'ಸಿಂಹಾದ್ರಿಯ ಸಿಂಹ' ನಟಿ ಭಾನುಪ್ರಿಯಾಗೆ ಭಯಾನಕ ಖಾಯಿಲೆ, ಕಾರಣ ಆ ಘಟನೆ
ನಟ ವಿಷ್ಣುವರ್ಧನ್ ಅವರ ಸಿಂಹಾದ್ರಿಯ ಸಿಂಹ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ. ಈ ಸಿನಿಮಾದ "ಮಲ್ನಾಡ್ ಅಡಿಕೆ, ಮೈಸೂರ್ ವೀಳ್ಯದೆಲೆ ಬೆರೆತರೆ ಕೆಂಪು" ಹಾಡು ಇಂದಿಗೂ ಎಂತವರನ್ನೂ ಹುಚ್ಚೆದ್ದು ಕುಣಿಸುತ್ತೆ. ಈ ಹಾಡಿನಲ್ಲಿ ಬಹುಭಾಷಾ ನಟಿ ಭಾನುಪ್ರಿಯಾ ಕೂಡ ಕನ್ನಡಿಗರಿಗೆ ಹೊಸಬರಲ್ಲ. ಹಲವು ಕನ್ನಡ ಸಿನಿಮಾಗಳಲ್ಲಿ ಅವರು ನಟಿಸುವ ಮೂಲಕ ಮನೆಮಾತಾಗಿರುವ ನಟಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳಿಂದ ದೂರ ಉಳಿದಿದ್ದರು. ಆದರೆ ಈ ನಟಿ ಭಯಾನಕ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.
ನಟಿ ಭಾನುಪ್ರಿಯಾ ಅವರು ದಶಕಗಳ ಕಾಲ ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಾಲಿವುಡ್ ಸೇರಿದಂತೆ ವಿವಿಧ ಭಾಷೆಗಳ ಸ್ಟಾರ್ ನಟರೊಂದಿಗೆ ನಟಿಸಿದ್ದರು. ನಟರಾದ ರಜಿನಿಕಾಂತ್, ಮೋಹನ್‌ಲಾಲ್, ವಿಷ್ಣುವರ್ಧನ್, ರವಿಚಂದ್ರನ್ ಅವರೊಂದಿಗೆ ಹಿಟ್ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು. ಬಳಿಕ ಪೋಷಕ ಪಾತ್ರಗಳಲ್ಲಿಯೂ ನಟಿಸಿದ್ದ ಅವರು ಟಾಲಿವುಡ್ ನಟ ಪ್ರಭಾಸ್ ನಟನೆಯ ಛತ್ರಪತಿ ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ಮತ್ತೆ ಹೈಪ್ ಸೃಷ್ಟಿಸಿದ್ದರು.

ಅದ್ಭುತ ಕೂಚಿಪುಡಿ ನೃತ್ಯಗಾರ್ತಿಯೂ ಆಗಿರುವ ಭಾನುಪ್ರಿಯಾ ಅವರು ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು. ಇವರ ನಟನೆಗೆ ಹಲವು ಪ್ರಶಸ್ತಿಗಳು ಕೂಡ ಮುಡಿಗೇರಿವೆ. ಆದರೆ ಅವರ ವೈಯಕ್ತಿಕ ಜೀವನ ನಿಜಕ್ಕೂ ದುರಂತವೇ ಸರಿ. ಸದ್ಯ ಅವರು ಭಯಾನಕ ಖಾಯಿಲೆಯಿಂದ ಬಳಲುತ್ತಿದ್ದಾರೆ.
1998ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಭಾನುಪ್ರಿಯಾ ಅವರು ಕೆಲಕಾಲ ವಿದೇಶದಲ್ಲಿದ್ದರು. ನಂತರ ಭಾರತಕ್ಕೆ ಮರಳಿದ್ದ ಅವರು ತಮ್ಮ ನಟನಾ ವೃತ್ತಿಜೀವನವನ್ನು ಪುನರಾರಂಭಿಸಿದ್ದರು. 2018ರಲ್ಲಿ ಪತಿ ಹೃದಯಾಘಾತದಿಂದ ನಿಧನರಾದ ಘಟನೆಯಿಂ ನಟಿ ತುಂಬಾ ನೊಂದಿದ್ದರು. ಸದ್ಯ ತಮ್ಮ ಮಗಳೊಂದಿಗೆ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ "ಮರೆವಿನ ಕಾಯಿಲೆ"ಯಿಂದಾಗಿ ಅವರ ಆರೋಗ್ಯ ಸ್ಥಿತಿ ಈಗ ಮೊದಲಿನಂತಿಲ್ಲ.

'ಡೈಲಾಗ್ ಮರೆಯುತ್ತಿದ್ದೆ'
ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದ ಅವರು 'ನನ್ನ ಪತಿಯ ನಿಧನದ ನಂತರ ನೆನಪಿನ ಶಕ್ತಿ ಕಳೆದುಕೊಂಡು ಈ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದರು. ನಾನು ಮಾಡಬೇಕಾದ ಕೆಲಸಗಳನ್ನುಸಹ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ, ಶೂಟಿಂಗ್ ವೇಳೆ ನನ್ನ ಡೈಲಾಗ್ ಮರೆಯುವುದು ಸಾಲುಗಳನ್ನು ಮರೆತಿದ್ದೇನೆ. ಇದು ಹಲವು ವರ್ಷಗಳಿಂದ ನಡೆಯುತ್ತಿದೆ' ಎಂದಿದ್ದರು.
'ಕೆಲ ವರ್ಷಗಳ ಹಿಂದೆ ನಾನು ವಿಷಯಗಳನ್ನು ಮರೆಯಲು ಪ್ರಾರಂಭಿಸಿದೆ. ಆಗ ನನ್ನ ಆರೋಗ್ಯ ಹದಗೆಡುತ್ತಿದೆ ಎಂದು ನನಗೆ ಅರಿವಾಯಿತು. ನನ್ನ ಸ್ವಂತ ನೃತ್ಯ ಸ್ಟುಡಿಯೋ ತೆರೆಯುವ ಕನಸು ಕಂಡಿದ್ದೆ. ಆದರೆ ಈಗ ಆ ಕನಸನ್ನು ಕೈಬಿಟ್ಟಿದ್ದೇನೆ. ನಾನು ಇನ್ನು ಮುಂದೆ ಮನೆಯಲ್ಲಿ ಯಾವುದೇ ಅಭ್ಯಾಸ ಮಾಡುವುದಿಲ್ಲ' ಎಂದಿದ್ದರು. ನಟಿಯ ಈ ಸ್ಥಿತಿ ಕಂಡು ಅವರ ಅಭಿಮಾನಿಗಳು ಕೂಡ ಆಘಾತಕ್ಕೆ ಒಳಗಾಗಿದ್ದಾರೆ.












Click it and Unblock the Notifications