Geetha Shivarajkumar: ಅಮೆರಿಕದಲ್ಲಿ ಗೀತಕ್ಕ ಮಾಡಿದ ಆ ಕೆಲಸಕ್ಕೆ ಫ್ಯಾನ್ಸ್‌ ಅಂದ್ರು 'ಶಿವುಗಾಗಿ ಗೀತಾ'

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ಸದ್ಯ ಅಮೇರಿಕಾದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಸರ್ಜರಿ ಯಶಸ್ವಿಯಾಗಿತ್ತು. ಒಂದು ತಿಂಗಳಮಟ್ಟಿಗೆ ಶಿವಣ್ಣ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಸರ್ಜರಿ ಬಳಿಕ ಶಿವಣ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು, ಸದ್ಯ ಅಮೇರಿಕಾದ ಬೀಚ್‌ವೊಂದಕ್ಕೆ ತೆರಳಿ ಜಾಲಿ ಮೂಡ್‌ನಲ್ಲಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಶಿವರಾಜ್ ಕುಮಾರ್ ಅವರು ಬೀಚ್‌ನಲ್ಲಿ ಎಂಜಾಯ್‌ ಮಾಡಿರುವ ಫೋಟೋಗಳು ವೈರಲ್‌ ಆಗಿವೆ. ಅಮೇರಿಕಾದ ಮಿಯಾಮಿ ಬೀಚ್‌ಗೆ ತೆರಳಿರುವ ಶಿವಣ್ಣ ಫೋಟೋಗಳಿಗೆ ಪೋಸ್‌ ಕೊಡುವ ಮೂಲಕ ಅಭಿಮಾನಿಗಳಲ್ಲಿ ಜೋಶ್‌ ಹೆಚ್ಚಿಸಿದ್ದಾರೆ. ಈ ಪೋಟೋಗಳನ್ನು ಕಂಡು ಶಿವಣ್ಣನಿಗೆ ವಯಸ್ಸೇ ಆಗಲ್ಲ ಅಂತಿದ್ದಾರೆ ಫ್ಯಾನ್ಸ್‌.

Actor Shivarajkumar And Wife Geetha Shivarajkumar Enjoy Beach Outing Post-Surgery In The US

ಶಿವರಾಜ್‌ಕುಮಾರ್‌, ಪತ್ನಿ ಗೀತಾ, ಪುತ್ರಿ ಹಾಗೂ ಆಪ್ತರು ಬೀಚ್‌ಗೆ ತೆರಳಿ ಚಿಲ್‌ ಮಾಡಿದ್ದಾರೆ. ಮತ್ತೊಂದು ವಿಡಿಯೋ ಕೂಡ ವೈರಲ್‌ ಆಗಿದ್ದು, ಇದರಲ್ಲಿ ಗೀತಕ್ಕ ಶಿವಣ್ಣ ಕ್ಯೂಟ್‌ ಫೋಟೋಗಳನ್ನು ತಮ್ಮ ಫೋನ್‌ನಲ್ಲಿ ಕ್ಲಿಕ್ಕಿಸುತ್ತಿದ್ದಾರೆ. ಇದಕ್ಕೆ ಶಿವಣ್ಣ ಸ್ಟೈಲಾಗಿ ನಿಂತು ಪೋಸ್‌ ನೀಡುತ್ತಿದ್ದಾರೆ. ಈ ವಿಡಿಯೋ ಸಖತ್‌ ವೈರಲ್‌ ಆಗಿದ್ದು, ಇದಪ್ಪಾ ಜನುಮದ ಜೋಡಿ ಎನ್ನುತ್ತಿದ್ದಾರೆ.

ವಜ್ರಕಾಯ ಸಿನಿಮಾದ "ರಾಮನಿಗಾಗಿ ಸೀತಾ...ಶಿವುಗಾಗಿ ಗೀತಾ" ಎನ್ನುವ ಸಾಲುಗಳನ್ನು ಹಾಕಿ ಈ ವಿಡಿಯೋಗೆ ಎಡಿಟ್‌ ಕೂಡ ಮಾಡಿದ್ದಾರೆ. ಶಿವಣ್ಣ ನಿಜಕ್ಕೂ ಗೀತಕ್ಕ ಅವರಂತಹ ಪತ್ನಿಯನ್ನು ಪಡೆಯಲು ಅದೃಷ್ಟ ಮಾಡಿದ್ದರು. ಈ ಜೋಡಿಗೆ ಯಾರ ದೃಷ್ಟಿಯೂ ತಾಗದಿರಲಿ ಎಂದು ಹಾರೈಸಿದ್ದಾರೆ. ಸರ್ಜರಿ ಯಶಸ್ವಿಯಾದ ಕಾರಣ ಶಿವಣ್ಣ ಮುಂದಿನ ವಾರ ಬೆಂಗಳೂರಿಗೆ ವಾಪಸ್‌ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Actor Shivarajkumar And Wife Geetha Shivarajkumar Enjoy Beach Outing Post-Surgery In The US

ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಶಿವಣ್ಣನಿಗೆ ಇತ್ತೀಚೆಗೆ ಸರ್ಜರಿ ನಡೆದಿತ್ತು. ಬಳಿಕ ಅವರಿಗೆ ಎರಡು ಬಾರಿ ಮೆಡಿಕಲ್‌ ಚೆಕಪ್‌ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದು, ಶಿವಣ್ಣ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ ಈ ತಿಂಗಳ ಕೊನೆಯ ವಾರದವರೆಗೂ ಶಿವಣ್ಣ ಅಮೇರಿಕಾದಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಜನವರಿ 26ರಂದು ಅವರು ಬೆಂಗಳೂರಿಗೆ ವಾಪಸ್‌ ಆಗಲಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಶಿವಣ್ಣ ಫುಲ್‌ ಆಕ್ಟಿವ್‌ ಆಗಿದ್ದು, ಡಿಸ್ಚಾರ್ಜ್‌ ಆದ ಬಳಿಕ ತಮ್ಮ ಕುಟುಂಬದವರೊಂದಿಗೆ ಸೆಲ್ಫಿಗೆ ಪೋಸ್‌ ನೀಡಿದ್ದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಆಪರೇಷನ್‌ ಬಳಿಕ ಮೊದಲ ಬಾರಿಗೆ ಶಿವಣ್ಣ ಹೊಸ ವರ್ಷದಂದು ವಿಡಿಯೋ ಶೇರ್‌ ಮಾಡಿಕೊಂಡು ಮಾತನಾಡಿದ್ದರು. ವಿಡಿಯೋದಲ್ಲಿ ಹೊಸ ವರ್ಷಕ್ಕೆ ಶುಭಕೋರಿದ್ದರು. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದಕ್ಕೆ ನಾನು ಚಿರಋಣಿ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದಿದ್ದರು.

ನನ್ನ ಆಪರೇಷನ್‌ ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳದಿರಿ. ಇದು ತುಂಬಾ ಸಿಂಪಲ್‌ ಆಗಿ ಆಪರೇಷನ್‌ ನಡೆದಿದೆ. ಆಪರೇಷನ್‌ ಬಗ್ಗೆ ವಿವರವಾಗಿ ಹೇಳಿದರೆ ಎಲ್ಲರೂ ಗಾಬರಿಯಾಗುತ್ತಾರೆ. ನಮ್ಮೆಲ್ಲಾ ಹಂತದಲ್ಲೂ ನಮ್ಮೊಂದಿಗೆ ನೀವಿದ್ದೀರಿ ಎನ್ನುವುದೇ ಖುಷಿ. ನಾನು ಶೀಘ್ರದಲ್ಲೇ ಹೊಸ ವರ್ಶನ್‌ನಲ್ಲಿ ನಿಮ್ಮ ಮುಂದೆ ಬರಲಿದ್ದೇನೆ ಎಂದು ಶಿವಣ್ಣ ಸಿಹಿಸುದ್ದಿ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+