Vijayalakshmi Darshan: ದರ್ಶನ್ ಪತ್ನಿ ಬರ್ತ್ ಡೇ: ಸ್ಟ್ರಾಂಗ್ ಲೇಡಿ ಲವ್ ಯೂ ಜಾಸ್ತಿ ಎಂದ ನಟಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ಜೈಲು ಸೇರಿದ್ದ ನಟ ದರ್ಶನ್‌ ಗೆ ಸದ್ಯ ಮಧ್ಯಂತರ ಜಮೀನು ಸಿಕ್ಕಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ನಟ ದರ್ಶನ್‌ ಗಾಗಿ ಕೂನೂನು ಹೋರಾಟವನ್ನ ನಡೆಸಿದ್ದು, ವಿಜಯಲಕ್ಷ್ಮಿ ಹೋರಾಟಕ್ಕೆ ಅಭಿಮಾನಿಗಳ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದರು.

ನವೆಂಬರ್‌ 11 ರಂದು(ಸೋಮವಾರ) ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಜನ್ಮದಿನ. ವಿಜಯಲಕ್ಷ್ಮಿ ಅವರ ಹುಟ್ಟು ಹಬ್ಬದಂದು ನಟಿ ಕಾವ್ಯಗೌಡ ಅವರು ಸ್ಟ್ರಾಂಗ್‌ ಲೇಡಿ ಎಂದು ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ. ವಿಜಯಲಕ್ಷ್ಮೀ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಅವಳ ಗೆಳತಿಯಾಗಿರುವ ನಟಿ ಕಾವ್ಯಾ ಗೌಡ, ಅಕ್ಕನ ಸ್ಥಾನದಲ್ಲಿರುವ ವಿಜಯಲಕ್ಷ್ಮೀಯವರಿಗೆ ಪ್ರೀತಿಯಿಂದ ವಿಶ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ವಿಡಿಯೋ, ಫೋಟೊ ಹಂಚಿಕೊಂಡಿದ್ದಾರೆ.

Actress Kavya Gowda Special Wishes For Vijayalakshmi Darshan Birthday

ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಹಾಗೂ ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ದರ್ಶನ್ ನಡುವೆ ಉತ್ತಮ ಸಂಬಂಧವಿದ್ದು, ಕಾವ್ಯಾ ಗೌಡ ತಮ್ಮ ಇನ್'ಸ್ಟಾಗ್ರಾಂ ಸ್ಟೋರಿಯಲ್ಲಿ ಮೊದಲಿಗೆ ತಮ್ಮ ಮಗಳು ಸಿಯಾಳೊಂಡಿಗೆ ವಿಜಯಲಕ್ಷ್ಮೀ ವಿಡಿಯೋ ನೋಡಿ, ಹಾಡು ಹಾಡುತ್ತಿರುವ ಮುದ್ದಾದ ವಿಡಿಯೋ ಶೇರ್ ಮಾಡಿ, ಹ್ಯಾಪಿ ಬರ್ತ್ ಡೇ ದೊಡ್ಡಮ್ಮ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕಿರುತೆರೆ ನಟಿ ಕಾವ್ಯಾ ಗೌಡ ಅವರ ಮನೆಯ ಪ್ರತಿಯೊಂದು ಸಮಾರಂಭದಲ್ಲೂ ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ಭಾಗವಹಿಸುತ್ತಾರೆ.

ಇನ್ನೂ ವಿಜಯಲಕ್ಷ್ಮಿ ಅವರ ಜನ್ಮದಿನದ ಹಿನ್ನಲೆ ಮತ್ತೊಂದು ಸ್ಟೋರಿಯಲ್ಲಿ ಕಾವ್ಯಾ ಗೌಡ ಅವರು ತಮ್ಮ ಜೊತೆಗೆ ವಿಜಯಲಕ್ಷ್ಮೀಯವರ ಕೆಲವು ವಿಶೇಷ ಕ್ಷಣಗಳ ಫೋಟೊ ಶೇರ್ ಮಾಡಿ, ಪ್ರೀತಿಯ ಅಕ್ಕನಿಗೆ ವಿಶೇಷವಾದ ಮೆಸೇಜ್ ಕೂಡ ಮಾಡುವ ಮೂಲಕ ಕಾವ್ಯಾಗೌಡ ಅವರು ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. ನನ್ನ ಸುಂದರಿ ಅಕ್ಕನಿಗೆ ಹ್ಯಾಪಿ ಬರ್ತ್ ಡೇ, ಪದಗಳಲ್ಲಿ ಹೇಳೋದಕ್ಕಿಂತ ಜಾಸ್ತಿ ನಿಮ್ಮನ್ನ ಪ್ರೀತಿಸ್ತೇನೆ. ಯಾವಾಗ್ಲೂ ಖುಷಿಯಾಗಿರಿ, ಆ ದೇವರು ನಿಮಗೆ ಎಲ್ಲಾ ರೀತಿಯ ಸಂತೋಷ ಮತ್ತು ಯಶಸ್ಸನ್ನು ನೀಡಲಿ, ಯಾವಾಗ್ಲೂ ಶೈನ್ ಆಗ್ತಾನೆ ಇರಿ, ಯು ಆರ್ ಸ್ಟ್ರಾಂಗ್ ಲೇಡಿ, ಲವ್ ಯು ಜಾಸ್ತಿ ಎಂದು ಕಾವ್ಯಾ ಗೌಡ ಅವರು ಬರೆದುಕೊಂಡಿದ್ದಾರೆ.

ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಅವರ ಮನೆಯ ಹಲವು ಕಾರ್ಯಕ್ರಮಗಳಲ್ಲಿ ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ಭಾಗಿಯಾಗಿದ್ದಾರೆ. ಕಾವ್ಯಾ ಗೌಡ ಮತ್ತು ವಿಜಯಲಕ್ಷ್ಮೀ ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಕಳೆದ ವರ್ಷ, ಅದಕ್ಕೂ ಮೊದಲು ವಿಜಯಲಕ್ಷ್ಮೀಯವರ ಬರ್ತ್ ಡೇ ಪಾರ್ಟಿಯಲ್ಲಿ ಕಾವ್ಯಾ ಗೌಡ ಭಾಗಿಯಾಗಿ ಸಂಭ್ರಮಿಸಿದ್ದರು. ಈ ಬಾರಿ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಫೋಟೊಗಳನ್ನು ಶೇರ್ ಮಾಡಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಇನ್ನೂ ಕಾವ್ಯಾ ಗೌಡ ಸೀಮಂತ ಕಾರ್ಯಕ್ರಮದಲ್ಲಿ ಈ ಹಿಂದ ವಿಜಯಲಕ್ಷ್ಮಿ ಅವರು ಭಾಗಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+