ಪ್ರೇಮಿ ಕೊಟ್ಟ ಮೊದಲ ಗುಲಾಬಿ ಹೂವು ಕಾಪಾಡಿಕೊಳ್ಳುವುದು ಹೇಗೆ? ಅದಿತಿ ಪ್ರಭುದೇವ ಟಿಪ್ಸ್
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಪ್ರೇಮಿಗಳಿಗೆ ಒಂದು ಸಿಂಪಲ್ ಟಿಪ್ಸ್ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಪ್ರೇಮಿಗಳು ತಮ್ಮ ಪ್ರೇಮಿ ಕೊಟ್ಟ ಮೊದಲ ಗಿಫ್ಟ್ ಅನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದಕ್ಕೆ ಏನಾದರು ಆದರೆ ತುಂಬಾ ಬೇಸರ ಪಡುತ್ತಾರೆ. ಅದಕ್ಕಾಗಿ ಅದಿತಿ ಒಂದು ಸರಳ ಸಲಹೆಯನ್ನು ನೀಡಿದ್ದಾರೆ. ಪ್ರೇಮಿ ಕೊಟ್ಟ ಮೊದಲ ಗಿಫ್ಟ್ ಕಾಪಾಡಿಕೊಳ್ಳುವುದು ಹೇಗೆ ಅನ್ನೋದನ್ನು ವಿವರಿಸಿದ್ದಾರೆ.
ಕನ್ನಡದ ಖ್ಯಾತ ನಟಿ ಅದಿತಿ ಪ್ರಭುದೇವ ಸದ್ಯ ಸಿನಿಮಾಗಳಿಗೆ ಬ್ರೇಕ್ ಹಾಕಿದ್ದಾರೆ. ಮಗಳು ನೇಸರ ಇನ್ನೂ ಚಿಕ್ಕವಳಾಗಿರುವುದರಿಂದ ಮನೆಯಲ್ಲಿ ಮಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ಅದಿತಿ, ಮಗಳೊಂದಿಗೆ ಪ್ರವಾಸ, ಅಡುಗೆ ತಯಾರಿಸುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಅದಿತಿ ಅವರು ತಮ್ಮ ಸ್ವಂತ ಯೂಟ್ಯೂಬ್ ಚಾನಲ್ ಅನ್ನು ಹೊಂದಿದ್ದು ಅದರಲ್ಲಿ ಕೆಲ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಕಳೆದ ವಾರವಷ್ಟೇ ಮಗಳು ನೇಸರ ಹಾಗೂ ಪತಿ ಯಶಸ್ ಜೊತೆಗೆ ಮೈಸೂರು ಪ್ರವಾಸಕ್ಕೆ ಹೋಗಿ ಬಂದಿದ್ದ ಅದಿತಿ ಬಳಿಕ ಮನೆಯಲ್ಲಿ ವಿಭಿನ್ನ ಅಡುಗೆ ಮಾಡುವುದನ್ನು ತೋರಿಸಿ ಕೊಟ್ಟಿದ್ದರು. ಇದೀಗ ಪ್ರೇಮಿಗಳಿಗೆ ಒಂದು ಟಿಪ್ಸ್ ಅನ್ನು ಕೊಟ್ಟಿದ್ದಾರೆ.
ಹೌದು ಅದಿತಿ ಅವರದ್ದು ಅರೆಂಜ್ ಕಮ್ ಲವ್ ಮ್ಯಾರೇಜ್. ಈವರೆಗೆ ಪತಿ ಯಶಸ್ ಸಾಕಷ್ಟು ಉಡುಗೊರೆಗಳನ್ನು ಅದಿತಿ ಅವರಿಗೆ ನೀಡಿದ್ದಾರೆ. ಆದರೆ ಮೊದಲ ಬಾರಿಗೆ ಅದಿತಿಗೆ ಯಶಸ್ ಹಾರ್ಟ್ ಶೇಪ್ ಇರುವ ರೆಡ್ ರೋಸ್ ಬೊಕ್ಕೆ ನೀಡಿದ್ದರು. ಇದು ಅದಿತಿ ಅವರಿಗೆ ಯಶಸ್ ನೀಡಿದ ಮೊದಲ ಗಿಫ್ಟ್. ಹೀಗಾಗಿ ಅದಿತಿ ಇದನ್ನು ತುಂಬಾ ಜೋಪಾನವಾಗಿ ಕಾಪಾಡಿಕೊಂಡಿದ್ದಾರೆ.
