Neena Gupta: ಸೆಕ್ಸ್ ಇರುವುದೇ ಎಂಜಾಯ್ ಮಾಡುವುದಕ್ಕೆ ಎಂದ ನಟಿ!

ನಮ್ಮ ದೇಶದಲ್ಲಿ ಯಾರೇ ಸೆಕ್ಸ್‌ನ ಬಗ್ಗೆ ಮಾತನಾಡಿದರೂ ಅದು ಹೆಚ್ಚು ಚರ್ಚೆಯಾಗುತ್ತದೆ. ಅದರಲ್ಲೂ ನಟಿಯರು ಮಾತನಾಡಿದರೆ ಈ ವಿಷಯಗಳನ್ನು ಇನ್ನಷ್ಟು ಗಂಭೀರ ಚರ್ಚೆ ಹಾಗೂ ವಿವಾದದ ಸ್ವರೂಪವನ್ನೇ ಪಡೆದುಕೊಂಡು ಬಿಡುತ್ತವೆ. ಇದೀಗ ಪ್ರಮುಖ ನಟಿಯೊಬ್ಬರು ಸೆಕ್ಸ್‌ನ ಬಗ್ಗೆ ನೇರಾ - ನೇರವಾಗಿ ಮಾತನಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ. ನಮ್ಮ ದೇಶದ ಮಹಿಳೆಯರು ಸೆಕ್ಸ್‌ ಎಂಜಾಯ್‌ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ನೇರ ಮಾತುಗಳಿಂದಲೇ ಹೆಚ್ಚು ಚರ್ಚೆಯಾಗುವ ಹಾಗೂ ಇಳಿ ವಯಸ್ಸಿನಲ್ಲೂ ಸಿನಿಮಾ ಹಾಗೂ ಸೀರಿಸ್‌ಗಳಲ್ಲಿ ಮಿಂಚುತ್ತಿರುವ ನಟಿ ನೀನಾ ಗುಪ್ತಾ ಅವರು ಇದೀಗ ಸೆಕ್ಸ್‌ ವಿಚಾರವಾಗಿ ಮಾತನಾಡಿದ್ದು ಅವರು ಕೊಟ್ಟಿರುವ ಹೇಳಿಕೆ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

Actress Neena Gupta says sex is for enjoyment

ಭಾರತದಲ್ಲಿ ಕೆಲವು ಮಹಿಳೆಯರಿಗೆ ಸೆಕ್ಸ್‌ನ ಗಂಧ ಗಾಳಿ ಸಹ ಗೊತ್ತಿಲ್ಲ ಎಂಬರ್ಥದಲ್ಲಿ ನೀನಾ ಮಾತನಾಡಿದ್ದಾರೆ. ಲಿಲ್ಲಿಂಗ್ ಸಿಂಗ್ ಅವರ ಜೊತೆ ಸಂದರ್ಶನದಲ್ಲಿ ಮಾತನಾಡುವ ಸಂದರ್ಭದಲ್ಲಿ ಅವರು ಸೆಕ್ಸ್‌ ಬಗ್ಗೆ ಮಾತನಾಡಿದ್ದು. ಇದೀಗ ಈ ಮಾತುಗಳು ಭಾರೀ ವೈರಲ್ ಆಗಿದ್ದು. ಪರ - ವಿರೋಧ ಚರ್ಚೆ ಶುರುವಾಗಿದೆ.

ನಮ್ಮ ದೇಶದಲ್ಲಿ ಬಹುತೇಕ ಮಹಿಳೆಯರಿಗೆ ಸೆಕ್ಸ್ ಅನ್ನುವುದು ತಮ್ಮ ಸಂತೋಷಕ್ಕಾಗಿ ಇರುವ ಕ್ರಿಯೆ ಅಂತ ಗೊತ್ತೇ ಇಲ್ಲ. ಸೆಕ್ಸ್‌ ಮಾಡುವುದೇ ಪುರುಷರ ಸಂತೋಷಕ್ಕಾಗಿ ಅಂತ ತಿಳಿದುಕೊಂಡಿದ್ದಾರೆ. ಇನ್ನೂ ಕೆಲವರು ಇದು ಮಕ್ಕಳು ಮಾಡಿಕೊಳ್ಳುವುದಕ್ಕೆ ಮಾತ್ರ ಮಾಡುತ್ತಾರೆ ಅಂತ ಅಂದುಕೊಂಡಿದ್ದಾರೆ ಎಂದು ಅವರು ವಿಷಾದದಿಂದ ಹೇಳಿದ್ದಾರೆ.

ಭಾರತದಲ್ಲಿ ಬಹಳಷ್ಟು ಮಹಿಳೆಯರಿಗೆ ಲೈಂಗಿಕತೆ ಎನ್ನುವುದು ಇರುವುದ ಆನಂದಕ್ಕೋಸ್ಕರ ಅಂತ ತಿಳಿದೇ ಇಲ್ಲ. ಮಹಿಳೆಯರು ಹಾಗೂ ಲೈಂಗಿಕತೆಯ ವಿಚಾರದಲ್ಲಿ ನನಗೆ ತುಂಬಾ ನೋವಿದೆ. ನಮ್ಮಲ್ಲಿ 99 ಅಥವಾ ಶೇ 95ರಷ್ಟು ಭಾರತೀಯ ಮಹಿಳೆಯರಿಗೆ ಈ ವಿಚಾರದ ಬಗ್ಗೆ ಸ್ಪಷ್ಟತೆ ಇಲ್ಲ. ಇವರಿಗೆ ಅದನ್ನು ಮಾಡುವುದು ಆನಂದಕ್ಕೋಸ್ಕರ ಎನ್ನುವ ಐಡಿಯಾ ಇಲ್ಲ. ಮಕ್ಕಳನ್ನು ಮಾಡಿಕೊಳ್ಳುವುದು ಇಲ್ಲವೇ ಗಂಡನನ್ನು ಖುಷಿಪಡಿಸುವುದಷ್ಟೇ ಇದರ ಕೆಲಸ ಎಂದುಕೊಂಡಿದ್ದಾರೆ.

ನಾನು ತಲೆಕೆಡಿಸಿಕೊಳ್ಳಲ್ಲ: ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ಹಾಗೂ ಕಟು ವಿಮರ್ಶಗೆ ಒಳಗಾಗಿರುವ ನೀನಾ ಅವರು ಮೊದಲಿನಿಂದಲೂ ಈ ರೀತಿಯ ವಿಷಯಗಳನ್ನು ಬಹಿರಂಗವಾಗಿ ಹಾಗೂ ಮುಕ್ತವಾಗಿ ಮಾತನಾಡಿದ್ದಾರೆ. ಇನ್ನು ಕೆಲವು ನಟರು ತಮ್ಮ ಮೈಕ್‌ಗಳನ್ನು ತಮ್ಮ ಬಟ್ಟೆಯ ಒಳಗೆ ಹಾಕಿಕೊಳ್ಳುವುದಕ್ಕೆ / ಮೈಕ್ ಕಾಣಿಸದಂತೆ ಹಾಕಿಕೊಳ್ಳುವುದಕ್ಕೆ ಗ್ರೀನ್ ರೂಮ್‌ ಒಳಗೆ ಹೋಗುತ್ತಾರೆ. ಆದರೆ ನಾನು ಚಿತ್ರೀಕರಣದ ಸಮಯದಲ್ಲಿ ಯಾರು ಅಕ್ಕಪಕ್ಕ ಇದ್ದರೂ ಮೈಕ್‌ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯಾರಾದರೂ ನೋಡುತ್ತಾರೆ ಎನ್ನುವುದನ್ನು ನೋಡುವುದಕ್ಕೆ ಹೋಗಲ್ಲ ಅಂತ ಅವರು ಹೇಳಿದ್ದಾರೆ.

ಇನ್ನು ನೀನಾ ಅವರು ಹೇಳಿರುವ ಮಾತುಗಳಿಗೆ ಪರ - ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ನೀನಾ ಹೇಳಿದ್ದು ಸರಿ ಈ ಬಗ್ಗೆ ತಪ್ಪು ಭಾವನೆ ಇದೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಈ ರೀತಿ ಬಹಿರಂಗವಾಗಿ ಮಾತನಾಡುವುದು ತಪ್ಪು ಅಂತ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+