ಸೂರ್ಯನಂತೆ ಬೆಳಗುವುದು ಈ ರಾಶಿಯವರ ಅದೃಷ್ಟ : ನನಸಾಗುವುದು ಸ್ವಂತ ಮನೆ ಕನಸು, ಕಾರು ಖರೀದಿ ಯೋಗ

ಜೂನ್ ತಿಂಗಳಲ್ಲಿ, ಸೂರ್ಯ ಮತ್ತೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸಲಿದ್ದಾನೆ. ಇದೀಗ ಸೂರ್ಯನು ಕೇತುವಿನ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಇದು ಕೆಲವು ರಾಶಿಯವರ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ನಾಲ್ಕು ರಾಶಿಯವರ ಜೀವನದಲ್ಲಿ ಶುಭ ಸಮಯ ಆರಂಭವಾಗಲಿದೆ.ಜೂನ್ 22, 2026 ರಂದು ಮಧ್ಯಾಹ್ನ 12.31 ಕ್ಕೆ, ರಾಹು ಶತಭಿಶ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ನಂತರ ಜುಲೈ 6 ರವರೆಗೆ ಈ ನಕ್ಷತ್ರದಲ್ಲಿಯೇ ಇರುತ್ತಾರೆ. ಈ ಸಮಯದಲ್ಲಿ, ಕೆಲವು ರಾಶಿಯವರ ಜೀವನದಲ್ಲಿ ಮಹತ್ತರ ಬದಲಾವಣೆಗಳು ಆಗುವುದು.

ಸೂರ್ಯ ಸಂಕ್ರಮಣದಿಂದ ಒಳ್ಳೆಯ ದಿನಗಳು ಬರಲಿವೆ. ಜೀವನದಲ್ಲಿನ ವಿವಿಧ ಸಮಸ್ಯೆಗಳಿಂದ ಮುಕ್ತಿ ಪಡೆಯುವ ದಿನ ಸಮೀಪಿಸಲಿದೆ. ಸೂರ್ಯನಿ ರಾಹುವಿನ ನಕ್ಷತ್ರಕ್ಕೆ ಕಾಲಿಡುತ್ತಿದ್ದಾನೆ ಹಾಗಾಗಿ ಕೆಲವು ರಾಶಿಯವರು ನಿರೀಕ್ಷಿಸಿರದ ಮಟ್ಟದಲ್ಲಿ ಶುಭ ಫಲ ಪಡೆಯಲಿದ್ದಾರೆ.

Sun Transit 2026

ಸೂರ್ಯ ಸಂಕ್ರಮಣದಿಂದ ಯಾವ ರಾಶಿಯವರು ಉತ್ತಮ ಫಲ ಪಡೆಯುತ್ತಾರೆ ಎನ್ನುವುದನ್ನು ನೋಡೋಣ.

ಸೂರ್ಯಸಂಕ್ರಮಣದಿಂದ ಈ ರಾಶಿಯವರಿಗೆ ಅದೃಷ್ಟ:

ಸಿಂಹ ರಾಶಿ (Leo): ಈ ರಾಶಿಯಲ್ಲಿ ಜನಿಸಿದವರ ಜೀವನದ ದಿಕ್ಕು ಒಂದೇ ಸಮನೆ ಬದಲಾಗುತ್ತದೆ. ಸೂರ್ಯನು ಕೇತುವಿನ ನಕ್ಷತ್ರಕ್ಕೆ ಪ್ರವೇಶಿಸುವುದರಿಂದ, ಮಾಡುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲವೇ ಸಿಗುವುದು. ಅದೃಷ್ಟ ನಿಮ್ಮ ಬೆನ್ನ ಹಿಂದೆಯೇ ಇರುವುದು. ನಿಮ್ಮ ಮನಸ್ಸು ಧರ್ಮ ಮತ್ತು ಕೆಲಸದ ಮೇಲೆ ಕೇಂದ್ರೀಕೃತವಾಗಿರುತ್ತದೆ.ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ. ನಿಮ್ಮ ಜಾತಕ ಫಲದಿಂದ ಮಕ್ಕಳಿಗೂ ಒಳ್ಳೆಯದಾಗುವುದು. ಕಷ್ಟಪಟ್ಟು ಕೆಲಸ ಮಾಡಿದರೆ, ನಿಮಗೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಸಮಾಜದಲ್ಲಿ ಗೌರವ ಮತ್ತು ಘನತೆ ಹೆಚ್ಚಾಗುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವುದು.