ಬೊಕ್ಕೆಯಲ್ಲಿ ಇದ್ದ ಕೆಂಪು ಗುಲಾಬಿ ಹೂವುಗಳು ಒಣಗಿದ ಮೇಲೂ ಅದರ ಎಲೆಗಳನ್ನು ಬಿಡಿಸಿ ಜೋಪಾನವಾಗಿ ಇಟ್ಟಿದ್ದಾರೆ. ಆದರೆ ಅದನ್ನು ಕೊನೆಯವರೆಗೂ ಕಾಪಾಡಿಕೊಂಡು ಇಡುವುದು ಅದಿತಿ ಆಸೆ. ಹೀಗಾಗಿ ಅವರು ಒಣಗಿದ ಗುಲಾಬಿ ಹೂವುಗಳಿಂದ ಕ್ರಾಫ್ಟ್ ಮಾಡಿದ್ದಾರೆ.

ಹೌದು ಒಂದು ಬೋರ್ಡ್‌ಗೆ ಒಣಗಿದ ರೆಡ್ ರೋಸ್ ಪೆಟಲ್ಸ್ ಅಂಟಿಸಿ, ಹೂವಿನ ಆಕಾರ ಮಾಡಿ ಚಂದದ ಶೋ ಪೀಸ್ ತಯಾರಿಸಿದ್ದಾರೆ ಅದಿತಿ. ಇದನ್ನು ವಾಲ್‌ಗೆ ಹಾಕುವ ಜೊತೆಗೆ ತುಂಬಾ ವರ್ಷಗಳವರೆಗೂ ಕಾಪಾಡಬಹುದು. ಹೂವು ಮಾತ್ರವಲ್ಲ ಚಾಕಲೇಟ್ ಕವರ್ ಇದ್ದರೂ ಕೂಡ ಇದೇ ರೀತಿ ಕ್ರಾಫ್ಟ್ ತಯಾರಿಸಿ ಇಟ್ಟಿದ್ದಾರೆ ಅದಿತಿ.
ಹೀಗೆ ಪ್ರೇಮಿಗಳು ಕೂಡ ತಮ್ಮ ಪ್ರೇಮಿ ಕೊಟ್ಟ ಮೊದಲ ಗಿಫ್ಟ್ ಅನ್ನು ಕಾಪಾಡಿಕೊಳ್ಳಬಹುದು. ನಾನೂ ಕೂಡ ಯಶ್ ಕೊಟ್ಟ ಮೊದಲ ಗಿಫ್ಟ್ ಅನ್ನು ಕ್ರಾಫ್ಟ್ ತಯಾರಿಸಿ ಇಟ್ಟಿದ್ದೇನೆ ಎಂದು ಅದಿತಿ ತಾವು ತಯಾರಿಸಿದ ಕ್ರಾಫ್ಟ್ ಅನ್ನು ತೋರಿಸಿಕೊಟ್ಟಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದಿತಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಮಗಳೊಂದಿಗೆ ತಯಾರಿಸಿದ ಮೊದಲ ಕ್ರಾಫ್ಟ್ ಎಂದು ಬರೆದುಕೊಂಡು ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋಕ್ಕೆ ಸಾಕಷ್ಟು ಲೈಕ್ಸ್ ಕೂಡ ಬಂದಿವೆ. ಇದೇ ರೀತಿ ವಿಡಿಯೋ ಮಾಡಿ ಹಂಚಿಕೊಳ್ಳಿ ಎಂದು ಅದಿತಿ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications