Shiva Rajkumar: ನಿಮ್ಮ ಮನೆ ಒಲೆ ಉರಿಸೋಕೆ ಇನ್ನೊಬ್ಬರ ಮನೆ ಒಲೆ ಆರಿಸಬೇಡಿ: ಶಿವಣ್ಣ ವಾರ್ನಿಂಗ್‌ ಕೊಟ್ಟಿದ್ದು ಯಾರಿಗೆ?

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​, ರುಕ್ಮಿಣಿ ವಸಂತ್, ಛಾಯಾ ಸಿಂಗ್ ಮುಂತಾದವರು ನಟಿಸಿರುವ 'ಭೈರತಿ ರಣಗಲ್' ಸಿನಿಮಾ ಇಂದು (ನವೆಂಬರ್‌ 15) ಅದ್ದೂರಿಯಾಗಿ ಬಿಡುಗಡೆ ಆಗಿದೆ. ಇತ್ತ ಶಿವರಾಜ್‌ ಕುಮಾರ್‌ ಅವರಿಗೆ ಸಣ್ಣ ಆರೋಗ್ಯ ಸಮಸ್ಯೆಯೂ ಅಭಿಮಾನಿಗಳು ಆತಂಕಕ್ಕೆ ಕಾರಣವಾಗಿದ್ದು, ಆರೋಗ್ಯ ಸಮಸ್ಯೆ ಇರುವ ಕಾರಣ ಚಿಕಿತ್ಸೆಗೆಂದು ಶಿವಣ್ಣ ವಿದೇಶ ಪ್ರಯಾಣ ಮಾಡುವ ಸಾಧ್ಯತೆಗಳಿದೆ.

ಈ ಎಲ್ಲಾ ಬೆಳವಣೆಗೆಗಳ ನಡುವೆ ಮೊದಲ ಸಲ ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ಶಕ್ತಿಧಾಮದ ಮಕ್ಕಳ ಜೊತೆ ಕಾಣಿಸಿಕೊಂಡಿದ್ದಾರೆ. ಶಕ್ತಿಧಾಮ, ಸಿನಿಮಾ ಮತ್ತು ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಚರ್ಚೆ ಮಾಡಿಕೊಂಡ ಸಮಯ ಕಳೆದಿದ್ದಾರೆ. ಈ ವೇಳೆ ಶಿವರಾಜ್‌ ಕುಮಾರ್‌ ಅವರು ನಿಮ್ಮ ಮನೆ ಒಲೆ ಉರಿಸೋಕೆ ಇನ್ನೊಬ್ಬರ ಮನೆ ಒಲೆ ಆರಿಸಬೇಡಿ ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ.

Actor shivarajkumar talks about controversy negative comments in interview

ನಿಮ್ಮ ಮನೆ ಒಲೆ ಉರಿಯುತ್ತದೆ, ನಿಮ್ಮ ಮನೆ ಒಲೆ ಉರಿಯುವುದಕ್ಕೆ ಮತ್ತೊಬ್ಬರ ಮನೆ ಒಲೆ ಆರಿಸುವುದಾ? ಅದು ಎಷ್ಟು ಸಲ ಮಾಡುತ್ತಾರೆ. ಇದೊಂದು ಅರ್ಥ ಮಾಡಿಕೊಂಡು ಬಿಟ್ಟರೆ ಪ್ರತಿಯೊಬ್ಬರು ಜೀವನದಲ್ಲಿ ಖುಷಿಯಾಗಿ ಇರುತ್ತಾರೆ. ಜಗತ್ತಿನಲ್ಲಿ ಕಾಂಟ್ರವರ್ಸಿಗಳು ಇರುತ್ತೆ ಮಾಡಿ ಆದರೆ ಎಷ್ಟು ಮಾಡಬೇಕು ಅಷ್ಟೇ ಮಾಡಿ ಎಂದು ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ.