ಸೂರ್ಯ-ಬುಧ-ಶುಕ್ರರ ತ್ರಿಗ್ರಹ ಯೋಗ: ಈ ರಾಶಿಗಳಿಗೆ ಹಣದ ಹೊಳೆ
ಸೂರ್ಯ-ಬುಧ-ಶುಕ್ರರ ತ್ರಿಗ್ರಹ ಯೋಗ: ಈ ರಾಶಿಗಳಿಗೆ ಹಣದ ಹೊಳೆ

ತುಲಾ ರಾಶಿ (Libra): ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮ ಮತ್ತು ಹೆಚ್ಚು ಸುರಕ್ಷಿತವಾಗಿರುತ್ತದೆ. ಹೊಸ ಜೀವನವನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ಮೊದಲಿಗಿಂತ ಹೆಚ್ಚು ಹಣ ಮತ್ತು ಸಂಪತ್ತು ಬರುತ್ತದೆ. ಸೂರ್ಯನು ನಾಯಕತ್ವವನ್ನು ಪ್ರತಿನಿಧಿಸುತ್ತಾನೆ, ಪಿತೃ ಅಂಶ. ಹಾಗಾಗಿ ನಿಮ್ಮ ಪ್ರತಿಯೊಂದು ಕಾರ್ಯಕ್ಕೂ ವಿಶೇಷ ಶಕ್ತಿ ಸಿಗುವುದು. ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವಿರಿ. ಧೈರ್ಯ ಹೆಚ್ಚಾಗುವುದು. ಜೀವನವನ್ನು ಉತ್ತಮವಾಗಿ ನಿಭಾಯಿಸುವಿರಿ.ನೀವು ಮಾಡಲು ಬಯಸುವ ಕೆಲಸ ಕಾರ್ಯಗಳನ್ನು ಸುಗಮವಾಗಿ ಮಾಡಿ ಮುಗಿಸುವಿರಿ. ಒಳ್ಳೆಯ ದಿನಗಳು ನಿಮ್ಮ ಮುಂದಿವೆ. ಧೈರ್ಯ ಮತ್ತು ಶಕ್ತಿಯ ಜೊತೆಗೆ ನಿಮಗೆ ಹೆಚ್ಚಿನ ಪ್ರತಿಫಲಗಳು ಸಿಗುತ್ತವೆ.

ಕನ್ಯಾ ರಾಶಿ (Virgo): ಈ ರಾಶಿಯಲ್ಲಿ ಜನಿಸಿದವರಿಗೆ ತುಂಬಾ ಒಳ್ಳೆಯ ಸಮಯ ಇದಾಗಿರುತ್ತದೆ. ಸೂರ್ಯನ ನಕ್ಷತ್ರ ಬದಲಾವಣೆಯಿಂದ ಪರಿಸ್ಥಿತಿ ಸುಧಾರಿಸುತ್ತದೆ. ವ್ಯವಹಾರದಲ್ಲಿ ಲಾಭ ಕಾಣುವಿರಿ. ಸೂರ್ಯನ ನಕ್ಷತ್ರ ಬದಲಾವಣೆಯಿಂದ ನಿಮ್ಮ ವೃತ್ತಿಜೀವನದಲ್ಲಿ ಬದಲಾವಣೆಯಾಗಲಿದೆ. ಉತ್ತಮ ಪ್ರಗತಿ ಕಂಡು ಬರಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ನಿಮ್ಮ ಇಚ್ಛೆಯಂತೆ ಉದ್ಯೋಗ ಪ್ರಾಪ್ತಿಯಾಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಂಗಾತಿಯೊಂದಿಗಿನ ಸಂಬಂಧ ಸುಧಾರಿಸುತ್ತದೆ.

ಚಂದ್ರ ಗೋಚರದಿಂದ ನಾಲ್ಕು ರಾಶಿಯವರ ಕೈ ಹಿಡಿಯುವುದು ಅದೃಷ್ಟ :ಸಾಲದಿಂದ ಸಿಗುವುದು ಮುಕ್ತಿ, ಮನೆ ಖರೀದಿ ಯೋಗ
ಚಂದ್ರ ಗೋಚರದಿಂದ ನಾಲ್ಕು ರಾಶಿಯವರ ಕೈ ಹಿಡಿಯುವುದು ಅದೃಷ್ಟ :ಸಾಲದಿಂದ ಸಿಗುವುದು ಮುಕ್ತಿ, ಮನೆ ಖರೀದಿ ಯೋಗ

ವೃಶ್ಚಿಕ ರಾಶಿ (Scorpio): ಸೂರ್ಯನ ನಕ್ಷತ್ರ ಬದಲಾವಣೆಯಿಂದಾಗಿ ನಿಮ್ಮ ಜೀವನದಲ್ಲಿ ಗಮನಾರ್ಹ ಯಶಸ್ಸನ್ನು ಕಾಣುವಿರಿ. ಜೀವನದಲ್ಲಿನ ವಿವಿಧ ಕನಸುಗಳು ಈಡೇರುತ್ತವೆ. ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಇನ್ನಷ್ಟು ಒಳ್ಳೆಯ ಸುದ್ದಿಗಳು ಬರಲಿವೆ. ಸೂರ್ಯನ ನಕ್ಷತ್ರ ಬದಲಾವಣೆಯು ಉತ್ತಮ ಪರಿಣಾಮ ಬೀರಲಿದೆ. ಜೀವನದಲ್ಲಿನ ವಿವಿಧ ಸಮಸ್ಯೆಗಳು ಪರಿಹಾರವಾಗುತ್ತವೆ. ಈಗ ಜಗತ್ತು ನಿಮ್ಮ ಕೈಯಲ್ಲಿದೆ. ಆದರೂ ನೀವಂದುಕೊಂಡ ಅನೇಕ ಕಾರ್ಯಗಳು ಇನ್ನೂ ಪೂರ್ಣಗೊಂಡಿಲ್ಲ. ಅದನ್ನು ಸಾಧಿಸಲು ಪ್ರಯತ್ನಪಟ್ಟರೆ ಜಯ ಗಳಿಸುವಿರಿ. ವಿವಿಧ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಲು ಹೆಚ್ಚಿನ ಅವಕಾಶಗಳು ಇರಬಹುದು.

ಕುಂಭ ರಾಶಿ (aquarius): ಸೂರ್ಯ ನಕ್ಷತ್ರ ಬದಲಾವಣೆ ನಿಮ್ಮ ಮೇಲೆ ಬಹಳ ದೊಡ್ಡ ಪರಿಣಾಮ ಬೀರಲಿದೆ. ಜಾತಕವು ಉತ್ತಮ ಅವಧಿಯನ್ನು ನೋಡಲಿದೆ. ಸಂಪತ್ತು ಹೆಚ್ಚಾಗಲಿದೆ. ವೃತ್ತಿಜೀವನಕ್ಕೆ ಬಹಳ ಒಳ್ಳೆಯ ಸಮಯ ಬರಲಿದೆ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭವಾಗುವುದು. ಹಳೆಯ ಸಮಸ್ಯೆಗಳು ಕೂಡಾ ಈ ಸಮಯದಲ್ಲಿ ಪರಿಹಾರ ಕಾಣುವುದು. ನಿಮ್ಮ ಜಾತಕದಲ್ಲಿ ಶನಿ ಸಾಡೇ ಸಾತಿಯ ಕೊನೆಯ ಹಂತ ನಡೆಯುತ್ತಿದೆ. ಆದ್ದರಿಂದ ಸ್ವಲ್ಪ ಒತ್ತಡವಿರುತ್ತದೆ. ಆದರೆ ಒಟ್ಟಾರೆಯಾಗಿ, ಸೂರ್ಯನು ಶತಭಿಷ ನಕ್ಷತ್ರವನ್ನು ಪ್ರವೇಶಿಸುವುದರಿಂದ ನಿಮ್ಮ ಜೀವನದಲ್ಲಿ ಒಳ್ಳೆಯದೇ ಆಗಲಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+