌ಗಳು ಸಂದೇಶ ಹಂಚಿಕೊಳ್ಳುವಂತೆ ಇದೆ. ಅದೇ ರೀತಿಯ ಪೋಸ್ಟ್ ಈಗ ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಇನ್ನು ಈಚೆಗೆ ಅವರು ಇನ್ಸ್ಟಾದಲ್ಲಿ Believe in GOD and even obstacles turn into opportunities ❤️❤️ ದೇವರಲ್ಲಿ ನಂಬಿಕೆ ಇಡಿ, ಅಡೆತಡೆಗಳು ಸಹ ಅವಕಾಶಗಳಾಗಿ ಬದಲಾಗುತ್ತವೆ ❤️❤️ ಎಂದು ಬರೆದುಕೊಂಡಿದ್ದರು. ಈ ಪೋಸ್ಟಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲವರು ನೆಗಿಟಿವ್ ಕಮೆಂಟ್‌ಗಳನ್ನು ಹಾಕಿದ್ದರೂ. ಹಲವರು ನಿಮ್ಮ ಅಡೆತಡೆಗಳು ಕೊನೆಯಾಗಿ ಒಳ್ಳೆಯದಾಗಲಿ ಎಂದು ಶುಭಕೋರಿದ್ದಾರೆ.
ಕೋರ್ಟ್‌ಗೆ ಗೈರು: ಇನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟ ದರ್ಶನ್ ಅವರು ಈಚೆಗೆ ಕೋರ್ಟ್‌ಗೆ ಹಾಜರಾಗಿದ್ದರು. ಇದೇ ಸಂದರ್ಭದಲ್ಲಿ ಸಿಸಿಎಚ್ 57 ಕೋರ್ಟ್‌ಗೆ ಪವಿತ್ರಾಗೌಡ ಅವರು ಸಹ ಆಗಮಿಸಬೇಕಿತ್ತು. ಆದರೆ ಅವರು ಈ ಬಾರಿ ವಿಚಾರಣೆಗೆ ಬಂದಿರಲಿಲ್ಲ. ಇನ್ನು ವಿಚಾರಣೆಗೆ ನಾಗರಾಜು, ವಿನಯ್ ಹಾಗೂ ಪವಿತ್ರಗೌಡ ಅವರು ಗೈರಾಗಿದ್ದರು ಎನ್ನಲಾಗಿದೆ. ಬಹುತೇಕ ಆರೋಪಿಗಳು ಈ ವಿಚಾರಣೆಗೆ ಗೈರಾಗಿದ್ದು ಇವರನ್ನು ಮತ್ತೆ ಆಗಸ್ಟ್ 12ರಂದು ಹಾಜರಾಗಲು ಆದೇಶ ನೀಡಲಾಗಿದೆ.












Click it and Unblock the Notifications