'ಡಿಬಾಸ್ ಫ್ಯಾನ್ ಆದ್ರೂ ನಾನು ಎಜುಕೇಟೆಡ್, ಬಾಸ್ ಏನಂತ ಫ್ಯಾನ್ಸ್‌ಗೆ ಮಾತ್ರ ಗೊತ್ತು'
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಅವರು ಮತ್ತೆ ಜೈಲು ಸೇರಿದ್ದಾರೆ. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳನ್ನ ಅವಿದ್ಯಾವಂತರು ಎಂದು ಕರೆಯಲಾಗುತ್ತಿದ್ದು, ಈ ಬಗ್ಗೆ ದರ್ಶನ್ ಅಭಿಮಾನಿಯೂ ಆಗಿರುವ "ಮಹಾನಟಿ" ಹಾಗೂ "ಭರ್ಜರಿ ಬ್ಯಾಚುಲರ್ಸ್" ಖ್ಯಾತಿಯ ಕಿರುತೆರೆ ನಟಿ ಗಗನಾ ಗರಂ ಆಗಿದ್ದಾರೆ. ಅವಿದ್ಯಾವಂತರು ಎಂದವರಿಗೆ ಗಗನಾ ತಿರುಗೇಟು ನೀಡಿದ್ದು, 'ಡಿಬಾಸ್ ಏನು ಅಂತ ಬಾಸ್ ಫ್ಯಾನ್ಸ್‌ಗೆ ಮಾತ್ರ ಗೊತ್ತು. ಅವರು ಮನಸ್ಸಿಂದ ತುಂಬಾ ಒಳ್ಳೆಯವರು' ಎಂದಿದ್ದಾರೆ.
'ಜೀವನದಲ್ಲಿ ಮನುಷ್ಯರಿಗೆ ಒಳ್ಳೇದು, ಕೆಟ್ಟದ್ದು ಅನ್ನೋದು ಆಗುತ್ತಲೇ ಇರುತ್ತೆ. ಆದರೆ ಡಿಬಾಸ್‌ಗೆ ಸ್ವಲ್ಪ ದೊಡ್ಡದಾಗಿ ಕೆಟ್ಟದಾಗಿದೆ. ಈಗ ದೀಪ ಜೋರಾಗಿ ಉರಿಯುತ್ತಿದೆ ಅಂದ್ರೆ, ಅದು ಬೇಗನೆ ಆರಿ ಹೊಸ ಬೆಳಕು ಬರುತ್ತೆ ಎಂದರ್ಥ. ಹಾಗೆಯೇ ಈ ಕೆಟ್ಟದೆಲ್ಲ ಮುಗಿದು ಒಳ್ಳೆಯ ಸುದ್ದಿ ಬಂದೇ ಬರುತ್ತೆ. ಅದಕ್ಕಾಗಿ ನಾವೆಲ್ಲ ಕಾದಿದ್ದೀವಿ ಎಂದು ಗಗನಾ ಹೇಳಿದ್ದಾರೆ. ಬಾಸ್ ಅವರ ಡೆವಿಲ್ ಸಿನಿಮಾ ಯಾವಾಗ? ಹೇಗೆ ಬರುತ್ತೆ ಎಂದು ಕಾತರದಿಂದ ಕಾಯುತ್ತಿದ್ದೇವೆ. ಕೆಟ್ಟದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಒಳ್ಳೆಯ ವಿಚಾರದ ಬಗ್ಗೆ ಯೋಚನೆ ಮಾಡ್ತೀವಿ. ಬಾಸ್ ತುಂಬಾ ಸ್ಟ್ರಾಂಗ್ ಆಗಿ ವಾಪಸ್ ಬರ್ತಾರೆ ಅನ್ನೋ ನಂಬಿಕೆ ಇದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಅಭಿಮಾನಿಗಳನ್ನ ಅನ್‌ಎಜುಕೇಟೆಡ್ ಅಂತಿದ್ದಾರೆ. ಎಲ್ಲ ಸೆಲೆಬ್ರಿಟಿಗಳಿಗೂ ತಮ್ಮದೇ ಅಭಿರುಚಿಯ ಫ್ಯಾನ್ಸ್ ಇರುತ್ತಾರೆ. ನಾನು ಕೂಡ ಎಜುಕೇಟೆಡ್. ನಾನು ಅವರ ಸಿನಿಮಾಗಳನ್ನ ನೋಡಿ ಇಷ್ಟಪಟ್ಟಿದ್ದೀನಿ. ಇವತ್ತಿಗೂ ಅವರ ಸಿನಿಮಾ ನೋಡಿಯೇ ಇಷ್ಟಪಡುತ್ತೇನೆ. ನನ್ನ ಬದುಕಿಗೆ ಅವರೇ ಪ್ರೇರಣೆ, ಅವರ ನನ್ನ ಪ್ರೀತಿಯ ರಾಮು ನೋಡಿದ್ರೆ, ಈ ರೀತಿ ಅಭಿನಯ ಮಾಡಬೇಕು ಅನಿಸುತ್ತೆ. ದತ್ತ ಸಿನಿಮಾ ನೋಡಿದ್ರೆ ಕಾಮಿಡಿನೂ ಚೆನ್ನಾಗಿ ಮಾಡ್ತಾರೆ ಅನಿಸುತ್ತೆ, ಕರಿಯ ಸಿನಿಮಾದಲ್ಲಿ ವಿಲನ್ ಪಾತ್ರನೂ ಮಾಡ್ತಾರೆ. ಇದೆಲ್ಲ ನೋಡಿ ಅವರ ಟ್ಯಾಲೆಂಟ್ ನಾನು ಇಷ್ಟಪಟ್ಟಿದ್ದೀನಿ' ಎಂದಿದ್ದಾರೆ.
'ಪರ್ಸನಲ್ ವಿಚಾರ ಬೇಡ'
'ನನ್ನಂತೆ ಅವರ ಪ್ರತಿಭೆ ನೋಡಿ ಇಷ್ಟಪಟ್ಟವರು ಸಾಕಷ್ಟು ಜನ ಇದ್ದಾರೆ. ಕಲಾವಿದರನ್ನ ಕಲಾವಿದರಾಗಿ ಮಾತ್ರವೇ ನೋಡಬೇಕು. ಅವರ ವೈಯಕ್ತಿಕ ವಿಚಾರಗಳು ನಮಗೆ ಬೇಡ. ನಾನು ಕೂಡ ಅವರ ಮನೆಗೆ ಹೋಗಿಲ್ಲ, ಅವರನ್ನ ನೇರವಾಗಿ ನೋಡಿಲ್ಲ, ಅವರ ಪರ್ಸನಲ್ ವಿಚಾರವೂ ಗೊತ್ತಿಲ್ಲ. ತೆರೆ ಮೇಲೆ ಹೇಗೆ ಕಾಣ್ತಾರೋ ಅದನ್ನಷ್ಟೇ ನೋಡಿ ನಂಬಿದ್ದೇನೆ' ಎಂದಿದ್ದಾರೆ.

'ಇನ್ನು ಕಾಮೆಂಟ್ ಮಾಡಿದವರು ನಿಜವಾಗಿಯೂ ಬಾಸ್ ಅಭಿಮಾನಿಗಳೋ, ಅಲ್ವೋ ಗೊತ್ತಿಲ್ಲ. ಆದರೆ ನಿಜವಾದ ಅಭಿಮಾನಿಗಳಿಗೆ ಹೇಳುವುದು ಇಷ್ಟೇ. ಯಾರಿಗಾದರೂ ಕಾಮೆಂಟ್ ಮಾಡುವ ಮುನ್ನ ಸಾವಿರ ಬಾರಿ ಯೋಚನೆ ಮಾಡಿ ಎಂದಿದ್ದಾರೆ. ಅಂತಹ ನಿಜವಾದ ಅಭಿಮಾನಿಗಳು ಆ ರೀತಿ ಕೆಟ್ಟ ಕಾಮೆಂಟ್ ಮಾಡೋದೆ ಇಲ್ಲ. ಬಾಸ್ ಹೆಸರು ಕಾಪಾಡೋದು ಅಭಿಮಾನಿಗಳ ಜವಾಬ್ದಾರಿ ಎಂದಿದ್ದಾರೆ' ಗಗನಾ.
'ಬಾಸ್ ತಂಗಿ ಪಾತ್ರ ಮಾಡಲ್ಲ'
'ದರ್ಶನ್ ಅವರೊಂದಿಗೆ ನಟನೆ ಮಾಡುವ ವಿಚಾರ ಕೇಳಿದ್ರೇನೆ ತಲೆ ಸುತ್ತಿದಂತಾಗುತ್ತೆ. ನಾವೆಲ್ಲ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವವರು. ಬಾಸ್‌ನ ನಾವು ಅಲ್ಲಿಟ್ಟಿದ್ದೀವಿ. ಅವರ ಜೊತೆ ಒಂದು ಸೆಲ್ಫಿ ಸಿಕ್ಕರೂ ಸಾಕು ನಂಗೆ, ಅಂತದ್ರಲ್ಲಿ ನಟಿಸುವ ಅವಕಾಶ ಅಂದ್ರೆ ಇನ್ನೂ ದೊಡ್ಡದು. ತಂಗಿ ಪಾತ್ರ ಬಿಟ್ಟು ಬೇರೆ ಇನ್ಯಾವುದೇ ಪಾತ್ರ ಕೊಟ್ಟರೂ ದರ್ಶನ್ ಬಾಸ್ ಜೊತೆ ನಟಿಸುತ್ತೀನಿ' ಎಂದು ಗಗನಾ ಆಸೆ ಬಿಚ್ಚಿಟ್ಟಿದ್ದಾರೆ.












Click it and Unblock the Notifications