ನಟಿ ಅನುಷ್ಕಾ ಶೆಟ್ಟಿಗೆ ಪೊಲೀಸರಿಂದ ಶಾಕ್, ಸಿನಿಮಾ ರಿಲೀಸ್ ವೇಳೆ ಎದುರಾಯ್ತು ವಿಘ್ನ
ಕರ್ನಾಟಕದ ಚೆಲುವೆ, ಬಾಹುಬಲಿ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ (Anushka Shetty) ಹಲವು ವರ್ಷಗಳ ಬಳಿಕ ಸಿನಿಮಾಗಳಿಗೆ ಕಂಬ್ಯಾಕ್ ಮಾಡಿದ್ದಾರೆ. ಅನುಷ್ಕಾ ನಟನೆಯ ಘಾಟಿ (Ghaati) ಸಿನಿಮಾ ರಿಲೀಸ್ ಆಗಿದ್ದು, ಈ ಹೊತ್ತಲ್ಲೇ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಘಾಟಿ ಸಿನಿಮಾ ವಿಚಾರವಾಗಿ ಪೊಲೀಸರು ಬಿಗ್ ಶಾಕ್ ನೀಡಿದ್ದು, ತೆಲಂಗಾಣ ಪೊಲೀಸ್‌ನ ಆಂಟಿ-ನಾರ್ಕೋಟಿಕ್ಸ್ ವಿಭಾಗದಿಂದ ಸಂಕಷ್ಟ ಎದುರಾಗಿದೆ. ಘಾಟಿ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಇದನ್ನು ಗಮನಿಸಿದ್ದ ಎಲೈಟ್ ಆಕ್ಷನ್ ಗ್ರೂಪ್ ಫಾರ್ ಡ್ರಗ್ ಲಾ ಎನ್‌ಫೋರ್ಸ್‌ಮೆಂಟ್ (ಈಗಲ್) ಟೀಂ ಅಧಿಕಾರಿಗಳು ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಿನಿಮಾದಲ್ಲಿ ಗಾಂಜಾ ಕೃಷಿ, ಸಾಗಣೆ ಮತ್ತು ಸೇವನೆ ಕುರಿತಾದ ದೃಶ್ಯಗಳಿದ್ದು, ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗಲಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಸಂಭಾವ್ಯ ಕಾನೂನು ಕ್ರಮಗಳ ಬಗ್ಗೆ ಸಿನಿಮಾ ನಿರ್ಮಾಪಕರಿಗೆ ಎಚ್ಚರಿಕೆ ನೀಡಿದೆ. ಕೃಷ್ ಜಾಗರ್ಲಮುಡಿ ನಿರ್ದೇಶನದ, ಅನುಷ್ಕಾ ಶೆಟ್ಟಿ ನಟಿಸಿರುವ ತೆಲುಗು ಸಿನಿಮಾ ಘಾಟಿಯ ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಮೇಲೆ ಪೊಲೀಸರು ಹದ್ದಿನಗಣ್ಣಿಟ್ಟಿದ್ದರು.

ಸಿನಿಮಾದಲ್ಲಿನ ಆ ದೃಶ್ಯಗಳಿಂದ ಸಂಕಷ್ಟ
ಫಸ್ಟ್ ಫ್ರೇಮ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ಮಿಸಲಾದ ಟ್ರೇಲರ್‌ನಲ್ಲಿ ಗಾಂಜಾ ಕೃಷಿ, ಸಾಗಣೆ ಮತ್ತು ಸೇವನೆಯ ಮೇಲೆ ಹೆಚ್ಚು ಗಮನಹರಿಸುವಂತೆ ಕಾಣುತ್ತಿದೆ ಎಂದು ಅಧಿಕಾರಿಗಳು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕೆಲವು ದೃಶ್ಯಗಳು ಮಾದಕ ದ್ರವ್ಯ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸುವಂತಿವೆ. ಈ ಟ್ರೇಲರ್ ಮಾದಕ ದ್ರವ್ಯ ದುರುಪಯೋಗದ ವಿರುದ್ಧ ಎಚ್ಚರಿಕೆ ನೀಡುವ ಕಾನೂನು ಎಚ್ಚರಿಕೆಗಳನ್ನು ಪ್ರದರ್ಶಿಸುವುದಿಲ್ಲ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಇದು ಮಾರಕ ಎಂದು ಆಕ್ಷೇಪ ವ್ಯಕ್ತಪಡಿಸಿದೆ. "ಭಾರತದಲ್ಲಿ ಗಾಂಜಾ ನಿಷೇಧಿಸಲಾಗಿದೆ ಮತ್ತು ಅದು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ" ಎಂಬಂತಹ ಸ್ಕ್ರೋಲಿಂಗ್ ಸಂದೇಶವನ್ನು ಚಿತ್ರದಲ್ಲಿ ಸೇರಿಸಬೇಕು ಎಂದು ಖಡಕ್ ಸೂಚನೆ ನೀಡಿದೆ.
1985ರ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಸ್) ಕಾಯ್ದೆಯು ಮಾದಕ ವಸ್ತುಗಳ ಕೃಷಿ, ಉತ್ಪಾದನೆ, ಸ್ವಾಧೀನ, ಮಾರಾಟ, ಖರೀದಿ, ಸಾಗಣೆ ಮತ್ತು ಸೇವನೆಯಂತಹ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಇದು ಶಿಕ್ಷಾರ್ಹ ಅಪರಾಧ ಎಂದು ಪೊಲೀಸರು ಹೇಳಿದ್ದಾರೆ. ಸಿನಿಮಾದಲ್ಲಿ ಮಾದಕ ದ್ರವ್ಯ ಸೇವನೆ ಅಥವಾ ವ್ಯಾಪಾರವನ್ನು ವೈಭವೀಕರಿಸುವುದನ್ನು ತಪ್ಪಿಸುವಂತೆ ನಿರ್ಮಾಪಕರಿಗೆ ಹೇಳಿದೆ.

ಸಾರ್ವಜನಿಕರ ಮೇಲೆ ಯಾವುದೇ ತಪ್ಪು ಕಲ್ಪನೆ ಅಥವಾ ಕಾನೂನುಬಾಹಿರ ಪ್ರಭಾವ ಬೀರುವುದನ್ನು ತಡೆಯಲು ಚಲನಚಿತ್ರ ನಿರ್ಮಾಪಕರು ಎನ್‌ಡಿಪಿಎಸ್ ಕಾಯ್ದೆಯ ನಿಯಮಗಳನ್ನು ಖಚಿತಪಡಿಸಿಕೊಳ್ಳಬೇಕು. ಕಾನೂನು ಪಾಲನೆ ಉಲ್ಲಂಘಿಸಿದರೆ NDPS ಕಾಯ್ದೆಯಡಿ ಕಾನೂನು ಕ್ರಮಕ್ಕೆ ಜರುಗಿಸುವ ಅವಕಾಶವೂ ಇದೆ ಎಂದು ಎಚ್ಚರಿಕೆ ನೀಡಿದೆ. ಇದರ ನಡುವೆಯೂ ಸಿನಿಮಾ ರಿಲೀಸ್ ಆಗಿದ್ದು, ಪ್ರೇಕ್ಷಕರು ಅನುಷ್ಕಾ ಶೆಟ್ಟಿ ಅಭಿನಯವನ್ನು ಮೆಚ್ಚಿದ್ದಾರೆ. ಅನುಷ್ಕಾ ನಟನೆಯ ಈ ಘಾಟಿ ಸಿನಿಮಾವನ್ನು ಕರ್ನಾಟಕದಲ್ಲಿ ಯಶ್ ತಾಯಿ ಪುಷ್ಪಾ ಅವರು ವಿತರಿಸಿದ್ದಾರೆ.
-
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications