ಮಂಚ ಹತ್ತಿದ್ರೆ ಸಿನಿಮಾದಲ್ಲಿ ಚಾನ್ಸ್ ಎಂದು ಸಂಬಂಧಿಕಳನ್ನೇ ದಂಧೆಗೆ ತಳ್ಳಿದ ಖ್ಯಾತ ನಟಿ!
ಭಾರತೀಯ ಚಿತ್ರರಂಗದಲ್ಲಿ ಮೀಟೂ ಎಂಬುದು ದೊಡ್ಡ ಕ್ರಾಂತಿಗೆ ಮುನ್ನುಡಿ ಬರೆದಿತ್ತು. ಹಲವು ನಟಿಯರು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗ ಹೇಳಿಕೆ ನೀಡುವ ಸಂಚಲನ ಸೃಷ್ಟಿಸಿದ್ದರು. ಕನ್ನಡದಲ್ಲೂ ಮೀಟೂ ಸದ್ದು ಮಾಡಿತ್ತು. ಈ ಸಾಲಿನಲ್ಲಿ ಖ್ಯಾತ ನಟಿ ಮಿನು ಮುನೀರ್ ಕೂಡ ಒಬ್ಬರಾಗಿದ್ದರು. ಖ್ಯಾತ ನಟನ ವಿರುದ್ಧ ಲೈಂಗಿಕ ಕಿರುಕುಳ ಮಾಡಿದ್ದ ಮಿನು, ಬಳಿಕ ಅರೆಸ್ಟ್ ಕೂಡ ಆಗಿದ್ದರು. ಇದೀಗ ವೇ*ಶ್ಯಾವಾಟಿಕೆ ಕೇಸ್‌ನಲ್ಲಿ ನಟಿ ಮಿನು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿರುವ ಮಿನು ಮುನೀರ್ ಅವರನ್ನ 10 ವರ್ಷದ ಹಿಂದಿನ ಕೇಸ್‌ನಲ್ಲಿ ಅರೆಸ್ಟ್ ಮಾಡಲಾಗಿದೆ. ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಮಂಗಲಂ ಮಹಿಳಾ ಪೊಲೀಸರು ನಟಿಯನ್ನ ಬಂಧಿಸಿದ್ದಾರೆ. ತಿರುಮಂಗಲಂನ ಪೊಲೀಸ್ ತಂಡವು ಕೇರಳಕ್ಕೆ ಹೋಗಿ ವಿಚಾರಣೆಗಾಗಿ ಚೆನ್ನೈಗೆ ಕರೆತಂದಿದೆ.

ಏನಿದು ಆರೋಪ?
ಸುಮಾರು 10 ವರ್ಷಗಳ ಹಿಂದೆ ಈ ಪ್ರಕರಣ ನಡೆದಿದೆ. ನಟಿಯ ಸಂಬಂಧಿಯೇ ಆಗಿದ್ದ 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಈಗ 26 ವರ್ಷದ ಅದೇ ಬಾಲಕಿ ಕೇರಳದಲ್ಲಿ ದೂರು ದಾಖಲಿಸಿದ್ದಳು. ಬಳಿಕ ಚೆನ್ನೈನಲ್ಲಿ ಆ ಅಪರಾಧ ನಡೆದ ಸ್ಥಳವಾಗಿದ್ದರಿಂದ ಅದನ್ನು ಕೇರಳದಿಂದ ಚೆನ್ನೈ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಈ ಹಿನ್ನೆಲೆ ನಟಿಯನ್ನು ಬಂಧಿಸಲಾಗಿದೆ.
ಶಾಲೆ ರಜೆಗೆ ಬಂದಿದ್ದ ಬಾಲಕಿ
ಸಂತ್ರಸ್ತೆಯ ತಾಯಿ ತನ್ನ 16 ವರ್ಷದ ಮಗಳನ್ನು ಶಾಲಾ ರಜೆಯ ಸಮಯದಲ್ಲಿ ದೂರದ ಸಂಬಂಧಿಯಾಗಿದ್ದ ನಟಿ ಮಿನು ಮುನೀರ್ ಜೊತೆ ಚೆನ್ನೈಗೆ ಕಳುಹಿಸಿದ್ದರು. ಅಲ್ಲದೆ ಸಿನಿಮಾಗಳಲ್ಲಿ ಚಾನ್ಸ್ ಪಡೆಯಲು ತನಗೆ ಸಹಾಯ ಮಾಡುವಂತೆ ಆ ಬಾಲಕಿಗೆ ಒತ್ತಾಯಿಸಿ, ಅಣ್ಣಾ ನಗರದ ಹೋಟೆಲ್‌ಗೆ ಕರೆದೊಯ್ದಿದ್ದರು. ಅಲ್ಲಿ ಸಿನಿಮಾಗಳಲ್ಲಿ ಅವಕಾಶದ ಚರ್ಚಿಸುವ ನೆಪದಲ್ಲಿ ನಾಲ್ಕು ಮಂದಿ ಪುರುಷರನ್ನು ಪರಿಚಯಿಸಿದ್ದು, ಅದರಲ್ಲಿ ಇಬ್ಬರು ಹುಡುಗಿಯನ್ನು ಅನುಚಿತವಾಗಿ ಮುಟ್ಟಿದ್ದರು. ಆದರೆ ಭಯದಿಂದ ಸಂತ್ರಸ್ತೆ ಆ ಸಮಯದಲ್ಲಿ ಘಟನೆಯ ಬಗ್ಗೆ ವರದಿ ಮಾಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ತನ್ನ ಸಂಬಂಧಿಯಾಗಿರುವ ಹುಡುಗಿಯನ್ನ ಸಿನಿಮಾ ಅವಕಾಶದ ಭರವಸೆ ನೀಡಿ ತಮಿಳುನಾಡಿಗೆ ಕರೆದೊಯ್ದು, ನಂತರ ವೇ*ಶ್ಯಾವಾಟಿಕೆ ಜಾಲಕ್ಕೆ ದೂಡಲು ಯತ್ನಿಸಿದ್ದರು ಎಂಬ ಆರೋಪವೂ ನಟಿಯ ಮೇಲೆ ಕೇಳಿಬಂದಿದೆ. ಕಳೆದ ವರ್ಷ ಆ ಸಂತ್ರಸ್ತ ಹುಡುಗಿಯ ಪೋಷಕರು ಕೇರಳ ಪೊಲೀಸರನ್ನು ಸಂಪರ್ಕಿಸಿ, ನಾಲ್ವರು ಪುರುಷರ ಹೆಸರನ್ನು ಹೆಸರಿಸಿ ಮತ್ತು ಮಿನು ಅವರ ಕೃತ್ಯಗಳನ್ನು ಹೇಳಿ ದೂರು ದಾಖಲಿಸಿದ್ದರು. ಪೊಲೀಸರು ಆ ಹೋಟೆಲ್ ಅನ್ನು ಪರಿಶೀಲಿಸುತ್ತೇವೆ. ಆ ನಾಲ್ವರು ಪುರುಷರನ್ನು ಗುರುತಿಸುತ್ತೇವೆ ಎಂದು ಹೇಳಿದ್ದಾರೆ. ನಟಿ ಮಿನು ಈ ಅಪರಾಧಕ್ಕೆ ಪ್ರಚೋದನೆ ನೀಡಿರುವುದು ಕಂಡುಬಂದರೆ, ಅವರಿಗೆ ಶಿಕ್ಷೆಯಾಗಲಿದೆ. ಹೀಗಾಗಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications