Amrutha Ramamoorthy: ಜನಪ್ರಿಯ ಧಾರಾವಾಹಿಯಿಂದ ದಿಢೀರ್ ಹೊರಬಂದ ನಟಿ ಅಮೃತಾ
ಕುಲವಧು, ಕಸ್ತೂರಿ ನಿವಾಸ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದಾರೆ ನಟಿ ಅಮೃತಾ ರಾಮಮೂರ್ತಿ. ಸದ್ಯ ಅವರು ಅಭಿನಯಿಸುತ್ತಿದ್ದ ಜನಪ್ರಿಯ ಧಾರಾವಾಹಿಯಿಂದ ಅಮೃತಾ ದಿಢೀರ್ ಹೊರಬಂದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಮೊದಲಿಗೆ ಇದನ್ನು ಊಹಾಪೋಹ ಎಂದೇ ಹೇಳಲಾಗಿತ್ತು. ಆದರೆ ಖುದ್ದು ಅಮೃತಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಜನಪ್ರಿಯ ಧಾರಾವಾಹಿಯಿಂದ ಹೊರನಡೆದಿರುವುದನ್ನು ಖಚಿತಪಡಿಸಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಆಸೆ" ಧಾರಾವಾಹಿಯಲ್ಲಿ ನಟಿ ಅಮೃತಾ ರಾಮಮೂರ್ತಿ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಹೀಗಾಗಿ ಅಮೃತಾ ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳೂ ಇದ್ದಾರೆ. ಹೀಗಿರುವಾಗ ಅಮೃತಾ ದಿಢೀರ್ ಸೀರಿಯಲ್‌ನಿಂದ ಹೊರಬಂದಿರುವುದು ವೀಕ್ಷಕರಿಗೆ ಶಾಕ್ ನೀಡಿದಂತಾಗಿದೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ನಟಿ, ತಮ್ಮ ನಿರ್ಧಾರಕ್ಕೆ ಅಸಲಿ ಕಾರಣವೇನು ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

ಆಸೆ ಧಾರಾವಾಹಿಯಲ್ಲಿ ಜನಪ್ರಿಯ ರೋಹಿಣಿ ಪಾತ್ರವನ್ನು ಅಮೃತಾ ನಿರ್ವಹಿಸಿದ್ದರು. ಇತ್ತೀಚೆಗೆ ವೈಯಕ್ತಿಕ ಕಾರಣಗಳಿಂದಾಗಿ ನಟನೆಯಿಂದ ತಾತ್ಕಾಲಿಕ ವಿರಾಮ ತೆಗೆದುಕೊಂಡು ಕಾರ್ಯಕ್ರಮದಿಂದ ನಿರ್ಗಮಿಸಿದ್ದಾರೆ. "ನಿಮ್ಮ ಪ್ರೀತಿಗೆ ಸದಾ ಚಿರಋಣಿ" ಎಂದು ಅಮೃತಾ ವಿಡಿಯೋದಲ್ಲಿ ತಿಳಿಸಿದ್ದಾರೆ.
'ನಮಸ್ಕಾರ ಎಲ್ಲರಿಗೂ, ನಿಮಗೆಲ್ಲ ಒಂದು ವಿಷಯ ತಿಳಿಸೋಣ ಅಂತ ಈ ವಿಡಿಯೋ ಮಾಡುತ್ತಿದ್ದೇನೆ. ನಾನು ಆಸೆ ಸೀರಿಯಲ್‌ನಲ್ಲಿ ನಟಿಸುತ್ತಿರುವುದು ನಿಮಗೆಲ್ಲ ಗೊತ್ತಿದೆ. ಸಾಕಷ್ಟು ಕಾರಣಗಳಿಂದ ನಾನು ಈ ಧಾರಾವಾಹಿಯಿಂದ ಹೊರನಡೆಯುತ್ತಿದ್ದೇನೆ. ನೀವೆಲ್ಲರೂ ಆಸೆ ಸೀರಿಯಲ್ ಮೇಲೆ ತುಂಬಾ ಪ್ರೀತಿ ತೋರಿಸಿದ್ದೀರಿ. ಹಾಗೇ ನನ್ನ ಮೇಲೂ ತುಂಬಾ ಪ್ರೀತಿ ತೋರಿಸಿದ್ದೀರ, ಈ ಪ್ರೀತಿ ಸದಾ ಹೀಗೇ ಇರಲಿ. ನಾನು ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತೀನಿ. ಒಂದು ಚಿಕ್ಕ ಬ್ರೇಕ್ ಪಡೆದು ಮತ್ತೆ ತೆರೆ ಮೇಲೆ ಬರ್ತೀನಿ. ಅಲ್ಲಿವರೆಗೂ ನನಗೆ ಇಷ್ಟೆಲ್ಲ ಸಪೋರ್ಟ್ ಮಾಡಿದ ನಿಮಗೆಲ್ಲ ತುಂಬು ಹೃದಯದ ಧನ್ಯವಾದಗಳು' ಎಂದು ಅಮೃತಾ ವಿಡಿಯೋದಲ್ಲಿ ತಿಳಿಸಿದ್ದಾರೆ.
ಅಭಿಮಾನಿಗಳ ಬೇಸರ
ಅಮೃತಾ ಅವರ ಈ ವಿಡಿಯೋಗೆ ವೀಕ್ಷಕರು ಬೇಸರ ಹಂಚಿಕೊಂಡಿದ್ದಾರೆ. 'ಈ ವಿಷಯ ಕೇಳಿ ನಿಜಕ್ಕೂ ಶಾಕ್ ಆಗಿದೆ. ಎಷ್ಟು ಅಚ್ಚುಕಟ್ಟಾಗಿ ಪಾತ್ರದಲ್ಲಿ ನಟಿಸುತ್ತಿದ್ರಿ, ನಿಜಕ್ಕೂ ಆಸೆ ಧಾರಾವಾಹಿ ವೀಕ್ಷಕರಿಗೆ ಇದು ನಿರಾಸೆಯ ವಿಚಾರ' ಎಂದು ಕಾಮೆಂಟ್ ಮಾಡಿದ್ದಾರೆ. 'ನೀವು ಇರಬೇಕಾಗಿತ್ತು, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ತೀವಿ, ನಿಮ್ ಪಾತ್ರಕ್ಕೆ ಯಾರೂ ಸರಿಸಾಟಿ ಇಲ್ಲ, ಮಿಸ್ ಯೂ.. ಬೇಗ ಬನ್ನಿ' ಎಂದು ಬೇಡಿಕೆ ಇಟ್ಟಿದ್ದಾರೆ.
'ಮೇಡಂ ತುಂಬಾ ಬೇಜಾರ್ ಆಗ್ತಿದೆ, ನೀವು ರೋಹಿಣಿ ಪಾತ್ರಕ್ಕೆ ಜೀವ ತುಂಬಿದ್ರಿ. ನಾನು ಪ್ರತಿದಿನ ತಪ್ಪದೇ ಧಾರಾವಾಹಿ ನೋಡ್ತಿದ್ದೆ. ಇವಾಗ ತುಂಬಾ ಬೇಜಾರಾಗ್ತಿದೆ. ನೆಗೆಟಿವ್ ಪಾತ್ರ ಆದರೂ ತುಂಬಾ ಚನ್ನಾಗಿ ಮಾಡ್ತಿದ್ರಿ ಎಂದು ನೆನೆದಿದ್ದಾರೆ. ಶಾಂತಿ ಕಾಟ ತಡಕೊಳ್ಳೋಕೆ ಆಗದೆ ರೋಹಿಣಿ ಮನೆ ಬಿಟ್ಟು ಪರಾರಿ ಎಂದು ಕೆಲವರು ಹಾಸ್ಯ ಮಾಡಿದ್ದಾರೆ. ನೀವು ಬಂದಮೇಲೆ ಆ ಧಾರಾವಾಹಿಗೆ ಒಂದು ಗತ್ತು ಬಂದಿತ್ತು. ಇನ್ನು ಎಷ್ಟು ವರ್ಷ ಬೇಕು ಮತ್ತೆ ಕಿರುತೆರೆಗೆ ಬರೋಕೆ?' ಎಂದು ಕೇಳಿದ್ದಾರೆ.












Click it and Unblock the Notifications