ಇನ್ನೂ ಮಾತು ಮುಂದುವರೆಸಿದ ನಟ ಶಿವರಾಜ್‌ ಕುಮಾರ್‌ ಅವರು, ಕೆಲವೊಂದು ಪ್ರಶ್ನೆಗಳಿಗೆ ಟ್ರಿಗರ್ ಆಗುತ್ತದೆ. ನೆಗೆಟಿವ್ ಮಾಡಿದ ತಕ್ಷಣ ನೀವು ಏನು ಸ್ಪೆಷಲ್ ಆಗಿ ಗಳಿಸುತ್ತೀರಾ ಹೇಳಿ? ಸಂಪಾದನೆ ಮಾಡುವುದಕ್ಕೂ ಬೆಲೆ ಬೇಕು. ನಾನು ಕಷ್ಟ ಪಟ್ಟು ಯಾಕೆ ಸಂಪಾದನೆ ಮಾಡುತ್ತೀನಿ ಯಾಕೆ ನಿಯತ್ತಿನಿಂದ ಊಟ ಮಾಡುತ್ತೀನಿ ಅನ್ನೋ ಮಹತ್ವ ತಿಳಿದುಕೊಂಡಿರಬೇಕು. ನಾವಾಗಲಿ ನೀವು ಆಗಲಿ ಎಷ್ಟು ವರ್ಷ ಇರುತ್ತೀವಿ? ಇರೋಷ್ಟು ವರ್ಷಗಳು ಚೆನ್ನಾಗಿ ಇರಬೇಕು ಅಲ್ವಾ..ನಾಳೆ ದಿನ ಹೋದ ಮೇಲೆ ಅಯ್ಯೋ ಹೀಗಿದ್ರು ಹಾಗಿದ್ರು ಯಾಕೆ ಅಂತ ಹೇಳುವ ಬದಲು ಇರುವಾಗ ಆ ಪ್ರೀತಿ ತೋರಿಸಿ ಎಂದು ನಟ ಶಿವರಾಜ್‌ಕುಮಾರ್ ಅವರು ಕಿವಿ ಮಾತು ಹೇಳಿದ್ದಾರೆ.

ನಾನು ಮನಸ್ಸಾರೆ ಸಾಮಾನ್ಯ ಮನುಷ್ಯನಾಗಿ ಮಾತನಾಡುತ್ತಿರುವುದು..ಎಲ್ಲೂ ಸೂಪರ್ ಸ್ಟಾರ್ ಆಗಿ ಡಾ. ರಾಜ್‌ಕುಮಾರ್ ಮಗನಾಗಿ ಮಾತನಾಡುತ್ತಿಲ್ಲ ಶಿವಣ್ಣನಾಗಿ ಹೇಳುತ್ತಿರುವುದು.....ನನ್ನ ಭಾವನೆಗಳು ತಪ್ಪಿದ್ದರೆ ತಿದ್ದಿ. ಅನಗತ್ಯವಾಗಿ ಏನೋ ಆಗಿರುತ್ತದೆ ಸರಿಯಾದ ಮಾಹಿತಿ ಸಿಗುವವರೆಗೂ ಕಾಯಬೇಕು ಅದುಬಿಟ್ಟು ಸುಮ್ಮನೆ ಕಾಂಟ್ರವರ್ಸಿ ಮಾಡಿಬಿಟ್ಟರೆ ಹೇಗೆ? ಎಂದು ಶಿವಣ್ಣ ಪ್ರಶ್ನಿಸಿದ್ದಾರೆ. ಮನುಷ್ಯರ ಭಾವನೆಗೆ ಅರ್ಥವೇನು? ಇದು ಸರಿ ಅದು ತಪ್ಪು ಎಂದು ಎರಡೂ ಮಾತನಾಡುತ್ತೀರಾ..ನೀವು ಅತಿ ಬುದ್ಧಿವಂತರು ಅಂದುಕೊಳ್ಳಬೇಡಿ ಅಥವಾ ನಾನು ಬುದ್ಧಿವಂತ ಅಂತ ಹೇಳುತ್ತಿಲ್ಲ ಎಂದು ಶಿವಣ್ಣ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+